ಚಿತ್ರದುರ್ಗ ಸೆ. 17
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದನೆ ನೀಡಿಲ್ಲ, ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಇದರ ಬಗ್ಗೆ ಮಾತು ಕಥೇಗೂ ಸಹಾ ಕರೆದಿಲ್ಲ ಇದರಿಂದ ಸೆ. 18 ರಿಂದ ರಾಜ್ಯದ್ಯಾಂತ ಕ್ರಷರ್ ಉತ್ಸಾದನೆ ಹಾಗೂ ಮಾರಾಟ ವನ್ನು ನಿಲ್ಲಿಸಲಾಗುವುದು ಎಂದು ಸರ್ಕಾರಕ್ಕೆ ಜಿಲ್ಲಾ ಕ್ವಾರೆ ಮತ್ತು ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಂಟ್ರಾಕ್ಟರ್ ಮತ್ತು ಕ್ರಷರ್ ಇಬ್ಬರ ಬಳಿಯೂ ಸರ್ಕಾರ ರಾಯಲ್ಟಿ ಸಂಗ್ರಹಿಸುತ್ತಿದೆ. ಇಂತಹ ದ್ವಿಮುಖ ನೀತಿಯಿಂದ ನಮಗೆ ನಷ್ಟವಾಗುತ್ತಿದೆ. 44 ಎ. ಕಾಯಿದೆಯನ್ನು ಸರ್ಕಾರ ಹಿಂದಕ್ಕೆ ಪಡೆದು ಒಂದೆ ನೀತಿ ಅನುಸರಿಸಲಿ ಎಂದು ಸರ್ಕಾರವನ್ನು ಕೋರಿದ್ದವು ಒಂದು ವರ್ಷದಿಂದ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ ಸರ್ಕಾರ ಇದಕ್ಕೆ ಯಾವುದೇ ರೀತಿಯಿಂದಲೂ ಉತ್ತರವನ್ನು ನೀಡಿಲ್ಲ ಆಂಧ್ರ ತಮಿಳುನಾಡಿನಿಂದ ಕರ್ನಾಟಕಕ್ಕೆ ಜೆಲ್ಲಿಗಳು ಬರುತ್ತಿವೆ. ಆದರೆ ಅವರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿ ಯಾಗುತ್ತಿಲ್ಲ. ಸರ್ಕಾರಕ್ಕೆ ಸಂದಾಯವಾಗಬೇಕಾದ ರಾಯಲ್ಟಿ ಎಲ್ಲಾ ಹೋಗಿದೆ. ಆದರೂ ನಮಗೆ ಕಿರುಕುಳ ನಿಂತಿಲ್ಲ. ಸಾಲ ತೀರಿಸಲಾಗದೆ ರೈತ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೋ ಅದೇ ರೀತಿ ಕ್ರಷರ್ ರವರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆಂದು ಎಂದು ತಿಳಿಸಿದರು.
ರಾಜ್ಯ ಸರ್ಕಾರ 44 ಎ. ಕಾಯಿದೆಯನ್ನು ಹಿಂದಕ್ಕೆ ಪಡೆದು ನಮ್ಮನ್ನು ಕರೆಸಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಆ. 10ರ ನಂತರ ಕ್ರಷರ್‍ಗಳನ್ನು ನಿಲ್ಲಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಂದು ಎಚ್ಚರಿಕೆಯನ್ನು ಸಹಾ ನೀಡಲಾಗಿತ್ತು ಆದರೂ ಸಹಾ ಸರ್ಕಾರ ನಮ್ಮ ಬಗ್ಗೆ ಯಾವ ಕಾಳಜಿಯನ್ನು ಸಹಾ ತೋರಿಲ್ಲ ಈ ಹಿನ್ನಲೆಯಲ್ಲಿ ಸೆ.18 ರಿಂದ ರಾಜ್ಯದಲ್ಲಿ ಕ್ರಷರ್ ಮಾಲಿಕರು ತಮ್ಮ ಉತ್ಪನ್ನವನ್ನು ನಿಲ್ಲಿಸಲಿದ್ದಾರೆ ಕಲ್ಲು ಗಣಿಗೆ ಸಂಬಂಧಿಸಿದಂತೆ ಡಿ.ಎಂ.ಜಿ. ಕಡೆಯಿಂದ ಪ್ರತಿ ವರ್ಷ ಆಡಿಟ್ ಆಗುತ್ತಿರುವುದರಿಂದ ಕೆ.ಇ.ಬಿ. ಬಿಲ್ ಪಾವತಿಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು. ಜಿ.ಎಸ್.ಟಿ. ರೂಲ್ಸ್ ಪ್ರಕಾರ ಐವತ್ತು ಸಾವಿರ ರೂ.ಗಳ ಒಳಗಡೆ ಜಿ.ಎಸ್.ಟಿ. ಬಿಲ್ ಇದ್ದರೆ ಈ-ವೇ ಬಿಲ್ ಅವಶ್ಯಕತೆಯಿರುವುದಿಲ್ಲ. ಎಂದು ಕಾನೂನು ಹೇಳುತ್ತದೆ. ಆದರೆ ಡಿ.ಎಂ.ಜಿ. ಇಲಾಖೆಯವರು ನಮ್ಮ ಸರಕು ಸಾಗಾಣಿಕೆ ಮಾಡುವ ಬಿಲ್ಲಿನ ಮೊತ್ತ ಎರಡು ಸಾವಿರ ರೂ.ಗಳಿಂದ ಹದಿನೈದು ಸಾವಿರ ರೂ. ಒಳಗಡೆಯಿರುತ್ತದೆ. ಈಗಿರುವಾಗ ಈ-ವೇ ಬಿಲ್ ಅಗತ್ಯವಿಲ್ಲ. ಆದ್ದರಿಂದಈ-ವೇಬಿಲ್‍ಪದ್ದತಿಯನ್ನು ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಹೊರ ರಾಜ್ಯದಿಂದ ಬರುವ ಜೆಲ್ಲಿಗೆ ನಮ್ಮ ರಾಜ್ಯ ಸರ್ಕಾರ ತೆರಿಗೆ ವಸೂಲಿ ಮಾಡುತ್ತಿಲ್ಲ. ನಮ್ಮ ಉದ್ದಿಮೆಯ ಮೇಲೆ ಸರ್ಕಾರ ಇಲ್ಲ ಸಲ್ಲದ ಕಾನೂನುಗಳನ್ನು ಜಾರಿಗೊಳಿಸಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್‍ಗಳಿಗೆ ದಂಡ ವಿಧಿಸುತ್ತಿರುವುದನ್ನು ತಕ್ಷಣವೆ ನಿಲ್ಲಿಸಬೇಕು. ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ಕಾನೂನು ಬದ್ದವಾಗಿ ಎಂ.ಡಿ.ಪಿ, ಜಿಎಸ್ಟಿ. ಮುಖಾಂತರ ಸರಕು ಪಡೆದು ಕ್ರಷಿಂಗ್ ಮಾಡಿ ಸಾಗಾಣಿಕೆ ಮಾಡುತ್ತಿದ್ದೇವೆಂದು ತಿಳಿಸಿದರು.
ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಂಜನ್, ಸಂದೀಪ್ ಗುಂಡಾರ್ಪಿ, ಜಿ.ಬಿ. ಶೇಖರ್, ಆಶ್ವತ್‍ರೆಡ್ಡಿ, ವೀರಭದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j