ಚಿತ್ರದುರ್ಗ ಆ. 20
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ದೇಶದಲ್ಲಿ ಮಾಜಿ ಪ್ರಧಾನ ಮಂತ್ರಿ ರಾಜೀವ ಗಾಂಧಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ರವರು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಕೂಡುಗೆಯನ್ನು ನೀಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನ ಮಂತ್ರಿ ದಿವಂಗತ ರಾಜೀವ್ಗಾಂ ಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ಭಾರತದ ಆರನೇ ಪ್ರಧಾನ ಮಂತ್ರಿಯಾಗಿದ್ದರು.
1984 ರಿಂದ 1989 ರವರೆಗೆ ಅವರು ದೇಶವನ್ನು ಮುನ್ನಡೆಸಿದರು. ತಮ್ಮ ತಾಯಿಯ ನಿಧನದ ನಂತರ ಕೇವಲ 40 ನೇ ವಯಸ್ಸಿನಲ್ಲಿ ಅಧಿಕಾರ ಸ್ವೀಕರಿಸುವ ಮೂಲಕ, ಭಾರತದ ಅತ್ಯಂತ ಕಿರಿಯ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ರಾಜಕೀಯಕ್ಕೆ ಬರುವ ಮುನ್ನ ಅವರು ವಿಮಾನ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಯುವಕರಿಗೆ ರಾಜಕೀಯದಲ್ಲಿ ಅವಕಾಶ ನೀಡಲು ಮತದಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಿದರು.ಭಾರತದಲ್ಲಿ ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕ್ರಾಂತಿಗೆ ಬುನಾದಿ ಹಾಕಿದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಸಂವಿಧಾನಾತ್ಮಕ ಮಸೂದೆಗೆ ಪ್ರಯತ್ನಿಸಿದರು.ಶಾಂತಿ ಒಪ್ಪಂದಗಳು ಮತ್ತು ವಿದೇಶಾಂಗ ನೀತಿಯಲ್ಲಿ ಹೊಸ ಹೆಜ್ಜೆಗಳನ್ನು ಇಟ್ಟರು. ರಾಜೀವಗಾಂಧಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ದೇಶವನ್ನು 21ನೇ ಶತಮಾನಕ್ಕೆ ಕರೆದುಕೊಂಡು ಹೋಗುವಂತ ವಾತಾವರಣವನ್ನು ನಿರ್ಮಾಣ ಮಾಡಿದ್ದರು, ಇದರೊಂದಿಗೆ ಇಂಧಿನ ತಂತ್ರಜ್ಞಾನವನ್ನು ಅವರೇ ತಮ್ಮ ಅಧಿಕಾರದ ಅವಧಿಯಲ್ಲಿ ನಮ್ಮ ದೇಶಕ್ಕೆ ಕೂಡುಗೆ ಯಾಗಿ ನೀಡಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ರವರು ತನ್ನ ಅಧಿಕಾರದ ಅವಧಿಯಲ್ಲಿ ನೊಂದ ವರಿಗೆ ಧ್ವನಿಯಾಗುವುದರ ಮೂಲಕ ಹಿಂದುಳಿದ ದಲಿತರಿಗೆ ನೆರವನ್ನು ನೀಡಿದರು, ಮಕ್ಕಳ ಶಿಕ್ಷಣಕ್ಕೆ ಹಾಸ್ಟಲ್ ಗಳನ್ನು ನಿರ್ಮಾಣ ಮಾಡುವುದರ ಮೂಲಕ ಅವರ ಶಿಕ್ಷಣಕ್ಕೆ ದಾರಿದೀಪವಾಗಿದ್ದರು. ರಾಜ್ಯದಲ್ಲಿ ಊಳುವವನೇ ಭೂಮಿಯ ಒಡೆಯ ಎಂಬ ಕೇಂದ್ರದ ಕಾನೂನುನನ್ನು ಜಾರಿ ಮಾಡುವುದರ ಮುಲಕ ಹಲವಾರು ಜನರಿಗೆ ನೆರವಾಗಿದ್ದರು. ಇಂದಿರಾಗಾಂಧಿಯವರ ಲೋಕಸಭೆಯಲ್ಲಿ ಸೋತಾಗ ಅವರನ್ನು ಕರ್ನಾಟಕಕ್ಕೆ ಕರೆ ತಂದು ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಲ್ಲಿಸಿ ಅವರ ಗೆಲುವಿಗೆ ನೆರವಾಗಿದ್ದರು ದೇವರಾಜ್ ಅರಸು ರವರು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಸಂಪತ್ ಕುಮಾರ್ ಮಾತನಾಡಿ, ದೇಶದ ಸ್ವಾತಂತ್ರ್ಯಗೊಳಿಸುವಲ್ಲಿ ಕಾಂಗ್ರೆಸ್ ಮಹತ್ತರವಾದ ಪಾತ್ರವನ್ನು ವಹಿಸಿದೆ ಆದರೆ ಅಂದು ದೇಶ ಸ್ವಾತಂತ್ರ್ಯ ಗೊಳಿಸುವಲ್ಲಿ ಯಾವುದೇ ಪಾತ್ರವನ್ನು ವಹಿಸದ ಬಿಜೆಪಿ ಇಂದು ಆಧಿಕಾರವನ್ನು ನಡೆಸುವುದರ ಮೂಲಕ ಜನತೆ ಸುಳ್ಳನ್ನು ಹೇಳುತ್ತಾ ವಂಚಿಸುತ್ತಿದೆ, ಇದರ ಬಗ್ಗೆ ನಾವು ಎಚ್ಚರವಾಗಿ ಇರಬೇಕಿದೆ ಆವರ ಸುಳ್ಳಿಗೆ ನಾವು ಸತ್ಯವನ್ನು ಹೇಳಬೇಕಿದೆ, ಇದಕ್ಕೆ ನಾವುಗಳು ಸಿದ್ದರಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಖಾಸಿಂಆಲಿ, ವೆಂಕಟೇಶ್, ಲೋಕೇಶ್, ಪೈಲಟ್ ನಾಗರಾಜ್, ರಾಜಣ್ಣ, ಸೈಫುಲ, ಪ್ರಕಾಶ್ ರಾಮ ನಾಯ್ಕ್, ಗುರುರಾಜ್, ಅಬ್ದುಲ್ ಷಾಬುದಿ ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j