
ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ (Hockey World Cup 2023) ಚೊಚ್ಚಲ ಪಂದ್ಯದಲ್ಲೇ ಭಾರತ ಜಯಭೇರಿ ಬಾರಿಸಿದೆ. ಇಂದು(ಜನವರಿ 13)ಒಡಿಶಾದ ‘ರೂರ್ಕೆಲಾ’ದ ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ (Spain) ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಪುರುಷರ ಹಾಕಿ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
First game, first win.
Team India began the World Cup with a victory.
IND 2:0 ESP
#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @IndiaSports @Media_SAI pic.twitter.com/xq2PJ0QLdy
— Hockey India (@TheHockeyIndia) January 13, 2023
ಇದನ್ನೂ ಓದಿ: Hockey World Cup2023: ಇಂದಿನಿಂದ ಹಾಕಿ ವಿಶ್ವಕಪ್ ಆರಂಭ; ಮೊದಲ ದಿನದ ವೇಳಾಪಟ್ಟಿ, ಸಂಪೂರ್ಣ ವಿವರ ಇಲ್ಲಿದೆ
ಪಂದ್ಯ ಆರಂಭವಾದ 12ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಸಡಿಸಿದ ಗೋಲಿನಿಂದ ಭಾರತ ಖಾತೆ ತೆರೆಯಿತು. ಇದರೊಂದಿಗೆ ಭಾರತ ಪಂದ್ಯದ ಆರಂಭದಲ್ಲಿ ಬಿಗಿ ಹಿಡಿತ ಸಾಧಿಸಿತು. ಮೊದಲ ಗೋಲಿನಿಂದ 1-0 ಅಂತರದ ಮುನ್ನಡೆ ಪಡೆದ ಭಾರತ 26ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಎರಡನೇ ಗೋಲು ಸಿಡಿಸಿದರು. ಇದರೊಂದಿಗೆ ಭಾರತ 2-0 ಅಂತರದ ಮುನ್ನಡೆ ಪಡೆಯಿತು. ಆದ್ರೆ ಬಲಿಷ್ಠ ಸ್ಪೇನ್ ಯಾವುದೇ ಗೋಲು ಬಾರಿಸದೆ ಭಾರತ ವಿರುದ್ಧ 2-0 ಅಂತರದಿಂದ ಸೋಲೊಪ್ಪಿಕೊಂಡಿತು.
ಮತ್ತಷ್ಟು ಕ್ರೀಡೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



IND 2:0 ESP 