ಚಿತ್ರದುರ್ಗ|ಜು.19ರಂದು ಗಾಣಿಗ ಸಮಾಜದ ಬೃಹತ್ ಸಮಾವೇಶ: ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ವೈದ್ಯರ ಸನ್ಮಾನ.

ಚಿತ್ರದುರ್ಗ ಜು. 13

ಚಿತ್ರದುರ್ಗ ತಾಲೂಕು ಅಖಿಲ ಭಾರತ ಗಾಣಿಗರ ಸಂಘ (ರಿ)ವತಿಯಿಂದ ಎಸ್,ಎಸ್.ಎಲ್.ಸಿ. ಮತ್ತು ಪಿಯು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, 2025-26 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸಮುದಾಯದ ವೈದ್ಯರುಗಳಿಗೆ ಸನ್ಮಾನ ಸಮಾರಂಭವೂ ಜು. 19ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರದಾನ ಕಾರ್ಯದರ್ಶಿಗಳಾದ ಟಿ.ಪಿ.ಜ್ಞಾನಮೂರ್ತಿ ತಿಳಿಸಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ವನಶ್ರೀ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಜಯಬಸವಕುಮಾರ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಶಾಸಕರಾದ ಲಕ್ಷ್ಮಣ್ ಸವದಿ ಉದ್ಘಾಟಿಸಲಿದ್ದಾರೆ. ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಚಿತ್ರದುರ್ಗ ತಾಲೂಕು ಗಣಿಗಾರರ ಸಂಘದ ಅಧ್ಯಕ್ಷರಾದ ಎ.ಆರ್. ತಿಪ್ಪೇಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡ ಲಿದ್ದಾರೆ. ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಮೇಘನ.ಜಿ,ರವರು ರಚಿಸಿದ ಕೃತಿ `ಎಣ್ಣೆ ಗಾಣಗಳು': ಪ್ರಕರಣ ಅಧ್ಯಯನವನ್ನು ಅಖಿಲ ಭಾರತ ಗಾಣಿಗರ ಸಂಘದ ರಾಜ್ಯಾಧ್ಯಕ್ಷರಾದ ಸುರೇಶ್ ಸಜ್ಜನ್ ಬಿಡುಗಡೆ ಮಾಡಲಿದ್ದಾರೆ. ಗಾಣಿಗ ಸಮಾಜದ ವಿದ್ಯಾಮಾನಗಳು ಬಗ್ಗೆ ವಿಜಯಪುರದ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಎಸ್. ಲೋಣಿ ಉಪನ್ಯಾಸ ನೀಡಲಿದ್ದಾರೆ.

ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘದ ರಾಜ್ಯಾಧ್ಯಕ್ಷರು (ರಿ.) ಹಾಗೂ ಚಲನಚಿತ್ರ ನಟ ಮತ್ತು ನಿರ್ಮಾಪಕರಾದ ಮಹಾಂತೇಶ ವಿ. ಚೋಳಗುಡ್ಡ, ಸಮಾಜದ ಮುಖಂಡರಾದ ಬಾದಾಮಿಯ ಶೇಖರ ಗೌಡ ವಿ. ಪಾಟೀಲ, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷರಾದ ಡಿ.ಎಸ್.ಸುರೇಶ್‍ಬಾಬು (ಸೈಟ್ ಬಾಬಣ್ಣ), ತಾಲ್ಲೂಕು ಗಾಣಿಗರ ಸಂಘ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಕೆ.ಸಿ.ವೀಣಾ, ಬೆಂಗಳೂರು ವಿಭಾಗದ ಅ.ಭಾ.ಗ್ರಾ.ಸಂಘ (ರಿ.),ದ ಹಿರಿಯ ಉಪಾಧ್ಯಕ್ಷ ರಾದ ಡಿ.ಎಸ್.ರುದ್ರಮುನಿ, ಭರಮಸಾಗರ, ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *