ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ: ಡಿಸೆಂಬರ್ 5ರಂದು ಬೆಳಗ್ಗೆ 10.30ಕ್ಕೆ ನಗರದಲ್ಲಿನ ಮದಕರಿನಾಯಕ ವೃತ್ತ (ಮೆಜೆಸ್ಟಿಕ್) ಬಳಿ ಲೇಬರ್ ಕಾರ್ಡ್ ನೋಂದಣಿ ಮಹಾ ಅಭಿಯಾನ ನಡೆಯಲಿದೆ ಎಂದು ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆಯ ರಾಜ್ಯಾಧ್ಯಕ್ಷ ಎನ್. ಮಲ್ಲಿಕಾರ್ಜುನ್ ಪಾರ್ಥ ತಿಳಿಸಿದ್ದಾರೆ.
ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆ ಕೋಟ್ಯಾಂತರ ರೂಪಾಯಿ ನಿಧಿ ಮೀಸಲಿಟ್ಟಿದ್ದರೂ, ಮಾಹಿತಿ ಕೊರತೆಯಿಂದ ಅನೇಕ ಫಲಾನುಭವಿಗಳು ಸೌಲಭ್ಯ ಪಡೆಯಲಾಗುತ್ತಿಲ್ಲ. ಈ ಹಿನ್ನೆಲೆ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ
- ಶ್ರೀ ಬಸವಪ್ರಭು ಸ್ವಾಮೀಜಿ (ವೀರಕ್ತಮಠ, ದಾವಣಗೆರೆ) ಮುಖ್ಯ ಅತಿಥಿಯಾಗಿದ್ದು,
- ಕಾಂಗ್ರೆಸ್ ಮುಖಂಡ ಬಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ:
ಡಾ. ಬಿ. ತಿಪ್ಪೇಸ್ವಾಮಿ ಜೆಜೆ ಹಟ್ಟಿ,
ಡಿಎಸ್ ಸುರೇಶಬಾಬು (ಶ್ರೀರಾಮಸೇನೆ ರಾಜ್ಯಾಧ್ಯಕ್ಷ),
ಎಚ್. ಮಂಜಪ್ಪ (ನಗರಸಭೆ ಮಾಜಿ ಅಧ್ಯಕ್ಷ),
ಜಿಲ್ಲಾಧಿಕಾರಿ ಟಿ. ವೆಂಕಟೇಶ್,
ಡಿವೈಎಸ್ಪಿ ಪಿ. ಕೆ. ದಿನಕರ್,
ಕಾರ್ಮಿಕ ಇಲಾಖೆ ಅಧಿಕಾರಿ ಎಸ್. ಆರ್. ಅರವಿಂದ್,
ಸಂಗೊಳ್ಳಿ ರಾಯಣ್ಣ ಸೇನೆ ಅಧ್ಯಕ್ಷ ಟಿ. ಆನಂದ್ ಮುಂತಾದವರು.
ನಗರದ ಹಲವಾರು ಕಾರ್ಮಿಕರು ಮತ್ತು ಬಡ ವಲಯದ ಕುಟುಂಬಗಳು ಸರ್ಕಾರದ ಸೌಲಭ್ಯ ಪಡೆಯಲು ಈ ಅಭಿಯಾನ ಬಹುಮುಖ್ಯವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.