ಕಾಂಗ್ರೆಸ್ ಪಕ್ಷದಲ್ಲಿ ತಾಳ್ಮೆ ಇದ್ದವರಿಗೆ ಅಧಿಕಾರ: ನೂತನ ಸಚಿವ ಟಿ.ರಘುಮೂರ್ತಿ

ಚಿತ್ರದುರ್ಗ ಆ. 06

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು, ತಾಳ್ಮೆ, ಸಂಯಮದಿಂದ ಇದ್ದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಆದರೆ ಪಕ್ಷಕ್ಕೆ ಬಂದ ತಕ್ಷಣ ನನಗೆ ಆಧಿಕಾರ, ಅಂತಸ್ತು ಸಿಗಬೇಕು ಆಂದರೆ ಆಗುವುದಿಲ್ಲ ತಾಳಿದವನು ಬಾಳಿಯಾನು ಎಂಬಂತೆ ನಮ್ಮ ಪಕ್ಷದಲ್ಲಿ ತಾಳ್ಮೆ ಇದ್ದವರಿಗೆ ಅಧಿಕಾರ ಲಭ್ಯವಾಗುತ್ತದೆ ಎಂದು ನೂತನ ಸಚಿವರಾದ ಟಿ.ರಘುಮೂರ್ತಿ ಪಕ್ಷದ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ಕರ್ನಾಟಕ ಸರ್ಕಾರದ ಡಿ.ಕೆ.ಶಿವಕುಮಾರ್ ರವರ ಸಚಿವ ಸಂಪುಟದಲ್ಲಿ ಸಚಿವರಾಗಿ ನೇಮಕವಾದ ನಂತರ ಪ್ರಥಮ ಬಾರಿಗೆ ಚಿತ್ರದುರ್ಗ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರನ್ನು ಸ್ವಾಗತಿಸಿ ನಂತರ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನೂತನ ಸಚಿವರು, ನಾನು ಸಹಾ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯಕರ್ತನಾಗಿ ಕೆಲಸವನ್ನು ಮಾಡಿದ್ದೇನೆ, 2008ರಲ್ಲಿ ಪಕ್ಷದವತಿಯಿಂದ ಟೀಕೆಟ್ ಪಡೆಯುವುದರ ಮೂಲಕ ಚಳ್ಳಕೆರೆ ಮತದಾರರ ಆರ್ಶೀವಾದದಿಂದ ಶಾಸಕನಾದೆ, ಅಲ್ಲಿಂದ ಇಲ್ಲಿಯವರೆಗೂ ಸಹಾ ನನ್ನ ಮತದಾರರು ನನ್ನ ಕೈಯನ್ನು ಹಿಡಿದಿದ್ಧಾರೆ. ಈ ಮದ್ಯ ನನೆಗ ಬೇರೆ ಪಕ್ಷಗಳಿಂದ ವಿವಿಧ ರೀತಿಯಾ ಆಮಿಷಗಳು ಬಂದವೂ ಆದರೆ ಅವುಗಳಿಗೆ ನಾನು ತಲೆ ಬಾಗಲಿಲ್ಲ ಭದ್ರವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ನನ್ನ ಕ್ಷೇತ್ರದ ಅಭೀವೃದ್ದಿಯ ಕಡೆಗೆ ಗಮನವನ್ನು ನೀಡುವುದರ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷ ನಮೆಗ ದೇವರಿದ್ದಂತೆ ಕಾಂಗ್ರೆಸ್ ಕಚೇರಿ ನಮಗೆ ದೇವಾಲಯ ಇದ್ದಂತೆ ಇಲ್ಲಿ ಎಲ್ಲರು ಪೂಜಾರಿಗಳೇ ದೇವರಿಗೆ ಯಾರು ಭಕ್ತಿ ನಿಷ್ಠೆಯಿಂದ ಪೂಜೆಯನ್ನು ಮಾಡುತ್ತಾರೋ ಅವರಿಗೆ ಭಗವಂತ ಒಲಿಯುತ್ತಾನೆ ಆದೇ ರೀತಿ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ನಿಷ್ಠೆ, ಪ್ರಮಾಣಿಕತೆ, ತಾಳ್ಮೆ ನಂಬಿಕೆಯಿಂದ ಪಕ್ಷದ ಕೂಟ್ಟ ಕೆಲಸವನ್ನು ಮಾಡುತ್ತಾರೊ ಅವರನ್ನು ಪಕ್ಷ ಎಂದಿಗೂ ಸಹಾ ಮರೆಯುವುದಿಲ್ಲ, ಅವರಿಗೆ ಆಧಿಕಾರ ವನ್ನು ನೀಡುತ್ತದೆ, ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ, ಇದೇ ರೀತಿ ನನ್ನಂತೆ ಹಲವಾರು ಜನ ಕಾರ್ಯಕರ್ತರು ಇದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ನನಗಿಂತ ಹಿರಿಯರಾದ ಶಾಸಕರು ಇದ್ದರೂ ಸಹಾ ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆಯನ್ನು ಇಟ್ಟು ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಮಾಡಿದ ಕೆಲಸವನ್ನು ನೋಡಿ ಮಂತ್ರಿ ಸ್ಥಾನವನ್ನು ನೀಡಿದ್ದಾರೆ. ಸಚಿವನಾಗಲೂ ನನ್ನಲ್ಲಿ ಯೋಗತ್ಯ ಇದೆ ಆದರೆ ಸಚಿವನಾಗಲು ಯೋಗ ಬೇಕು ಅದು ಈಗ ನನಗೆ ಸಿಕ್ಕಿದೆ. 2023ರ ಚುನಾವಣೆಯಲ್ಲಿ ನಾನು ಗೆಲುವನ್ನು ಸಾಧಿಸಿದಾಗ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇತ್ತು ಆದರೆ ಅದು ಸುಧಾಕರ್‍ರವರ ಪಾಲಾಯಿತು. ಈಗ ಅವರ ಮರಣದ ನಂತರ ನನಗೆ ಮಂತ್ರಿ ಸ್ಥಾನ ಸಿಕ್ಕಿದೆ, ಇರುವ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಕಾರ್ಯವನ್ನು ಮಾಡಲಾಗುವುದು ಎಂದರು. 

ಭೋವಿ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಮಾತನಾಡಿ, ರಘುಮೂರ್ತಿಯವರ ಕಾರ್ಯ ವೈಖರಿಯನ್ನು ನೋಡಿ ಪಕ್ಷದ ವರಿಷ್ಟರು ಸಚಿವ ಸ್ಥಾನವನ್ನು ನೀಡಿದ್ದಾರೆ, ಇವರು ಚಳ್ಳಕೆರೆಯನ್ನು ಯಾವ ರೀತಿ ಅಭೀವೃದ್ದಿ ಮಾಡಿದ್ಧಾರೂ ಅದೇ ರೀತಿ ಚಿತ್ರದುರ್ಗ ಜಿಲ್ಲೆಯನ್ನು ಸಹಾ ಅಭೀವೃದ್ದಿ ಮಾಡಲಿ, ದಿನದ 24 ಗಂಟೆ 7 ದಿನವೂ ಸಹಾ ಸತತವಾಗಿ ಶಾಸರಾಗಿ ಕೆಲಸವನ್ನು ಮಾಡಿದ್ದಾರೆ, ಇಗ ಸಚಿವರಾಗಿ ಇನ್ನೂ ಉತ್ತಮವಾಗಿ ಕೆಲಸವನ್ನು ಮಾಡುತ್ತಾರೆ. ಚಿತ್ರದುರ್ಗ ಜಿಲ್ಲೆ ಬರದ ನಾಡು ಎಂದು ಹೆಸರಾಗಿದೆ ಇದನ್ನು ನಿಮ್ಮ ಆಧಿಕಾರದ ಅವಧಿಯಲ್ಲಿ ನಿಘಿಸುವ ಕಾರ್ಯವಾಗಬೇಕಿದೆ, ಚಿತ್ರದುರ್ಗದಲ್ಲಿ ಐತಿಹಾಕವಾದ ಸ್ಥಳಗಳು ಬಹಳ ಇವೆ ಅವುಗಳನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವುದರ ಮೂಲಕ ಜಿಲ್ಲೆಯನ್ನು ಅಭೀವೃದ್ದಿ ಮಾಡಬೇಕಿದೆ ಎಂದರು. 

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ರಘು ಮಾತನಾಡಿ, ರಘುಮೂರ್ತಿಯವರಿಗೆ ಪಕ್ಷ ಅವರ ಕಾರ್ಯವನ್ನು ಗುರುತಿಸಿ ಮಂತ್ರಿ ಸ್ಥಾನವನ್ನು ನೀಡಿದೆ. ನಮ್ಮ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಯಾವುದೇ ಫಲಾಫೇಕ್ಷೆ ಇಲ್ಲದೆ ಹಲವಾರು ಜನತೆ ದುಡಿಯುತ್ತಿದ್ದಾರೆ ಅತಂಹವರನ್ನು ಗುರುತಿಸಿ ಅವರಿಗೆ ಅರ್ಥಿಕವಾಗಿ ಶಕ್ತಿಯನ್ನು ತುಂಬುವಂತ ಕಾರ್ಯವನ್ನು ಮಾಡಬೇಕಿದೆ, ನಿಮ್ಮ ಅಧಿಕಾರದ ಸಮಯದಲ್ಲಿ ಸಾಧ್ಯವಾದಷ್ಟು ನಮ್ಮ ಕಾರ್ಯಕರ್ತರಿಗೆ ನೆರವನ್ನು ನೀಡುವಂತೆ ಮನವಿ ಮಾಡಿದರು.

ಡಿಸಿಸಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ ಮಾತನಾಡಿ, ಸಚಿವರನ್ನು ಅದ್ದೂರಿಯಾಗಿ ಸ್ವಾಗತ ಮಾಡಬೇಕೆಂದು ಬಯಕೆ ಇತತು ಆದರೆ ಸಮಯದ ಅಭಾವದಿಂದ ಅವರನ್ನು ಅತೀ ತುರ್ತಾಗಿ ಕಡಿಮೆ ಸಮಯದಲ್ಲಿ ಬರ ಮಾಡಿಕೊಳ್ಳಲಾಗಿದೆ, ಚಿತ್ರದುರ್ಗ ಬರದ ನಾಡಾಗಿದೆ 2013ರಿಂದ ಭದ್ರಾ ನೀರು ಹರಿಯುತ್ತದೆ ಎಂಬ ನಂಬಿಕೆಯ ಮೇಲೆ ಈ ಭಾಗದ ಜನತೆ ಜೀವನ ನಡೆಸುತ್ತಿದ್ದಾರೆ. ಅದನ್ನು ಹುಸಿ ಮಾಡದೇ ಶೀಘ್ರವಾಗಿ ಚಿತ್ರದುರ್ಗಕ್ಕೆ ಭದ್ರಾ ನೀರು ಹರಿಯುವಂತೆ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಸೇವಾದಳದ ಅಧ್ಯಕ್ಷ ಭೂತೇಶ್, ಬಿ.ಟಿ.ಜಗದೀಶ್, ಗ್ಯಾರೆಂಟಿ ಅಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ, ಮರುಳಾರಾಧ್ಯ, ವೆಂಕಟೇಶ್, ರುದ್ರಾಣೀ ಗಂಗಾಧರ್ ಮಧುಗೌಢ, ನಾಗರಾಜ್ ಜಾಹ್ನವಿ ಸೇರಿದಂತೆ ಇತರರು ಭಾಗವಹಿಸಿದ್ದರು. 

ಕರ್ನಾಟಕ ಸರ್ಕಾರದ ಡಿ.ಕೆ.ಶಿವಕುಮಾರ್ ರವರ ಸಚಿವ ಸಂಪುಟದಲ್ಲಿ ಸಚಿವರಾಗಿ ನೇಮಕವಾದ ನಂತರ ಪ್ರಥಮ ಬಾರಿಗೆ ಚಿತ್ರದುರ್ಗ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರನ್ನು ಪಕ್ಷದ ಕಾರ್ಯಕರ್ತರು, ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಅದ್ದೂರಿಯಾಗಿ ಬರ ಮಾಡಿಕೊಂಡು ಜೆಸಿಬಿ ಮೂಲಕ ಹೂವಿನ ಮಳೆಯನ್ನು ಸುರಿಸಿ, ಬೃಹತ್ ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಿಸಿ ಗುಚ್ಚಗಳನ್ನು ನೀಡಿ ಶಾಲುಗಳನ್ನು ಹಾಕಿ ಸ್ವಾಗತ ಮಾಡಿಕೊಳ್ಳಲಾಯಿತು.

Leave a Reply

Your email address will not be published. Required fields are marked *