ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಬಹುದಾ ಎಂದರೆ 100% ಸೋಲಿಸಬಹುದು ಎಂದ ರಾಹುಲ್ ಗಾಂಧಿ..!

 

2024ರ ಲೋಕಸಭಾ ಚುನಾವಣೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲೇಬೇಕೆಂದು ಪ್ರತಿಪಕ್ಷಗಳು ಪಣ ತೊಟ್ಟಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿವೆ. ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ರಾಹುಲ್ ಗಾಂಧಿಗೆ ಪ್ರಶ್ನೆಯೊಂದು ಎದುರಾಗಿದೆ. ಪ್ರಧಾನಿ ಮೋದಿಯನ್ನು ಸೋಲಿಸಬಹುದೇ ಎಂದು..?

ಸಂದರ್ಶನದಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ, ತಮ್ಮ ಭಾರತ್ ಜೋಡೋ ಯಾತ್ರೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಸೋಲಿಸುವ ಕುರಿತು ಪಾಸಿಟಿವ್ ಆಗಿ ಉತ್ತರ ನೀಡಿದ ರಾಹುಲ್ ಗಾಂಧಿ, ಪ್ರತಿಪಕ್ಷಗಳ ಮೇಲೆ ನನಗೆ ವಿಶ್ವಾಸವಿದೆ. ಪ್ರತಿ ಪಕಗಳು ಒಗ್ಗೂಡಿದರೆ 100% ಪ್ರಧಾನಿ ಮೋದಿಯನ್ನು ಸೋಲಿಸಬಹುದು ಎಂದಿದ್ದಾರೆ.

ನೀವೂ ವಿರೋಧದ ದೃಷ್ಟಿಯಲ್ಲಿ ನೋಡಿದರೆ ಬಲ ಮತ್ತು ಎಡ ಅಲ್ಲ. ಶಾಂತಿ ಮತ್ತು ಒಕ್ಕೂಟದ ಪರ್ಯಾಯವನ್ನು ನೀಡುವ ಮೂಲಕ ಪ್ಯಾಸಿಸಂ ಅನ್ನು ಸೋಲಿಸಲಾಗುತ್ತದೆ. ಭಾರತದ ಎರಡು ದೃಷ್ಟಿ ಕೋನಗಳು ಎದುರಾದ್ರೆ ನಾವೂ ಗೆಲ್ಲುವುದು ಖಚಿತ. ಬಡತನ, ಅನಕ್ಷರತೆ, ಹಣದುಬ್ಬರ, ಕೋವಿಡ್ ನಂತರ ಜನರನ್ನು ಬೇರೆಡೆಗೆ ಸೆಳೆಯುವ ಕೆಲಸವಾಗುತ್ತಿದೆ. ಚೀನಾ ಗಡಿ ವಿಚಾರದ ಬಗ್ಗೆಯೂ ರಾಹುಲ್ ಗಾಂಧಿ ಈ ಸಂದರ್ಶನದಲ್ಲಿ ಮಾತನಾಡಿ ಆಕ್ರೋಶ ಹೊರ ಹಾಕಿದ್ದಾರೆ.

The post ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಬಹುದಾ ಎಂದರೆ 100% ಸೋಲಿಸಬಹುದು ಎಂದ ರಾಹುಲ್ ಗಾಂಧಿ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/7zYGTS9
via IFTTT

Leave a Reply

Your email address will not be published. Required fields are marked *