ಪ್ರವಾಸೋದ್ಯಮ ಕ್ಷೇತ್ರದ ಸಾಧಕರಿಗೆ ಸುವರ್ಣಾವಕಾಶ: ‘ಕರ್ನಾಟಕ ಟೂರಿಸಂ ಅವಾರ್ಡ್ಸ್ 2026’ ನಾಮನಿರ್ದೇಶನ ಆರಂಭ.

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ಪ್ರವಾಸೋದ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಂಸ್ಥೆಗಳು, ಉದ್ಯಮಿಗಳು ಹಾಗೂ ವ್ಯಕ್ತಿಗಳನ್ನು ರಾಜ್ಯಮಟ್ಟದಲ್ಲಿ ಗುರುತಿಸಲು ‘ಕರ್ನಾಟಕ ಟೂರಿಸಂ ಅವಾರ್ಡ್ಸ್‌ 2026’ ಆಯೋಜಿಸಲಾಗಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಪ್ರಕಟಿಸಿದ್ದಾರೆ.

ಕರ್ನಾಟಕ ಟೂರಿಸಂ ಸೊಸೈಟಿ (KTS) ಸಹಯೋಗದೊಂದಿಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದ್ದು, ರಾಜ್ಯದ ‘One State, Many Worlds’ ಬ್ರ್ಯಾಂಡ್‌ ಪರಿಕಲ್ಪನೆಯಡಿ ನಾಡಿನ 31 ಜಿಲ್ಲೆಗಳಲ್ಲಿನ ಪ್ರವಾಸೋದ್ಯಮ ಕ್ಷೇತ್ರದ ಸಾಧನೆಗಳನ್ನು ಗುರುತಿಸುವ ಉದ್ದೇಶವನ್ನು ಹೊಂದಲಾಗಿದೆ. ಸೇವಾ ಗುಣಮಟ್ಟ, ನಾವೀನ್ಯತೆ, ಸುಸ್ಥಿರತೆ ಹಾಗೂ ಸ್ಥಳೀಯ ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

5 ಪ್ರಮುಖ ವಿಭಾಗಗಳಲ್ಲಿ 35 ಪ್ರಶಸ್ತಿಗಳು ಒಟ್ಟು 35 ಪ್ರಶಸ್ತಿಗಳನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ನೀಡಲಾಗುತ್ತದೆ:

  • ವಸತಿ ಮತ್ತು ಆತಿಥ್ಯ (Accommodation & Hospitality): ಹೋಟೆಲ್‌, ರೆಸಾರ್ಟ್‌, ಬೂಟಿಕ್‌ ಸ್ಟೇ, ಹೆರಿಟೇಜ್‌ ಪ್ರಾಪರ್ಟಿ ಹಾಗೂ ರೆಸ್ಟೋರೆಂಟ್‌ ಸೇವೆಗಳು.
  • ಟೂರ್ ಆಪರೇಟರ್ಸ್ ಮತ್ತು ಟ್ರಾವೆಲ್ ಏಜೆಂಟ್ಸ್: ದೇಶೀಯ ಮತ್ತು ಇನ್‌ಬೌಂಡ್‌ ಟೂರ್‌ ಆಪರೇಟರ್‌ಗಳು, ಸಾಹಸ ಪ್ರವಾಸೋದ್ಯಮ ಸಂಸ್ಥೆಗಳು, ಸಾರಿಗೆ ಸೇವೆಗಳು.
  • ಇವೆಂಟ್ಸ್, ವೆನ್ಯೂ ಮತ್ತು ಇನ್ಫ್ರಾಸ್ಟ್ರಕ್ಚರ್ (Events, Venues & Infrastructure): ಹೆರಿಟೇಜ್‌ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು ಮತ್ತು ಪ್ರವಾಸೋದ್ಯಮ ಸ್ನೇಹಿ ತಾಣಗಳು.
  • ಶಿಕ್ಷಣ, ಪಬ್ಲಿಕೇಶನ್ಸ್ ಮತ್ತು ಸಾಧಕರು: ಪ್ರವಾಸಿ ಮಾರ್ಗದರ್ಶಕರು (ಗೈಡ್‌ಗಳು), ನೈಸರ್ಗಿಕ ತಜ್ಞರು, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು, ಲೇಖಕರು ಹಾಗೂ ಜೀವಮಾನ ಸಾಧಕರು.
  • ಸುಸ್ಥಿರತೆ ಮತ್ತು ಗ್ರಾಮೀಣ ಪ್ರವಾಸೋದ್ಯಮ (Sustainability & Rural Tourism): ಹೋಂಸ್ಟೇ, ಗ್ರಾಮೀಣ ಪ್ರವಾಸೋದ್ಯಮ ಯೋಜನೆಗಳು ಹಾಗೂ ಪ್ರವಾಸಿ ತಾಣಗಳ ಸುಸ್ಥಿರ ನಿರ್ವಹಣೆ.

ಆಯ್ಕೆ ಪ್ರಕ್ರಿಯೆ ಮತ್ತು ನಾಮನಿರ್ದೇಶನ ದಿನಾಂಕ ಉದ್ಯಮ ಕ್ಷೇತ್ರದ ಹಿರಿಯರು ಹಾಗೂ ವಿಷಯ ತಜ್ಞರನ್ನು ಒಳಗೊಂಡ ಸ್ವತಂತ್ರ ಸಮಿತಿಯು ನಾಮನಿರ್ದೇಶನಗಳನ್ನು ಮೌಲ್ಯಮಾಪನ ಮಾಡಲಿದೆ. ಪ್ರವಾಸಿಗರ ಪ್ರತಿಕ್ರಿಯೆ, ಸೇವಾ ಗುಣಮಟ್ಟ, ಪರಿಸರ ಸುಸ್ಥಿರತೆಯಂತಹ ಮಾನದಂಡಗಳ ಆಧಾರದ ಮೇಲೆ ಪಾರದರ್ಶಕವಾಗಿ ಆಯ್ಕೆ ನಡೆಯಲಿದೆ.

ಅರ್ಹ ಹೋಟೆಲ್‌ಗಳು, ರೆಸಾರ್ಟ್‌ಗಳು, ಟೂರ್‌ ಆಪರೇಟರ್‌ಗಳು, ಹೋಂಸ್ಟೇಗಳು, ಮತ್ತು ಸ್ಟಾರ್ಟ್‌ಅಪ್‌ಗಳು ಸೆಪ್ಟೆಂಬರ್‌ 17, 2026ರ ರಾತ್ರಿ 11.59ರೊಳಗೆ ನಾಮನಿರ್ದೇಶನ ಸಲ್ಲಿಸಬಹುದಾಗಿದೆ. ವಿಶ್ವ ಪ್ರವಾಸೋದ್ಯಮ ದಿನವಾದ ಸೆಪ್ಟೆಂಬರ್‌ 27ರಂದು ಬೆಂಗಳೂರಿನಲ್ಲಿ ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ದೊಡ್ಡ ಹೋಟೆಲ್‌ಗಳಿಗೆ ಮಾತ್ರವಲ್ಲದೆ, ಸ್ಥಳೀಯ ಉದ್ಯಮಿಗಳು, ಗೈಡ್‌ಗಳು ಹಾಗೂ ಗ್ರಾಮೀಣ ಹೋಂಸ್ಟೇಗಳಿಗೂ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ವಿಭಾಗಗಳನ್ನು ರೂಪಿಸಲಾಗಿದೆ ಎಂದು ಇಲಾಖೆ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *