ಹಾಲಿನ ದರ ಲೀಟರ್‌ಗೆ ₹8 ಏರಿಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಹನುಮಂತೇಗೌಡ ಆಕ್ರೋಶ.

ಕಾಂಗ್ರೆಸ್ ಸರ್ಕಾರದಿಂದ ಜನರ ಜೇಬಿಗೆ ಕನ್ನ : ಹಾಲಿನ ಪ್ರೋತ್ಸಾಹ ಧನದ ಹೆಸರಲ್ಲಿ ಲೂಟಿ

ಚಿತ್ರದುರ್ಗ ಅ. 31

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಹಾಲಿನ ಪ್ರೋತ್ಸಾಹ ಧನವಾಗಿ ಪ್ರತಿ ಲೀಟರ್‍ಗೆ 7 ರೂಪಾಯಿ ನೀಡಲಾಗು ವುದು ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ, ಇಂದು ಅಧಿಕಾರಕ್ಕೆ ಬಂದ ಮೇಲೆ ಆ ಹಣವನ್ನು ಸರ್ಕಾರ ತನ್ನ ಬೊಕ್ಕಸದಿಂದ ನೀಡದೆ, ಜನಸಾಮಾನ್ಯರ ಮೇಲೆಯೇ ದರ ಏರಿಕೆಯ ಹೊರೆ ಹಾಕಿ ವಸೂಲಿ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಹನುಮಂತೇಗೌಡ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಹಾಲಿನ ದರ ಏರಿಕೆಯ ಬಗ್ಗೆ ಹೇಳಿಕೆಯನ್ನು ನೀಡಿದ ಅವರು, ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‍ಗೆ 7 ರೂಪಾಯಿ ಪ್ರೋತ್ಸಾಹ ಧನ ನೀಡುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ ಸರ್ಕಾರ ತನ್ನ ಸ್ವಂತ ಬೊಕ್ಕಸದಿಂದ ಸಹಾಯಧನ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪ್ರೋತ್ಸಾಹ ಧನದ ಹೆಸರಿನಲ್ಲಿ ಸರ್ಕಾರ ಹಾಲಿನ ದರವನ್ನು ಹೆಚ್ಚಿಸುವ ಮೂಲಕ ಸಾಮಾನ್ಯ ಜನರಿಂದಲೇ ಹಣವನ್ನು ವಸೂಲಿ ಮಾಡಿ ರೈತರಿಗೆ ಕೊಡುವ ತಂತ್ರ ಅನುಸರಿಸುತ್ತಿದೆ. ಇದು ಜನಸಾಮಾನ್ಯರ ಜೇಬಿಗೆ ನೇರವಾಗಿ ಕನ್ನ ಹಾಕಿದಂತೆ ಎಂದು ದೂರಿದ್ದಾರೆ.

ಹೈನುಗಾರಿಕೆಯನ್ನು ನಂಬಿರುವ ರೈತರಿಗೆ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯ. ಸರ್ಕಾರ ತನ್ನ ಬೊಕ್ಕಸದಿಂದಲೇ ಈ ಹಾಲಿನ ಸಬ್ಸಿಡಿ ಮೊತ್ತವನ್ನು ಭರಿಸಬೇಕೇ ಹೊರತು, ಹಾಲಿನ ಬೆಲೆ ಏರಿಸಿ ಅದರ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ಹಾಕುವುದು ನ್ಯಾಯವಲ್ಲ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತಂಗೆಟ್ಟಿರುವ ಸಾಮಾನ್ಯ ಜನರಿಗೆ, ಹಾಲಿನ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಖಜಾನೆ ಖಾಲಿ ಮಾಡಿಕೊಂಡಿರುವ ಸರ್ಕಾರ, ಈಗ ಎಲ್ಲ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 5 ದರ ಏರಿಕೆಗಳ ಸಂಪೂರ್ಣ ವಿವರ ಇಲ್ಲಿದೆ:
ನವೆಂಬರ್ 2022: ಪ್ರತಿ ಲೀಟರ್‍ಗೆ 3 ಏರಿಕೆ.
ಜುಲೈ 2023: ಪ್ರತಿ ಲೀಟರ್‍ಗೆ 3 ಏರಿಕೆ.

ಜೂನ್ 2024: ಪ್ರತಿ ಲೀಟರ್‍ಗೆ 2 ಏರಿಕೆ (50 ಮಿ.ಲೀ ಹೆಚ್ಚುವರಿ ಹಾಲಿನ ಪ್ರಮಾಣದೊಂದಿಗೆ).
ಮಾರ್ಚ್ 2025: ಪ್ರತಿ ಲೀಟರ್‍ಗೆ 4 ಏರಿಕೆ.
ಅಕ್ಟೋಬರ್ 2026 (ನವೆಂಬರ್ 1 ರಿಂದ ಅನ್ವಯ): ಪ್ರತಿ ಲೀಟರ್‍ಗೆ ದಾಖಲೆಯ 8 ಏರಿಕೆ
(ಇದರಲ್ಲಿ 7 ನೇರವಾಗಿ ಹೈನುಗಾರ ರೈತರಿಗೆ ಹಾಗೂ 1 ಹಾಲು ಒಕ್ಕೂಟಗಳಿಗೆ ಸಿಗಲಿದೆ)

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು 📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *