ಗುರು-ಶಿಷ್ಯ ಪರಂಪರೆಯ ಕುರಿತು ಚೇತನ್ ಸಿ. ರಾಯನಹಳ್ಳಿ ಅವರ ವಿಶೇಷ ಲೇಖನ.
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಪುರಂದರದಾಸರು ಹೇಳಿರುವ ಸಾಲು ಗುರುವಿನ ಮಹತ್ವವನ್ನು ಸಾರುತ್ತದೆ. ಗುರುಪರಂಪರೆಯಿAದ ನಮ್ಮ ಈ ಭೂಮಿಯಲ್ಲಿ ಅವನನ್ನು ಉನ್ನತಸ್ಥಾನದಲ್ಲಿರಿಸಲಾಗಿದೆ.
ಗುರು ಬದುಕಿನ ಗುರಿಯೆಡೆಗೆ ಮಾರ್ಗವನ್ನು ತೋರುತ್ತಾನೆ. ಬೆನ್ನಹಿಂದೆ ನಿಂತು ಮಾರ್ಗದರ್ಶನ ಮಾಡುತ್ತಾನೆ. ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುವವ ಗುರು. ಆತ ಹೇಳಿದ್ದನ್ನು ಕೇಳುತ್ತಾ ಹೋದರೆ ಸಾಕು ನಾವು ಸನ್ಮಾರ್ಗದಲ್ಲಿ ಸಾಗಿದಂತೆಯೇ ಸರಿ. ‘ಗು’ ಎಂದರೆ ಅಂಧಕಾರ. ‘ರು’ ಎಂದರೆ ಹೋಗಲಾಡಿಸುವವನು. ‘ಗುರು’ ಎಂದರೆ ಅಂಧಕಾರವನ್ನು ಹೋಗಲಾಡಿಸುವವನು ಎಂದು ಅರ್ಥ. ತನ್ನ ಬಳಿಗೆ ಕಲಿಕೆಗಾಗಿ ಬರುವವರ ಬದುಕಿನ ಅಂಧಕಾರ ಕಳೆಯುವ ಪ್ರಮುಖ ಕೆಲಸ ಮಾಡುವವನೇ ಗುರು.
ಗುರುಕುಲ ಪದ್ಧತಿಯಲ್ಲಿ ಬಡವ, ಶ್ರೀಮಂತರೆAದೆಣಿಸದೆ ಎಲ್ಲರಿಗೂ ಒಂದೇ ರೀತಿಯಲ್ಲಿ ನೋಡಲಾಗುತ್ತಿತ್ತು. ಗುರುವಿನ ಬಳಿ ಕಲಿಯಲು ಸಕಲವನ್ನು ತೊರೆದು ಬರಬೇಕಿತ್ತು. ಅವರು ಹೇಳುವ ಕೆಲಸವನ್ನು ಮರುಮಾತಿಲ್ಲದೇ ನಡೆಸಬೇಕಿತ್ತು. ಸರ್ವರಿಗೂ ಒಂದೇ ರೀತಿಯ ಅವಕಾಶ ನೀಡಿ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಉತ್ತಮ ಶಿಷ್ಯನನ್ನು ಆರಿಸಿಕೊಳ್ಳುತ್ತಿದ್ದರು. ‘ಹರಮುನಿದೊಡೆ ಗುರು ಕಾಯುವನು. ಗುರು ಮುನಿದೊಡೆ ಹರ ಕಾಯುವನೇ!?’ ಎಂಬ ಮಾತು ಚಿಂತನೀಯ. ದೇವರು ಏನಾದರೂ ತನ್ನ ಮೇಲೆ ಮುನಿಸಿಕೊಂಡರೆ ತನ್ನನ್ನು ಕಾಪಾಡಲು ಗುರು ಜೊತೆಗಿರುತ್ತಾನೆ. ಆದರೆ ಗುರುವೇ ನನ್ನ ಮೇಲೆ ಮುನಿಸಿಕೊಂಡರೆ ದೇವರು ಬಂದರೂ ಏನು ಮಾಡಲಾಗುವುದಿಲ್ಲ ಎಂಬುದನ್ನು ಈ ಸಾಲುಗಳು ಗುರುವಿನ ಮಹತ್ವವನ್ನು ನಿರ್ದೇಶಿಸುತ್ತವೆ. ‘ಗುರು’ ಇಂದಿಗೆ, ಈ ಕ್ಷಣಕ್ಕೆ ಫಲದೊರಕುವಂತೆ ಮಾಡುವವನಲ್ಲ. ತನ್ನ ಶಿಷ್ಯವೃಂದ ಮುಂದಿನ ದಿನಗಳಲ್ಲೂ, ತಾನು ಇಲ್ಲದಿದ್ದರೂ ಅವರನ್ನು ಸದೃಢರನ್ನಾಗಿ ಮಾಡುವಲ್ಲಿ ಆತನ ಪಾತ್ರ ಹಿರಿದು. ಹಿಂದಿನ ದಿನಗಳಲ್ಲಿ ಗುರುಗಳನ್ನು ಕಣ್ಣುಮುಚ್ಚಿಕೊಂಡು ನಂಬಿ ಆತ ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುತ್ತಾನೆ. ಎನ್ನುತ್ತಿದ್ದರು. ಇದು ಕುರುಡುನಂಬಿಕೆಯಲ್ಲ ಗುರುವಿನ ಮೇಲಿರುವ ಅಚಲ ವಿಶ್ವಾಸವಾಗಿತ್ತು.
ಗುರು ಮತ್ತು ಶಿಕ್ಷಕ ಎನ್ನುವ ನಡುವೆ ಸಣ್ಣ ಅಂತರದ ಗೆರೆ ಇದೆ. ಶಾಲೆಯಲ್ಲೋ, ಕಾಲೇಜಿನಲ್ಲೋ ಪಾಠ ಮಾಡುವಾಗ ಆ ವಿದ್ಯಾರ್ಥಿಯ ಬೆಳವಣಿಗೆ ಆಗು-ಹೋಗುಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಅಂತಿಮವಾಗಿ ಪರೀಕ್ಷ, ಫಲಿತಾಂಶ ದ ಮೂಲಕ ಆ ವಿದ್ಯಾರ್ಥಿಯನ್ನು ಅಭಿನಂದಿಸಿ ಆತನನ್ನು ಮುಂದಿನ ಹಂತಕ್ಕೆ ಕಳಿಸಿದರೆ ಮುಗಿಯಿತು. ಎನ್ನುವುದಾದರೆ, ಗುರುವಾದವನು ತನ್ನ ಶಿಷ್ಯನ ಸಂಪೂರ್ಣ ಜೀವನದ ಬಗ್ಗೆ ಯೋಚಿಸುತ್ತಾನೆ. ತನ್ನೆಲ್ಲಾ ಜ್ಞಾನವನ್ನು ಧಾರೆಯೆರೆಯುತ್ತಾನೆ. ಎಲ್ಲೋ ಕೆಲವು ಶಿಕ್ಷಕರಿಗೆ ಮಾತ್ರ ಗುರುವಾಗಿ ಇರಲು ಸಾಧ್ಯವಿದೆ. ಗುರುಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದು ಆಚರಿಸುವುದರ ಹಿಂದೆ ಇರುವ ಸತ್ಯವೇ ಸಕಲವೇದಗಳನ್ನು ಸರಿಯಾಗಿ ಹಂಚಿ ಅದನ್ನು ತನ್ನ ಶಿಷ್ಯರಿಂದ ಸಂರಕ್ಷಿಸಿ ಮುಂದಿನವರಿಗೆ ತಿಳಿಸಲು ಸಹಕಾರಿಯಾದ ಕಾರಣ ವೇದವ್ಯಾಸರು ಅವತರಿಸಿದ ಈ ಸಮಯವನ್ನು ವ್ಯಾಸ ಪೂರ್ಣಿಮಾ ಎಂದೂ ಆಚರಿಸುತ್ತಾರೆ.
ರಾಮಕೃಷ್ಣಪರಮಹಂಸರು ತನ್ನ ಶಿಷ್ಯರಾದ ಸ್ವಾಮಿವಿವೇಕಾನಂದರಿಗೆ ಎಲ್ಲವನ್ನು ಧಾರೆ ಎರೆದು ಪರಂಪರೆಯನ್ನು ಮುಂದುವರೆಸಿಕೊAಡು ಹೋಗಲು ತಿಳಿಸುತ್ತಾರೆ. ಇಲ್ಲಿ ಗುರು ಮತ್ತು ಶಿಷ್ಯರ ನಡುವೆ ಇರುವ ನಂಬಿಕೆ ಪ್ರಮುಖವಾದದ್ದು. ‘ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು’ ಎಂಬುದು ಗುರಿಯೆಡೆಗೆ ಕರೆದೊಯ್ಯುವ ಗುರುವಿನ ಅಭಯದ ಬಗ್ಗೆ ತಿಳಿಸುತ್ತದೆ. ನನ್ನ ಹಿಂದೆ ಗುರು ಇದ್ದಾನೆ. ನನ್ನನ್ನು ಕಷ್ಟಗಳಿಂದ ಪಾರು ಮಾಡುತ್ತಾನೆ, ಕಷ್ಟಗಳೇ ಬರದಂತೆ ನೋಡಿಕೊಳ್ಳುತ್ತಾನೆ, ಬಂದರೂ ಅದನ್ನು ಎದುರಿಸುವ ಮಾರ್ಗದರ್ಶನ ಮಾಡುತ್ತಾನೆ, ಆತನ ಆಶೀರ್ವಾದವೇ ಸಾಕೆನಗೆ ಎಂದು ಮುಂದೆ ಸಾಗಿದರೆ ಜಯ ನಿಶ್ಚಿತ.
ಒಂದು ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ, ‘ಗುರು ಬ್ರಹ್ಮ, ಗುರು ವಿಷ್ಣು…’ ಎನ್ನುವ ಸಾಲುಗಳನ್ನು ಹೇಳಿದಾಗ, ಕಾರ್ಯಕ್ರಮ ಮುಗಿದಾಗ ಜೊತೆಗಿದ್ದ ಹಿರಿಯರು ಆ ಸಾಲುಗಳನ್ನು ಹೇಳಿದವರನ್ನು ಕರೆದು, ‘ನೀವು ಹೇಳಿದ್ದು ತಪ್ಪಿದೆ ಅದು ಗುರುರ್ ಬ್ರಹ್ಮ, ಗುರುರ್ ವಿಷ್ಣು, ಗುರುರ್ ದೇವೋ ಮಹೇಶ್ವರಃ, ಗುರುರ್ ಸಾಕ್ಷಾತ್ ಪರಬ್ರಹ್ಮ ತಸ್ಮೆöÊಶ್ರೀ ಗುರವೇ ನಮಃ’ ಎಂದು ಆಗಬೇಕು. ಎಲ್ಲೂ ನಾವು ಗುರು ಎಂದು ಕರೆಯುವಷ್ಟು ದೊಡ್ಡವರಲ್ಲ, ಹಾಗಾಗಿ ಗುರುರ್ ಎಂಬು ಸಂಬೋಧಿಸಬೇಕು’ ಎಂದು ತಿಳಿಸಿದರು.
ದಿನನಿತ್ಯ ಅದೆಷ್ಟೋ ಬಾರಿ ಈ ಶ್ಲೋಕವನ್ನು ತಪ್ಪಾಗಿಯೇ ಹಾಡುತ್ತಿರುತ್ತೇವೆ. ಇನ್ನಾದರೂ ಸರಿ ಮಾಡಿಕೊಳ್ಳೋಣ. ಗುರುವಿನ ಮುಂದೆ ನಾನೊಂದು ಸೊನ್ನೆ ಎಂದು ತಿಳಿದು ಕಲಿಯೋಣ ಆತ ಆ ಸೊನ್ನೆ ಹಿಂದೆ ಮುಂದೆ ಇತರ ಅಕ್ಷರಗಳನ್ನೋ, ಸಂಖ್ಯೆಗಳನ್ನೋ ಹಾಕಿಯೇ ಹಾಕುತ್ತಾನೆ. ಗುರುವಿನ ಪಾದದಡಿಯಲ್ಲಿ ಸ್ವರ್ಗ ಕಂಡುಕೊAಡವರು ಎಲ್ಲರ ಬಾಳಲ್ಲೂ ಸ್ವರ್ಗವನ್ನು ಸೃಷ್ಟಿಸುವವರೇ ಆಗುವರು ಅದರಲ್ಲಿ ಅನುಮಾನವೇ ಇಲ್ಲ ಎನ್ನುತ್ತ, ಅರಿವಿನ ಗುರುವನ್ನು ತಿಳಿಸಿದ, ಬದುಕಿನ ಪ್ರತಿಹಂತದಲ್ಲೂ ಮಾರ್ಗದರ್ಶನ ಮಾಡುತ್ತ, ಅರಿವನ್ನು ಮೂಡಿಸುತ್ತಿರುವ ಎಲ್ಲಾ ಗುರುವೃಂದಕ್ಕೂ ಶಿರಸಾನಮಾಮಿ. ಧನ್ಯೋಸ್ಮಿ…

ಚೇತನ್ ಸಿ ರಾಯನಹಳ್ಳಿ
ಗ್ರಂಥಪಾಲಕರು
ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆ, ಚಿತ್ರದುರ್ಗ