ಚಿತ್ರದುರ್ಗ|ಆರೋಗ್ಯವೇ ಮಹಾಭಾಗ್ಯ: ಬೆಳಗಟ್ಟ ಆರೋಗ್ಯ ಶಿಬಿರದಲ್ಲಿ ಕೆ.ಎಸ್. ಕೃಷ್ಣಾರೆಡ್ಡಿ ಕಿವಿಮಾತು.

ಚಿತ್ರದುರ್ಗ ಜೂ. 30

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಎಷ್ಟೇ ಹಣ, ಆಸ್ತಿ ಗಳಿಸಿದ್ದರೂ ಆರೋಗ್ಯವೇ ಮಹಾಭಾಗ್ಯ ಎಂಬ ಮಾತೇ ಸತ್ಯ ಎಂದು ಪಿಡಬ್ಲ್ಯುಡಿ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಎಸ್. ಕೃಷ್ಣಾರೆಡ್ಡಿ ಹೇಳಿದರು.

ಕೋಟ್ಲಾ ಎಜುಕೇಷನಲ್ ಟ್ರಸ್ಟ್ ಹಾಗೂ ಬೆಂಗಳೂರಿನ ಮೆಡಿಡರ್ಮ್ ಸ್ಪೆಷಾಲಿಟಿ ಕ್ಲಿನಿಕ್ ಸಹಯೋಗದಲ್ಲಿ ತುರುವನೂರು ರಸ್ತೆಯ ಬೆಳಗಟ್ಟ ಹರ್ಷ ಫಾರ್ಮ್‍ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಣ್ಣಿನ ಪೆÇರೆ ಜಾಗೃತಿ ಕಾರ್ಯಕ್ರಮ ಹಾಗೂ ಮೆಗಾ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು.ವಯಸ್ಸಾದವರಲ್ಲಿ ಕಣ್ಣಿನ ಪೆÇರೆ ಸಾಮಾನ್ಯ. ಆದರೆ, ನಿರ್ಲಕ್ಷ್ಯ ವಹಿಸಿದರೆ ದೃಷ್ಟಿ ಸಂಪೂರ್ಣ ಹೋಗಬಹುದು. 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಬೇಕು. ಗ್ರಾಮೀಣ ಭಾಗದಲ್ಲಿ ಜಾಗೃತಿ ಕೊರತೆಯಿಂದ ಅನೇಕರು ಅಂಧತ್ವಕ್ಕೆ ತುತ್ತಾಗುತ್ತಿದ್ದಾರೆ. ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಶೇ.100ರಷ್ಟು ದೃಷ್ಟಿ ಮರಳಿ ಪಡೆಯಬಹುದು ಎಂದು ತಿಳಿಸಿದರು.

ಸಕ್ಕರೆ, ರಕ್ತದೊತ್ತಡ, ಕಣ್ಣು ಸೇರಿ ಅನೇಕ ಆರೋಗ್ಯ ಸಮಸ್ಯೆಗಳು ಸುಪ್ತವಾಗಿ ಕಾಡುತ್ತಿರುತ್ತವೆ. ಆದ್ದರಿಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ವಹಿಸಿದರೆ ದೊಡ್ಡ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು. ಗ್ರಾಮೀಣ ಪ್ರದೇಶದಲ್ಲಿ ಬಡತನ, ನಿರ್ಲಕ್ಷ್ಯತನ ಹೆಚ್ಚು ಇರುತ್ತದೆ. ಆದ್ದರಿಂದ ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು. ಸಂಘ-ಸಂಸ್ಥೆಗಳು ಹಳ್ಳಿ, ಕೊಳಚೆ ಪ್ರದೇಶದಲ್ಲಿ ಹೆಚ್ಚಾಗಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳುವ ಕಾರ್ಯ ಕೈಗೊಳ್ಳಬೇಕು. ಈ ಮೂಲಕ ಆರೋಗ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.

ಶಿಬಿರವನ್ನು ಫಿಜಿಷಿಯನ್ ಡಾ. ಕಾಂತರಾಜ್ ಉದ್ಘಾಟಿಸಿದರು. ಡಾ. ಮನುರೆಡ್ಡಿ, ಡಾ. ಹರ್ಷಿತಾರೆಡ್ಡಿ, ಡಾ. ಜಯಪ್ರಕಾಶ್, ಡಾ. ಗೀತಾ, ಡಾ. ದರ್ಶನ್ ಸಾಯಿ, ಡಾ. ಶಶಾಂಕ್ ರೆಡ್ಡಿ, ಡಾ. ನಂದಿನಿ, ಡಾ. ಚಂದನಾ, ಡಾ. ನಿತ್ಯಾ, ಡಾ. ಗಗನ್ ವಿ. ಮೊತ್ಕೂರ್ ಸೇರಿ 12ಕ್ಕೂ ಹೆಚ್ಚು ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಪೆÇ್ರ.ಸತ್ಯನಾರಾಯಣ ರೆಡ್ಡಿ, ಸಿಟಿ ಇನ್‍ಸ್ಟಿಟ್ಯೂಟ್ ಕಾರ್ಯದರ್ಶಿ ವೆಂಕಟೇಶ್ ರೆಡ್ಡಿ, ಚಿತ್ರದುರ್ಗ ರೆಡ್ಡಿ ಸಮಾಜ ಅಧ್ಯಕ್ಷ ಬಿ. ವೆಂಕಟೇಶ್ ರೆಡ್ಡಿ, ಡಿಆರ್‍ಡಿಒ ಲೋಕೇಶ್ವರಪ್ಪ ಉಪಸ್ಥಿತರಿದ್ದರು.

ಶಿಬಿರದಲ್ಲಿ 400ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೆ ಒಳಪಟ್ಟರು. ಎಲ್ಲರಿಗೂ ಉಚಿತವಾಗಿ ಔಷಧ ವಿತರಿಸಲಾಯಿತು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *