ಎಸ್‌ಐಆರ್, ಬರ ಪರಿಸ್ಥಿತಿ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಂಸದ ಗೋವಿಂದ ಕಾರಜೋಳ.

ಚಿತ್ರದುರ್ಗ ಜು. 04

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ದುರಾಡಳಿತವೇ ಕಾಂಗ್ರೆಸ್ ಸರ್ಕಾರದ ನೀತಿ ಆಗಿದೆ ಕಾಂಗ್ರೆಸ್ ನವರು ಹೆದರಿಕೊಂಡಿದ್ದಾರೆ ಮದರಸಾ, ಮಸೀದಿ, ಕಲ್ಯಾಣ ಮಂಟಪಗಳಲ್ಲಿ ಎಸ್‍ಐಆರ್ ಮಾಡಿಸ್ತಿದ್ದಾರೆ ಇದು ಕಾಂಗ್ರೆಸ್ ದುರಾಡಳಿತಕ್ಕೆ ಸಾಕ್ಷಿ ಆಗಿದೆ ಎಂದು ಸಂಸದರಾದ ಗೋವಿಂದ ಕಾರಜೋಳ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಲ್‍ಓಗಳು ಕೆಲವೆಡೆ ಫಾರಂ ಕೊಟ್ಟು ಹೋಗ್ತಿದ್ದಾರೆ ನೀವೇ ಫಾರಂ ತುಂಬಿಕೊಡಿ ಎಂದು ಹೇಳಿ ಹೋಗ್ತಿದ್ದಾರೆ ಅನಕ್ಷರಸ್ಥರಿಗೆ ಫಾರಂ ತುಂಬಿಕೊಡಲು ಆಗೋದಿಲ್ಲ ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ತಿಳಿಸಿದ್ದೇನೆ ಗೊಲ್ಲರಹಟ್ಟಿ, ಹಾಡಿಗಳಲ್ಲಿ ಅನಕ್ಷರಸ್ಥರಿರುತ್ತಾರೆ ಎಂದು ತಿಳಿಸಿದ್ದೇನೆ ಅಧಿಕಾರಿಗಳೇ ಮಾಹಿತಿ ಪಡೆದು ಫಾರಂ ತುಂಬುವ ವ್ಯವಸ್ಥೆ ಆಗಬೇಕ ಎಸ್‍ಐಆರ್ ಬೇಡ ಎಂದು ರಾಹುಲ್ ಗಾಂಧಿ ರ್ಯಾಲಿ ಮಾಡುತ್ತಿದ್ದಾರೆ ಜನ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಗೆ ಮತ ನೀಡಿದ್ದಾರೆ ಈ ಮೊದಲು ಇವಿಎಂ ಯಂತ್ರ ಸರಿಯಿಲ್ಲ ಎಂದಿದ್ದರು ನಾವು ಮತ್ತೆ ಹೆಬ್ಬೆಟ್ಟು ಸಂಸ್ಕೃತಿಗೆ ಹೋಗಬೇಕೆಂದು ವ್ಯಂಗ್ಯವಾಡಿದ ಅವರು ಇವಿಎಂ ಯಂತ್ರಗಳಲ್ಲಿ ಬೇನಾಮಿ ಮತದಾನಕ್ಕೆ ಅವಕಾಶ ಕಡಿಮೆ ಇವಿಎಂ ಬೇಡ ಎಂದು ರಾಹುಲ್ ರ್ಯಾಲಿ ಮಾಡಿದ್ದರು ರಾಹುಲ್ ಆಫ್ ಚಡ್ಡಿ ಹಾಕಿಕೊಂಡು ಓಡಾಡಿದ್ದರು ಎಸ್‍ಐಆರ್ ಈಗಾಗಲೇ ಕೆಲ ರಾಜ್ಯಗಳಲ್ಲಿ ಸಕ್ಸಸ್ ಫುಲ್ ಆಗಿದೆ ಅನರ್ಹರು, ಮೃತರು, ದ್ವಿಕ್ಷೇತದಲ್ಲಿ ಮತ ಹೊಂದಿದವರನ್ನು ತೆಗೀತಾರೆ ರೋಣ ಮತಕ್ಷೇತ್ರದಲ್ಲಿ ಓರ್ವ 17ಕಡೆ ಮತಾದಾರನಿದ್ಧಾನೆ ಎಂದರು.

ಮಸೀದಿ, ಮಂದಿರ, ಮದರಸಾಗಳಲ್ಲಿ ಎಸ್‍ಐಆರ್ ಪ್ರಕ್ರಿಯೆ ಕೈಬಿಡಲು ಹೆಚ್ ಡಿಕೆ ಹೇಳಿದ್ದಾರೆ ಬಾಂಗ್ಲಾ, ಪಾಕ್ ನುಸುಳಿಕೋರರಿಗೆ ತವರುಮನೆ ಇದ್ದಂತಾಗಿದೆ ಕಾಂಗ್ರೆಸ್ ಸರ್ಕಾರವಿದ್ದ ರಾಜ್ಯ ನುಸುಳುಕೋರರಿಗೆ ತವರುಮನೆ ಇದ್ದಂತೆ ಅದೇ ಕಾರಣಕ್ಕೆ ಕಾಂಗ್ರೆಸ್ ನಿಂದ ಎಸ್‍ಐಆರ್‍ಗೆ ವಿರೋಧ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಿಸಿದ್ದು ಗೋಶಾಲೆಗಳನ್ನು ತೆರೆಯಬೇಕು ಬೆಳೆ ಪರಿಹಾರ ನೀಡಬೇಕು, ಬೆಳೆ ವಿಮೆಯನ್ನು ಸರ್ಕಾರವೇ ಕಟ್ಟಬೇಕು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಗೆ 25ಕೋಟಿ ನೀಡಬೇಕು ಹೋಬಳಿಗೆ ಒಂದು ಗೋಶಾಲೆ ತೆರೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *