ಸಾಧಕರಲ್ಲಿ ನಿಷ್ಠೆ, ಭಕ್ತಿ, ಪ್ರಾಮಾಣಿಕತೆ ಇರಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

ಚಿತ್ರದುರ್ಗ ನ. 23

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಎಲೆ ಮರೆಯ ಕಾಯಿಯಂತಿರುವವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನನ್ನನ್ನು ಸನ್ಮಾನಿಸಿದಷ್ಟ ಖುಷಿಯಾಗಿದೆ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ಎಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಅಮೃತ ಮಹೋತ್ಸವದ ನಿಮಿತ್ತ ವಿವಿಧ ರಂಗಗಳಲ್ಲಿನ 75 ಸಾಧಕರುಗಳನ್ನು ಗುರುತಿಸಿ ರಂಗ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿವ ಸಂಚಾರ ಪುರಸ್ಕøತರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಯಾರಿಗಾದರೂ ವಯಸ್ಸಾಗುವುದು ದೊಡ್ಡದಲ್ಲ. 75 ವಷರ್Àಗಳಲ್ಲಿ ಮಾಡಿದ ಸತ್ಕಾರ್ಯ, ದುಷÁ್ಕರ್ಯಗಳನ್ನು ಕುರಿತು ಆತ್ಮಾವಲೋಕನ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ನಡೆದಾಗ ಮಾತ್ರ ಬದುಕಿದ್ದಕ್ಕೂ ಸಾರ್ಥಕವಾಗುತ್ತದೆ. ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ ಎಂದು ಹೇಳಿದರು.

ಸಾಧಕರುಗಳಲ್ಲಿ ನಿಷ್ಟ ಭಕ್ತಿ, ಪ್ರಾಮಾಣಿಕತೆಯಿರಬೇಕು. ಸಮಸ್ಯೆ, ಸವಾಲುಗಳನ್ನು ಎದುರಿಸಿ ಜೀವನೋತ್ಸಾಹದಿಂದ ಮುಂದಿನ ಹೆಜ್ಜೆಗಳನ್ನು ಇಡಬೇಕು. ವೇದಿಕೆಗೆ ಬರುವ ಮುನ್ನಾ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ಗೆ ಪುಸ್ತಕಗಳ ಹಾರ ಹಾಕಿದ್ದು, ರಾಜಾವೀರ ಮದಕರಿನಾಯಕನಿಗೆ ಮೂವತ್ತು ವರ್ಷಗಳ ಶಿವ ಸಂಚಾರ ನಾಟಕಗಳನ್ನು ನೆನಪಿಸುವ ಪುಸ್ತಕಗಳ ಹಾರ ಸಮರ್ಪಿಸಿದ್ದು, ರಾಜ್ಯದಲ್ಲಿ ಇದೆ ಮೊದಲು. ಹಣವಿದ್ದವರೆಲ್ಲಾ ಒಳ್ಳೆ ಕೆಲಸಗಳನ್ನು ಮಾಡಲು ಆಗಲ್ಲ. ಜನಬಲದಿಂದ ಮಾತ್ರ ಇಂತಹ ಕೆಲಸಗಳನ್ನು ಮಾಡಬಹುದು ಎಂದು ತಿಳಿಸಿದರು.

ರಂಗ ಮಂಟಪಕ್ಕೆ ತ.ರಾ.ಸು.ರಂಗಮಂದಿರವೆಂದು ನಾಮಕರಣ ಮಾಡಿಯಾಗಿದೆ. ಕೊನೆ ಪಕ್ಷ ವೇದಿಕೆಗಾದರೂ ನಾಟಕಕಾರ ಸಿ.ಜಿ.ಕೆ. ಹೆಸರನ್ನು ನಾಮಕರಣ ಮಾಡಬೇಕು. ಇರುವಷ್ಟು ಕಾಲ ಜನಮುಖಿ ಕೆಲಸ ಮಾಡಿದರೆ ಸಾಕು. ಯೋಗ್ಯ ಸ್ವಾಮೀಜಿಗಳಾಗುವುದು ಕಷ್ಟ ಬಸವಣ್ಣ, ಅಕ್ಕಮಹಾದೇವಿಯವರಂತಾದಾಗ ಆಗ ಸುಂದರ ಸಮಾಜ ನಿರ್ಮಾಣವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಒಳ್ಳೆಯವರು, ಕೆಟ್ಟವರು ಇದ್ದಾರೆ. ಒಳ್ಳೆಯದನ್ನು ಜೀವನದಲ್ಲಿ ಪ್ರತಿಯೊಬ್ಬರು ಪಾಲಿಸಬೇಕು. ಲೋಕ ಮೆಚ್ಚುವಂತ ಸತ್ಕಾರ್ಯ ಮಾಡಿರುವ ಬಸವಣ್ಣನವರ ಕುರಿತು ರವಿ ಹಂಜೆ ಅವಹೇಳನವಾಗಿ ಮಾತನಾಡಿರುವುದು ಶರಣರಿಗೆ ಮಾಡಿರುವ ಅಪಮಾನ, ಇಂತಹ ಲೇಖಕನ ತಲೆ ತೆಗೆದರೆ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಯಾರೋ ಘೋಷಿಸಿದ್ದಾರೆ. ತಲೆ ತೆಗೆಯುವುದು ನಮ್ಮ ಕೆಲಸವಲ್ಲ. ತಲೆಯಲ್ಲಿರುವ ಕಸವನ್ನು ತೆಗೆಯಬೇಕು. ಸರ್ಕಾರ ಇಂತಹ ಕೃತಿಯನ್ನು ಮುಟ್ಟುಗೋಲು ಹಾಕಿರುವುದು ದೊಡ್ಡದಲ್ಲ. ರಂಜಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿರುವುದು ನಿರಂತರವಾಗಿ ನಡೆಯಲಿ. ಬುದ್ದಿಗಳಿಂದ ಪ್ರತಿಯೊಬ್ಬರು ಶಿಸ್ತು ಕಲಿಯಬೇಕಿದೆ. ಸಾಧಕರುಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಗಲಿ ಎಂದು ಆಶಿಸಿದರು.
ಶಾಸಕರು ಕೆ.ಸಿ.ವೀರೇಂದ್ರ ಪಪ್ಪಿ ಚಿತ್ರದುರ್ಗ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಐವತ್ತು ವ?ರ್Àಗಳನ್ನು ಸ್ವಾಮಿಗಳಾಗಿ ಕಳೆದಿರುವುದು ದೊಡ್ಡಸಾಧನೆ.ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ನಿವೃತ್ತಿಯಿದೆ. ಆದರೆ ಸ್ವಾಮೀಜಿಗಳಿಗೆ ನಿವೃತ್ತಿಯಿಲ್ಲ. ಯಾವಾಗ ಬೇಕಾದರೂ ಸ್ವಾಮಿಗಳ ಮೇಲೆ ಕಳಂಕ ಬರಬಹುದು. ಆದರೆ ಈ ಸ್ವಾಮೀಜಿಗಳ ಮೇಲೆ ಯಾವುದೇ ಕಪ್ಪು ಚುಕ್ಕೆಯಿಲ್ಲ ಎಂದು ಹಷರ್ ವ್ಯಕ್ತಪಡಿಸಿದರು.

ಮಾಜಿ ಶಾಸಕರು ಎಸ್.ಕೆ.ಬಸವರಾಜನ್

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕೇವಲ ಕಲೆ, ಸಾಹಿತ್ಯ, ಸಂಗೀತ, ನಾಟಕಕ್ಕ?É್ಟ ಸೀಮಿತವಾಗಿಲ್ಲ. ಸಮಾಜ ಸುಧಾರಣೆಗೆ ಅವರ ಕೊಡುಗೆ ಅಪಾರವಾಗಿದೆ. ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟವರು ಸಾಣೆಹಳ್ಳಿಯ ಸ್ವಾಮಿಗಳು. ರಂಗಭೂಮಿ ಮೂಲಕ ಸಾಣೆಹಳ್ಳಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಕೀರ್ತಿ ಸಾಣೆಹಳ್ಳಿ ಮಠಕ್ಕೆ ಸಲ್ಲುತ್ತದೆ.

ಶಾಸಕರು ಡಾ.ಎಂ.ಚಂದ್ರಪ್ಪ ಹೊಳಲ್ಕೆರೆ

ಶಿವಸಂಚಾರ ನಾಟಕವನ್ನು ಉತ್ತರ ಭಾರತಕ್ಕೆ ಪಸರಿಸಿರುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಸಮಾಜದ ತಪ್ಪು ಹಾಗೂ ನೂನ್ಯತೆಗಳನ್ನು ನಾಟಕದ ಮೂಲಕ ತಿದ್ದುತ್ತಿದ್ದಾರೆ. ನೇರ ನಿ?À್ಟುರ ನುಡಿಯವರು. ಅವರ ಸಾಧನೆಗಳೆ ಗೋಲ್ಡ್ ಮೆಡಲ್‍ಗಳಾಗಿವೆ ಎಂದರು.

ಮಾಜಿ ಶಾಸಕರು ಜಿ.ಹೆಚ್.ತಿಪ್ಪಾರೆಡ್ಡಿ

ಸಾಣೇಹಳ್ಳಿ ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯುತ್ತೇವೆ.ನಮ್ಮ ಜೀವನದಲ್ಲಿ ಸಮಯ ಉತ್ತಮವಾಗಿ ಬಳಸಿಕೊಳ್ಳಬೇಕು. ಯಾವುದೇ ಸಾಧನೆ ಮಾಡಲು ಕಠಿಣ ಪರಿಶ್ರಮ ಬೇಕು.ಈ ರಾಜ್ಯಕ್ಕೆ ಮಾದರಿಯಾಗುವಂತೆ ಪಂಡಿತಾರಾಧ್ಯ ಶ್ರೀಗಳು ಬದುಕು
ನಡೆಸಿದ್ದಾರೆ.

ಪಿ.ರಘು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *