ಚಿತ್ರದುರ್ಗ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ರೊ. ಯೋಗೀಶ್ ಸಹ್ಯಾದ್ರಿ: ಜು.12ರಂದು ಪದಗ್ರಹಣ ಸಮಾರಂಭ.

ಚಿತ್ರದುರ್ಗ ಜು. 11

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಪ್ರತಿಷ್ಠಿತ ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ನೂತನ ಅಧ್ಯಕ್ಷರಾಗಿ ಇಂಗ್ಲಿಷ್ ಉಪನ್ಯಾಸಕರಾದ ರೊ. ಯೋಗೀಶ್ ಸಹ್ಯಾದ್ರಿ ಅವರು ಜು.12ರ ಭಾನುವಾರ ಬೆಳಗ್ಗೆ 11.00 ಗಂಟೆಗೆ ನಗರದ ಡಿ.ಸಿ. ಸರ್ಕಲ್ ನಲ್ಲಿ ಇರುವ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ರೋಟರಿ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ.

ಈ ಸಮಾರಂಭದಲ್ಲಿ ್ಲ ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಎಲೆಕ್ಟ್ ರೊ. ಪಿ.ಹೆಚ್.ಎಫ್. ಡಾ. ತ್ರಿವಿಕ್ರಮ್ ಜೋಷಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಯೋಗೀಶ್ ಸಹ್ಯಾದ್ರಿ ಅವರು ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿಯಾಗಿ,ನಗರದ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರಾಗಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಜಿಲ್ಲೆಯ ಹಲವಾರು ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇವರು ಶೈಕ್ಷಣಿಕ ಕಾರ್ಯಗಳ ಜೊತೆ ಜೊತೆಗೆ ಪುಸ್ತಕಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದೀಗ ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ವಿದ್ಯಾನಗರದ ರೊ. ಮಂಜುನಾಥ್ ಕೆ ಜಿ ಇವರು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ರೋ.ಐಪಿಡಿಜಿ ಎಂ.ಕೆ.ರವೀಂದ್ರ, ರೋ.ಪಿಡಿಜಿ ಪಿ.ಎಸ್.ಶಂಭುಲಿಂಗಪ್ಪ, ಹಾಗೂ ರೋ.ಕೆ.ಮಧುಪ್ರಸಾದ್ ಹಾಲಿ ಅಧ್ಯಕ್ಷರಾದ ರೋ.ಎ.ಎಂ. ಭಾಗ್ಯ ಲಕ್ಷ್ಮೀ, ಕಾರ್ಯದರ್ಶಿ ರೋ. ಜಿ.ವಿ.ಅನುರಾಧ ಭಾಗವಹಿಸಲಿದ್ದಾರೆ. ಕ್ಲಬ್ ಬುಲೆಟಿನ್‍ನ್ನು ರೋ. ಪಿ.ಎಚ್.ಎಫ್. ಸವಿತಾ ಶಿವಕುಮಾರ್ ನೆಡೆಸಿಕೊಡಲಿದ್ದಾರೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *