ಪ್ರಧಾನಿ ಅಭ್ಯರ್ಥಿಯಾಗುತ್ತೇ‌ನೆ ಎಂದಿದ್ದರು, ಅದಕ್ಕೆ ಬಿಜೆಪಿಯವರೇ ಕೊಂದಿದ್ದಾರೆ : ಜಯಲಲಿತಾ ಸಾವಿನ ಬಗ್ಗೆ ಸ್ಪೋಟಕ ಹೇಳಿಕೆ..!

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ವಿಚಾರ ಇನ್ನು ಗುಟ್ಟಾಗಿಯೇ ಉಳಿದಿದೆ. ಆದರೆ ಡಿಎಂಕೆ ಪಕ್ಷದ ಶಾಸಕ ಮಾರ್ಕಂಡೇಯನ್ ಇದೀಗ ಜಯಲಲಿತಾ ಸಾವಿನ ಬಗ್ಗೆ ಮಾತನಾಡಿ, ಬಿಜೆಪಿಯೇ ಕಾರಣ ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಜಯಲಲಿತಾ ಅವರು ಸಾಯುವ ತನಕ ನಾನು ಅವರ ಜೊತೆಯಲ್ಲಿಯೇ ಒದ್ದೆ. ಅವರು ಯಾವಾಗಲೂ ಹೇಳುತ್ತಿದ್ದರು, ನಾನು ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು. ಇದನ್ನು ಸಹಿಸದ ಬಿಜೆಪಿಯೇ ಜಯಲಲಿತಾ ಅವರನ್ನು ಕೊಂದಿದೆ. ಪ್ರಧಾನಿ ಮೋದಿಯೇ ಜಯಲಲಿತಾ ಅವರ ಸಾವಿಗೆ ಕಾರಣ ಎಂದಿದ್ದಾರೆ.

ಜಯಲಲಿತಾ ಅವರ ಸಾವಿನ ಬಗ್ಗೆ ಮಾರ್ಕಂಡೇಯನ್ ಮಾಡಿರುವ ಆರೋಪ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ‌. ಬಿಜೆಪಿ ನಾಯಕ ಅಣ್ಣಾಮಲೈ ಅವರೇ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

The post ಪ್ರಧಾನಿ ಅಭ್ಯರ್ಥಿಯಾಗುತ್ತೇ‌ನೆ ಎಂದಿದ್ದರು, ಅದಕ್ಕೆ ಬಿಜೆಪಿಯವರೇ ಕೊಂದಿದ್ದಾರೆ : ಜಯಲಲಿತಾ ಸಾವಿನ ಬಗ್ಗೆ ಸ್ಪೋಟಕ ಹೇಳಿಕೆ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/JaDYXtk
via IFTTT

Leave a Reply

Your email address will not be published. Required fields are marked *