RCB vs PBKS, IPL 2023: ಆರ್​ಸಿಬಿಗೆ ಇಂದು ಮೊಹಾಲಿಯಲ್ಲಿ ಕಠಿಣ ಪಂದ್ಯ: ಪಿಚ್ ಬಗ್ಗೆ ಕೇಳಿ ಶಾಕ್ ಆದ ಡುಪ್ಲೆಸಿಸ್ ಪಡೆ

ಐಪಿಎಲ್ 2023 ರಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲದೆ. ಪಂಜಾಬ್ ಕ್ರಿಕೆಟ್ ಅಸೋಸೊಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ಆಯೋಜಿಸಲಾಗಿದೆ.ಆರ್​ಸಿಬಿ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯ ಸಾಧಿಸಿದೆ. ಉಳಿದ ಮೂರು ಪಂದ್ಯದಲ್ಲಿ ಸೋಲುಂಡಿದೆ. ಇತ್ತ ಪಂಜಾಬ್ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ಎರಡು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಗೆಲುವು ಅನಿವಾರ್ಯ.ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಆರ್​ಸಿಬಿಗೆ ಆಘಾತ ಉಂಟಾಗಿದೆ. ಡುಪ್ಲೆಸಿಸ್ ಪಡೆಯ ದೊಡ್ಡ ಹಿನ್ನಡೆ ಬೌಲಿಂಗ್. ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್​ಗಳು ಮಾರಕವಾಗಿ ಕಾಣಿಸುತ್ತಿಲ್ಲ. ಹೀಗಾಗಿ ಬೌಲಿಂಗ್ ಪಿಚ್​ನಲ್ಲಿ ಆರ್​ಸಿಬಿ ಅಗ್ನಿ ಪರೀಕ್ಷೆ ಎದುರಿಸಲಿದೆ.ಮೊಹಾಲಿಯ ಪಿಚ್ ವೇಗದ ಬೌಲರ್​ಗಳಿಗೆ ಹೆಚ್ಚು ಸಹಕಾರ ನೀಡಲಿದೆ. ಮುಖ್ಯವಾಗಿ ಆರಂಭದ ಕೆಲವು ಓವರ್​ಗಳಲ್ಲಿ ಇಲ್ಲಿ ವೇಗಿಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ. ಬೌನ್ಸ್ ಅನ್ನು ಇಲ್ಲಿ ನಿರೀಕ್ಷಿಸಬಹುದು. ಒಂದು ಬಾರಿ ಬ್ಯಾಟರ್ ಸೆಟ್ ಆದರೆ, ಇಲ್ಲಿ ಸುಲಭವಾಗಿ ರನ್ ಕಲೆಹಾಕಬಹುದು.ಹೀಗಾಗಿ ಬ್ಯಾಟರ್ ಸೆಟ್ ಆಗುವ ಮುನ್ನವೇ ಬೌಲರ್​ಗಳು ಅವರನ್ನು ಪೆವಿಲಿಯನ್​ಗೆ ಅಟ್ಟಬೇಕಿದೆ. ಬೌಲಿಂಗ್​ನಲ್ಲಿ ದುರ್ಬಲವಾಗಿರುವ ಆರ್​ಸಿಬಿ ಎದುರಾಳಿಯನ್ನು ಹೇಗೆ ಮಟ್ಟುಹಾಕುತ್ತೆ ನೋಡಬೇಕಿದೆ.ಇಂದಿನ ಪಂದ್ಯಕ್ಕೆ ಯಾವುದೇ ಮಳೆಯ ಸಾಧ್ಯತೆ ಇಲ್ಲ. 36-40 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಇರಲಿದೆ. 58 ಐಪಿಎಲ್ ಪಂದ್ಯಗಳು ಮೊಹಾಲಿಯಲ್ಲಿ ನಡೆದಿದ್ದು, 33 ಪಂದ್ಯವನ್ನು ಚೇಸಿಂಗ್ ಮಾಡಿದ ತಂಡ ಗೆದ್ದಿದೆ. ಹಾಗೆಯೆ 25 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಜಯ ಸಾಧಿಸಿದೆ.ಪ್ರತಿ ಬಾರಿಯಂತೆ ಈ ಬಾರಿಕೂಡ ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿದ್ದರೂ ಬೌಲಿಂಗ್​ನಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿದೆ. ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್ ಕೂಡ ಮಾರಕವಾಗಿ ಗೋಚರಿಸುತ್ತಿಲ್ಲ.ಇಂದಿನ ಪಂದ್ಯಕ್ಕೆ ಆರ್​ಸಿಬಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಖಚಿತ ಎಂದು ಹೇಳಬಹುದು. ಹರ್ಷಲ್ ಪಟೇಲ್ ಪದೇಪದೇ ದುಬಾರಿ ಆಗುತ್ತಿದ್ದಾರೆ. ವಿಜಯ್​ಕುಮಾರ್ ವಿಶ್ಯಾಂಕ್ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದು ಬಿಟ್ಟರೆ ನಂತರದಲ್ಲಿ ರನ್ ಹರಿಬಿಟ್ಟಿದ್ದಾರೆ.ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್, ಶಹ್ಬಾಜ್ ಅಹ್ಮಾದ್ ಕಡೆಯಿಂದ ಉತ್ತಮ ಆಟಬರಬೇಕಿದೆ. ಪಾಯಿಂಟ್ ಟೇಬಲ್​ನಲ್ಲಿ ಮೇಲಕ್ಕೇರಲು ಇಂದಿನ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

source https://tv9kannada.com/photo-gallery/cricket-photos/pbks-vs-rcb-tough-match-for-rcb-today-in-mohali-faf-duplessis-team-is-shocked-to-hear-about-the-pitch-vb-au48-559694.html

Leave a Reply

Your email address will not be published. Required fields are marked *