
ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಸೋದರಳಿಯನಿಗೆ ಬಂಪರ್ ಆಫರ್ ಒದಗಿ ಬಂದಿದೆ. ಮಯಾಂಕ್ ದಾಗರ್ ದೆಹಲಿಯ ಆಲ್ ರೌಂಡರ್ ಆಗಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್ ಇವರನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ.
ಈ ಬಾರಿ ಮಿನಿ ಹರಾಜಿನಲ್ಲಿ ಒಟ್ಟು 405 ಆಟಗಾರರನ್ನು ಕೊಂಡುಕೊಳ್ಳಲಾಗಿದೆ. ಅದರಲ್ಲಿ 21 ಮಂದಿ ಭಾರತೀಯ ಆಟಗಾರರಾಗಿದ್ದಾರೆ, 29 ಮಂದಿ ವಿದೇಶ ಆಟಗಾರರಾಗಿದ್ದಾರೆ. 80 ಆಟಗಾರರು ಪ್ರಾಂಚೈಸಿ ಪಡೆದುಕೊಂಡಿದ್ದಾರೆ.
ಮಯಾಂಕ್ ದಾಗರ್ ಬಿಡ್ಡಿಂಗ್ ವೇಳೆ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅವರ ಮೂಲ ಬೆಲೆ 20 ಲಕ್ಷ ರೂ. ಅದರ ಮೇಲೆ ಹೈದರಾಬಾದ್ ಬಿಡ್ ಮಾಡಿತು. ನಂತರ ರಾಜಸ್ಥಾನ 25, 35, 95 ಲಕ್ಷದವರೆಗೆ ಬಿಡ್ ಮಾಡಿತು. ಹೈದರಾಬಾದ್ ಅಂತಿಮವಾಗಿ ರೂ.1.8 ಕೋಟಿ ಬಿಡ್ನೊಂದಿಗೆ ಖರೀದಿಸಿತು.
The post ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯ : 405ರಲ್ಲಿ 51 ಭಾರತೀಯರು first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/wB2uUca
via IFTTT