IPL 2023: CSK 5ನೇ ಬಾರಿ ಚಾಂಪಿಯನ್ಸ್​…ಗಂಭೀರ್ ಹೇಳಿದ್ದೇನು?

IPL 2023 CSK vs GT: ಐಪಿಎಲ್​ನ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಸಿಎಸ್​ಕೆ ಪಾತ್ರವಾಗಿದೆ.ಇದಕ್ಕೂ ಮುನ್ನ ಐಪಿಎಲ್​ನಲ್ಲಿ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದು ಮುಂಬೈ ಇಂಡಿಯನ್ಸ್ ಮಾತ್ರ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಸಾಧನೆ ಮಾಡಿರುವುದು ವಿಶೇಷ.
ಸಿಎಸ್​ಕೆ ತಂಡದ ಈ ಸಾಧನೆ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಮಾಡಿರುವ ಟ್ವೀಟ್​ವೊಂದು ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಧೋನಿ ವಿಷಯದಲ್ಲಿ ತುಸು ಸದಾ ವಿವಾದಾತ್ಮಕ ಟ್ವೀಟ್​ಗಳ ಮೂಲಕ ಗಮನ ಸೆಳೆಯುವ ಗೌತಿ ಈ ಬಾರಿ ಎಲ್ಲರ ಮನಗೆದ್ದಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ಒಂದು ಕಪ್ ಗೆಲ್ಲುವುದೇ ಕಷ್ಟ. ಅಂತದ್ರಲ್ಲಿ 5 ಕಪ್ ಗೆದ್ದಿದ್ದಾರೆ ಎಂದರೆ ನಂಬಲಸಾಧ್ಯ. ಚೆನ್ನೈ ಸೂಪರ್ ಕಿಂಗ್ಸ್​​ಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಇದೀಗ ಗಂಭೀರ್ ಅವರ ಟ್ವೀಟ್​ಗೆ ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.ಇನ್ನು ಐಪಿಎಲ್ ಇತಿಹಾಸದಲ್ಲೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊರತುಪಡಿಸಿದರೆ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದಿರುವುದು ಕೊಲ್ಕತ್ತಾ ನೈಟ್ ರೈಡರ್ಸ್​ ತಂಡ. ಅದು ಕೂಡ ಗೌತಮ್ ಗಂಭೀರ್ ನಾಯಕತ್ವದಲ್ಲಿ ಎಂಬುದು ವಿಶೇಷ.2012 ಹಾಗೂ 2104 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 2 ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದಾದ ಬಳಿಕ ಕೆಕೆಆರ್ ಟ್ರೋಫಿ ಗೆದ್ದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

source https://tv9kannada.com/photo-gallery/cricket-photos/ipl-2023-gautam-gambhir-praising-champions-csk-kannada-news-zp-590335.html

Leave a Reply

Your email address will not be published. Required fields are marked *