ಚಿತ್ರದುರ್ಗ ಜೂ. 17
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನರೇಂದ್ರ ಮೋದಿಯವರು ಹೀಗೆ 12 ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸುವ ಪೂರ್ವದಲ್ಲಿ ರಾಷ್ಟ್ರದ ಆರ್ಥಿಕ ಪರಿಸ್ಥಿತಿ 12ನೇ ಸ್ಥಾನದಲ್ಲಿತ್ತು. ಆಗ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿತ್ತು. ಭಾರತ ದೇಶ ಹಗರಣಗಳ ದೇಶ ಎಂಬ ಅಣೆಪಟ್ಟಿಯನ್ನು ಕಟ್ಟಿಕೊಂಡಿತ್ತು. ಮೋದಿಯವರ ಆಡಳಿತ ಬಂದಾಗಿನಿಂದ ರಾಷ್ಟ್ರದ ಆರ್ಥಿಕ ಪರಿಸ್ಥಿತಿ 4ನೇ ಸ್ಥಾನಕ್ಕೆ ಬಂದಿದೆ. ಇವರ ಅಧಿಕಾರಾವಧಿಯಲ್ಲಿ ಜನಪರ ಯೋಜನೆಗಳನ್ನು ನೀಡಿ ವಿಶ್ವದ ಧ್ರುವತಾರೆಯಾಗಿ, ವಿಶ್ವಕ್ಕೆ ದೊಡ್ಡಣ್ಣನ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ ಇದು ಹೆಮ್ಮೆ ಪಡುವ ವಿಷಯ ಎಂದು ಬಿಜೆಪಿಯ ರಾಜ್ಯ ವಕ್ತಾರ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.
ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೆಹರುರವರು ಮೊದಲು ಪ್ರಧಾನ ಮಂತ್ರಿ ಆಗಿದ್ದು ಆಯ್ಕೆಯ ಪ್ರಧಾನಮಂತ್ರಿ ಅಲ್ಲ. ನೇಮಕವಾದ ಪ್ರಧಾನಮಂತ್ರಿಯಾಗಿ. ಎರಡನೇ ಬಾರಿ ಪ್ರಧಾನ ಮಂತ್ರಿಯಾದಾಗ ಕಾಂಗ್ರೆಸ್ ಎಂಬುದು ಸಂಘಟನೆ ಎಂಬ ಭಾವನೆಯಲ್ಲಿ ದೇಶದ ಜನ ನೆಹರುರವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದರು.ನಂತರ ಇಂದಿರಾ ಗಾಂಧಿ ರವರು ವಾಮಮಾರ್ಗ ಬಳಸಿ ಹಾಗೂ ಅವರ ಕುಟುಂಬ ರಾಜಕೀಯ ಬಳಸಿಕೊಂಡು ಪ್ರಧಾನ ಮಂತ್ರಿಯಾದರು.ಲಾಲ್ ಬಹದ್ದೂರ್ ಶಾಸ್ತ್ರಿಯವರು ಅನುಮಾನಸ್ಪವಾಗಿ ಸಾವಿಗೆ ಈಡಾಗಿದ್ದು ಮತ್ತು ಅನೇಕ ಕಾಂಗ್ರೆಸ್ನ ಹಿರಿಯ ನಾಯಕರ ಸಮಾಧಿಯ ಮೇಲೆ ಪ್ರಧಾನಮಂತ್ರಿಯಾದವರು ಇಂದಿರಾಗಾಂಧಿಯವರು ಎಂದರು.
ಇಂದಿರಾ ಗಾಂಧಿಯವರ ಅಸ್ತಿ ವಿಸರ್ಜನೆ ನೆಪದಲ್ಲಿ ಪ್ರಧಾನಮಂತ್ರಿಯವರು ರಾಜೀವ್ ಗಾಂಧಿಯವರು ದೇಶದಲ್ಲಿ ಕಿಚಡಿ ಸರ್ಕಾರ ನಡೆಯುತ್ತಿದ್ದ ಸಂದರ್ಭದಲ್ಲಿ ಉದಯಿಸುವ ಸೂರ್ಯನ ರೀತಿಯಲ್ಲಿ ನರೇಂದ್ರ ಮೋದಿಯವರು 2014 ರಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಪ್ರಸ್ತುತ ಇಲ್ಲಿಯವರೆಗೆ ಸುಧೀರ್ಘ 12 ವರ್ಷಗಳ ಕಾಲ ಅಧಿಕಾರ ನಡೆಸುತ್ತಿರುವ ಚುನಾಯಿತ ದೀರ್ಘಾವಧಿ ಪ್ರಧಾನ ಮಂತ್ರಿಯಾಗಿದ್ದಾರೆ.ದೇಶ ಕಂಡಂತಹ ಒಬ್ಬ ಅತ್ಯಂತ ಜನಪ್ರಿಯ, ವಿಶ್ವಾಹಾರ್ಯ, 150 ಕೋಟಿ ಜನರ ಬಗ್ಗೆ ಕಾಳಜಿ ವಹಿಸುವ, ದೀರ್ಘಾವಧಿ ಚುನಾಯಿತ ಪ್ರಧಾನಮಂತ್ರಿ ಎಂದರೆ ಅದು ನರೇಂದ್ರ ಮೋದಿಯವರು…ಈ ಹಿಂದೆ ದೀರ್ಘಾವಧಿ ಆಡಳಿತ ನಡೆಸಿದ ನೆಹರುರವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತೀಯ ಪ್ರಜೆಗಳು ವಿಶ್ವಾಸ ಇಟ್ಟು ನಂಬಿಕಾರ್ಹ ವ್ಯಕ್ತಿಯನ್ನು ಈ ಸ್ಥಾನದಲ್ಲಿ ಕುಳಿಸಿರುವುದು ಇತಿಹಾಸ ಎಂದು ತಿಳಿಸಿದರು.
ಯುರೋಪ್ ರಾಷ್ಟ್ರಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೆಂಪು ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿವೆ.. ಕಾರಣ ಅವರು ರಾಷ್ಟ್ರದ ಜನತೆಗೆ ನೀಡುತ್ತಿರುವ ಉತ್ತಮ ಆಡಳಿತದಿಂದಾಗಿ.ನರೇಂದ್ರ ಮೋದಿಯವರು ಹೀಗೆ 12 ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸುವ ಪೂರ್ವದಲ್ಲಿ ರಾಷ್ಟ್ರದ ಆರ್ಥಿಕ ಪರಿಸ್ಥಿತಿ 12ನೇ ಸ್ಥಾನದಲ್ಲಿತ್ತು.. ಆಗ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿತ್ತು. ಹಗರಣಗಳ ದೇಶ ಎಂಬ ಅಣೆಪಟ್ಟಿಯನ್ನು ಕಟ್ಟಿಕೊಂಡಿತ್ತು.. ಇವರ ಆಡಳಿತ ಬಂದಾಗಿನಿಂದ ರಾಷ್ಟ್ರದ ಆರ್ಥಿಕ ಪರಿಸ್ಥಿತಿ 4ನೇ ಸ್ಥಾನಕ್ಕೆ ಬಂದಿದೆ. ಎಂದ ಅವರು, ನರೇಂದ್ರ ಮೋದಿಯವರು ದೇಶಕ್ಕೆ ಅಲ್ಲದಷ್ಟೇ ಅಲ್ಲದೇ ನಮ್ಮ ರಾಜ್ಯಕ್ಕೂ ಸಹ ಹೆಚ್ಚು ಜನಪರ ಯೋಜನೆಗಳನ್ನು ನೀಡಿದ್ದಾರೆ.
ಮೂರು ದಶಕಗಳ ನಂತರ ಕೇಂದ್ರದಲ್ಲಿ ಪೂರ್ಣ ಬಹುಮತದ ಕಾಂಗ್ರೇಸ್-ಅಲ್ಲದ ಏಕಪಕ್ಷದ ಸಕಾರ ರಚನೆಗೆ ಕನಾಟಕದ ಮತದಾರರು 28ರಲ್ಲಿ 17 ಸ್ಥಾನಗಳನ್ನು ನೀಡುವ ಮೂಲಕ ಮೋದಿ ಅವರ ನಾಯಕತ್ವದಲ್ಲಿ ತೀವ್ರ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ತೆರಿಗೆ ಹಂಚಿಕೆಯಲ್ಲಿ 262% ಭಾರಿ ಹೆಚ್ಚಳ: ಯುಪಿಎ ಸಕಾರದ (2004-14) ಅವಧಿಯ 81,794 ಕೋಟಿಗೆ ಹೋಲಿಸಿದರೆ ಮೋದಿ ಸರ್ಕಾರದ (2014-24) ಅವಧಿಯಲ್ಲಿ ಕನಾಟಕಕ್ಕೆÀ ಸಿಕ್ಕ ತೆರಿಗೆ ಹಂಚಿಕೆ 2,96,730 ಕೋಟಿಗೆ (262.78% ಹೆಚ್ಚಳ) ತಲುಪಿದೆ. ಯುಪಿಎ ಅವಧಿಯ 60,779 ಕೋಟಿಯಿಂದ ಮೋದಿ ಸಕಾರದ ಅವಧಿಯಲ್ಲಿ ಕನಾಟಕಕ್ಕೆÀ ಸಿಕ್ಕ ಅನುದಾನ 2,38,288 ಕೋಟಿಗೆ (292.06% ಹೆಚ್ಚಳ) ಭಾರಿ ಏರಿಕೆ ಕಂಡಿದೆ. ಕನಾಟಕದ ರಸ್ತೆ ಮೂಲಸೌಕಯ ಅಭಿವೃದ್ದಿಗೆ ಹೊಸ ವೇಗ ಮಾಡಲಾಗಿದ್ದು ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದ 8,191 ಕಿ.ಮೀ.ಗೆ ವಿಸ್ತರಣೆಯಾಗಿದೆ. ಮೋದಿಜಿಯವರು ನಮ್ಮ ದೇಶ ರಫ್ತಿನದೇಶವಾಗಬೇಕು… ಆಮದು ದೇಶವಾಗಬಾರದು ಎಂದು ಕರೆ ನೀಡಿದ್ದಾರೆ. ಅವರ ಫಿಟ್ ಇಂಡಿಯಾ ಕರೆಗೆ ನಾವು ಬೆಂಬಲವಾಗಿ ಕೊಡೋಣ ಎಂದು ತಿಳಿಸಿದರು.
ಜಿಲ್ಲೆಗೆ ಶೀಘ್ರವಾಗಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ;
ಹಿರಿಯೂರಿನ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಸುಧಾಕರ್ ರವರ ನಿಧನದಿಂದ ಚಿತ್ರದುರ್ಗ ಜಿಲ್ಲೆಗೆ ಉಸ್ತುವಾರಿ ಸಚಿವರು ಇಲ್ಲವಾಗಿದೆ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ಇವೆ ಇದರ ನಿವಾರಣೆ ಆಗಬೇಕೆಂದರೆ ಉಸ್ತುವಾರಿ ಸಚಿವರ ಅಗತ್ಯ ಇದೆ ಮಾರ್ಚಿನಲ್ಲಿ ಕೆಡಿಪಿ ಸಭೆ ಆಗಿದ್ದು ಇಲ್ಲಿಯವರೆಗೂ ಆಗಿಲ್ಲ, ಯಾವುದೇ ಸಭೆಗಳು ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ಮಳೆ ಇಲ್ಲ.. ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಶೀಘ್ರವಾಗಿ ಚಿತ್ರದುರ್ಗಕ್ಕೆ ಮಂತ್ರಿಯನ್ನಾಗಿ ಯಾರನ್ನಾದರೂ ಮಾಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಎಂದು ನವೀನ್ ಆಗ್ರಹಿಸಿದ್ದಾರೆ.
ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಮಾಧುರಿ ಗಿರೀಶ್, ಉಪಾಧ್ಯಕ್ಷರಾದ ಡಾ. ಸಿದ್ದಾರ್ಥ್ ಗುಂಡಾರ್ಪಿ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
