ಜಮೀನು ತೆರಿಗೆ ಕಟ್ಟದ ಐಶ್ವರ್ಯಾ ರೈಗೆ ನೋಟೀಸ್ ಜಾರಿ..!

ಮುಂಬೈ: ಬಾಲಿವುಡ್ ಎವರ್ ಗ್ರೀನ್ ಸುಂದರಿ ಐಶ್ವರ್ಯಾ ರೈ. ಮಂಗಳೂರಿನ ಈ ಬೆಡಗಿ ಬಗೆಗಿನ ಒಲವು ಈಗಲೂ ಕಡಿಮೆಯಾಗಿಲ್ಲ. ಸಿನಿಮಾಗಳಲ್ಲೂ ನಟಿಸುತ್ತಾ, ಫ್ಯಾಮಿಲಿಗೂ ಹೆಚ್ಚು ಸಮಯ ಕೊಡುತ್ತಿರುವ ನಟಿ ಐಶ್ವರ್ಯಾ ರೈ, ಆಗಾಗ ಮಗಳು ಆರಾಧ್ಯ ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗುತ್ತಲೇ ಇರುತ್ತಾರೆ. ಬಾಲಿವುಡ್ ನಲ್ಲಿಯೇ ತುಂಬಾ ಶ್ರೀಮಂತ ಕುಟುಂಬದ ಚೆಲುವೆಗೆ ನೋಟೀಸ್ ಜಾರಿ ಮಾಡಲಾಗಿದೆ.

ಮಹಾರಾಷ್ಟ್ರದ ಜಿಲ್ಲಾಡಳಿತ ನೋಟೀಸ್ ನೀಡಿದೆ. ನಾಸಿಕ್ ಜಿಲ್ಲೆಯ ಸಿನ್ನಾರ್ ನ ತಂಗಾವ್ ಬಳಿ ಅಡ್ವಾಡಿಯ ಗುಡ್ಡಗಾಡು ಪ್ರದೇಶದಲ್ಲಿ ಒಂದು ಹೆಕ್ಟೇರ್ ಗೂ ಹೆಚ್ಚು ಜಮೀನನ್ನು ಹೊಂದಿದ್ದಾರೆ. ಇದು ಐಶ್ವರ್ಯಾ ಹೆಸರಿನಲ್ಲಿ ಇದೆ ಎನ್ನಲಾಗಿದೆ. ಈ ಜಮೀನಿನ ಕಂದಾಯವನ್ನು ನಟಿ ಐಶ್ವರ್ಯಾ ರೈ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸುಮಾರು 22 ಸಾವಿರ ಕಂದಾಯವನ್ನು ಪಾವತಿಸಬೇಕಾಗಿದೆಯಂತೆ. ಈ ಜಮೀನಿಗೆ ಸಂಬಂಧಿಸಿದಂತೆ ತೆರೆಗೆ ಕಟ್ಟಲೂ ಹಲವು ಬಾರಿ ಸೂಚನೆ ನೀಡಲಾಗಿದೆ. ಆದರೂ ತೆರೆಗೆ ಕಟ್ಟಿಲ್ಲ. ತೆರಿಗೆ ಕಟ್ಟಲು ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆ ಜಿಲ್ಲಾಡಳಿತ ನೋಟಿಸ್ ನೀಡಿದೆ ಎನ್ನಲಾಗಿದೆ.

The post ಜಮೀನು ತೆರಿಗೆ ಕಟ್ಟದ ಐಶ್ವರ್ಯಾ ರೈಗೆ ನೋಟೀಸ್ ಜಾರಿ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/kZQXKHS
via IFTTT

Leave a Reply

Your email address will not be published. Required fields are marked *