ಚಿತ್ರದುರ್ಗ ಬಿಜೆಪಿ ಜಿಲ್ಲಾ ವರ್ಗ ಸಮಾರೋಪ | ಕೇಂದ್ರ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಕೋಟ ಶ್ರೀನಿವಾಸ್ ಪೂಜಾರಿ ಕರೆ.

ಚಿತ್ರದುರ್ಗ ಜೂ. 17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಿಗೆ ರಾಜ್ಯ ಸರ್ಕಾರ ತಮ್ಮದೇ ಯೋಜನೆಗಳಂತೆ ಬಿಂಬಿಸಿಕೊಂಡು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರು ತಮ್ಮ ಫೋಟೋಗಳನ್ನು ಪತ್ರಿಕೆಗಳನ್ನು ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಆದುದರಿಂದ ಪಕ್ಷದ ಪದಾಧಿಕಾರಿಗಳು ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ಜಿಲ್ಲಾವತಿಯಿಂದ ಶಿವಮೊಗ್ಗ ನಗರದ ಹೊರಹೊಲಯದಲ್ಲಿರುವ ಹೋಟೆಲ್ ಮಲ್ನಾಡ್ ಶೈರ್‍ನಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಯ ಪ್ರಶಿಕ್ಷಣ ಅಭಿಯಾನ ಜಿಲ್ಲಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿಜೀ ನೇತೃತ್ವದ ಜನಪರ ಕಲ್ಯಾಣ ಯೋಜನೆಗಳಾದ ಗರೀಬ್ ಕಲ್ಯಾಣ್ ಅಣ್ಣ ಯೋಜನೆ ಅಡಿಯಲ್ಲಿ 83 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಮತ್ತು ಗೋದಿ ವಿತರಣೆ ಮಾಡುತ್ತಿದ್ದು, 14 ಕೋಟಿ ಶೌಚಾಲಯಗಳನ್ನು 12 ವರ್ಷಗಳಲ್ಲಿ ನಿರ್ಮಾಣ ಮಾಡಿದ್ದಾರೆ, ಕರ್ನಾಟಕದಲ್ಲಿ 2 ಕೋಟಿ 12 ಲಕ್ಷ ಜನ – ಧನ್ ಬ್ಯಾಂಕ್ ಖಾತೆಗಳನ್ನು ತೆರೆಸಿ ಆರ್ಥಿಕವಾಗಿ ಸಶಕ್ತಗೊಳಿಸಿದ್ದಾರೆ, ಮುದ್ರಾ ಯೋಜನೆಯಡಿ ಕರ್ನಾಟಕದಲ್ಲಿ ರೂ.3. 39 ಲಕ್ಷ ಕೋಟಿ ಹಣವನ್ನು ಮಹಿಳೆಯರು, ಯುವಕರು, ಸಣ್ಣ ಉದ್ಯಮಶೀಲತೆಯ ವಿಶ್ವಾಸ ತುಂಬಿಸಲು ಬ್ಯಾಂಕ್ ಮೂಲಕ ಸಾಲ ವಿತರಿಸಲಾಗಿದೆ, 87 ಲಕ್ಷ ಗ್ರಾಮೀಣ ಮನೆಗಳಿಗೆ ಪ್ರಧಾನಮಂತ್ರಿ ಜಲ್ – ಜೀವನ್ ಮಿಷಿನ್ ಅಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ಕಲ್ಪಿಸಿರುತ್ತಾರೆ ಎಂದರು.

ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಿಗೆ ರಾಜ್ಯ ಸರ್ಕಾರ ತಮ್ಮದೇ ಯೋಜನೆಗಳಂತೆ ಬಿಂಬಿಸಿಕೊಂಡು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರು ತಮ್ಮ ಫೋಟೋಗಳನ್ನು ಪತ್ರಿಕೆಗಳನ್ನು ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಆದುದರಿಂದ ಪಕ್ಷದ ಪದಾಧಿಕಾರಿಗಳು ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ ಸಂಸದರು, ತಾವೆಲ್ಲರೂ ಈ ಎರಡು ದಿನಗಳ 13 ಅವಧಿಗಳಲ್ಲಿ ವಿಷಯಗಳನ್ನು ಅರಿತು, ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ತಾವೆಲ್ಲರೂ ಪಕ್ಷ ಸಿದ್ದಾಂತ ಮತ್ತು ಬದ್ಧತೆಯ ಚೌಕ್ಕಟ್ಟಿನಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಈ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕೆ ಟಿ ಕುಮಾರಸ್ವಾಮಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಈ 2 ದಿನಗಳು ಈ ಪ್ರಶಿಕ್ಷಣದಲ್ಲಿ ಸಂಘಟನಾತ್ಮಕ ವಿಷಯಗಳು ತಾವುಗಳು ಬೂತ್ ಮಟ್ಟದ ಪ್ರತಿಯೊಬ್ಬ ಕಾರ್ಯಕರ್ತರಿಗೆ ತಿಳಿಸಿ, ಬರುವಂತೆ ಕಾರ್ಯಕರ್ತರ ಚುನಾವಣೆಗಳಾದ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಗಳಲ್ಲಿ ನಾವೆಲ್ಲರೂ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳುವ ಕಡೆ ನಾವೆಲ್ಲರೂ ಸಕ್ರಿಯವಾಗಿ ಸಂಘಟನೆ ಮಾಡುವಲ್ಲಿ ನಾವೆಲ್ಲಾ ಕಾರ್ಯಪ್ರವೃತ್ತಿಯಾಗಬೇಕಾಗಿ ವಿನಂತಿಸುತ್ತೇನೆ ಎಂದು ತಿಳಿಸಿದರು.

ಈ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ದಾವಣಗೆರೆ ವಿಭಾಗ ಸಹಾ – ಪ್ರಭಾರಿಗಳಾದ ಎ ಮುರುಳಿ, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಜಿ ಹೆಚ್ ಮೋಹನ್‍ಕುಮಾರ್, ಡಾ. ಪಿ ಎಂ ಮಂಜು ನಾಥ, ವೆಂಕಟೇಶ್ ಯಾದವ್, ಮಾಧುರಿ ಗಿರೀಶ್ ಮುಖಂಡರಾದ ವಾದಿರಾಜ್, ಅನಿತ್ ಕುಮಾರ್, ಡಾ. ಸಿದ್ದಾರ್ಥ್ ಗುಂಡಾರ್ಪಿ ಸೇರಿದಂತೆ ಜಿಲ್ಲಾ ಮತ್ತು ಮಂಡಲ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *