ತ್ಯಾಗದ ಮನೋಭಾವವೇ ಸಮಾಜದಲ್ಲಿ ದೊಡ್ಡವನಾಗುವ ಮಾರ್ಗ: ಡಾ. ಬಾಬು ಜಗಜೀವನ್ ರಾಮ್ ಸ್ಮರಣೆಯಲ್ಲಿ ಆರ್.ಕೆ. ಸರ್ದಾರ್.

ಚಿತ್ರದುರ್ಗ ಜು. 06

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮನುಷ್ಯರಾದವರ ತ್ಯಾಗದ ಗುಣವನ್ನು ಹೊಂದಿದಾಗ ಮಾತ್ರ ದೊಡ್ಡವನಾಗಲು ಸಾಧ್ಯವಿದೆ, ಸ್ವಾರ್ಥ ಇದ್ದಾಗ ಸಮಾಜದಲ್ಲಿ ದೊಡ್ಡವನಾಗಲು ಸಾಧ್ಯವಿಲ್ಲ ಇದನ್ನು ಮೈಗೂಂಡಿಸಿಕೊಂಡಿದ್ದ ಡಾ,ಬಾಬು ಜಗ ಜೀವನರಾಂರವರು ತಮ್ಮ ಬದುಕಿನಲ್ಲಿ ಅಧಿಕಾರಕ್ಕಾಗಿ ಎಂದು ಸಹಾ ಆಸೆಯನ್ನು ಪಟ್ಟವರಲ್ಲ ತಮಗೆ ಸಿಕ್ಕ ಖಾತೆಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ ಎಂದು ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್,ಕೆ. ಸರ್ದಾರ್ ತಿಳಿಸಿದರು.

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನ್ ರಾಂರವರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ದೇಶಕ್ಕಾಗಿ ತ್ಯಾಗವನ್ನು ಮಾಡಿದ ಮಹಾನೀಯರನ್ನು ಇಂದು ನಾವುಗಳು ನೆನೆಯಬೇಕಿದೆ ಅವರ ಕಾರ್ಯವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವಂತ ಕಾರ್ಯವಾಗಬೇಕಿದೆ ನಮ್ಮ ಬದುಕು ಬೇರೆಯವರಿಗೆ ಸಹಾಯವಾಗಬೇಕಿದೆ, ಈ ರೀತಿಯಾಗಿ ಬದುಕಿದವರು ಡಾ,ಬಾಬು ಜಗ ಜೀವನರಾಂರವರು ಅವರ ಎಂದೂ ಸಹಾ ಅಧಿಕಾರಕ್ಕಾಗಿ ಆಸೆಯನ್ನು ಪಟ್ಟವರಲ್ಲ, ನಮ್ಮ ಆಧಿಕಾರ ಅವಧಿ ಪೂರ್ಣವಾಗಿ ಬಡವರ, ದೀನ ದಲಿತರ ಹಿಂದುಳಿದ ಏಳ್ಗೆಗಾಗಿ ಸವಿಸಿದ್ದಾರೆ, ನಾವು ಬದುಕಿರುವಷ್ಟು ದಿವಸ ಬೇರೆಯವರಿಗೆ ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕಿದೆ ಅಗ ನಾವು ಸತ್ತರು ಸಹಾ ವರು ನಮ್ಮನ್ನು ನೆನೆಸುವಂತಾಗಬೇಕಿದೆ ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ಅದನ್ನೂ ಡಾ,ಬಾಬು ಜಗ ಜೀವನರಾಂರವರು ಮಾಡಿದ್ದಾರೆ ಆವರ ಜೀವನದಲ್ಲಿ ಜನತೆ ಸಾಕಷ್ಟು ಸಹಾಯವನ್ನು ಮಾಡುವುದರ ಮೂಲಕ ಇಂದು ಸಹಾ ಅವರನ್ನು ನೆನೆಯುಂತೆ ಮಾಡಲಾಗುತ್ತಿದೆ. ಸ್ವಾರ್ಥ ಇದ್ದಾಗ ಏನ್ನನ್ನುಸಹಾ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ತ್ಯಾಗ ಮನೋಭಾವನೆಯಿಂದ ಮಾತ್ರ ಉತ್ತಮವಾದ ಬದುಕನ್ನು ನಡೆಸಲು ಸಾಧ್ಯವಿದೆ ಎಂದು ಸರ್ದಾರ್ ತಿಳಿಸಿದರು.

ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ ಮಾತನಾಡಿ, ದೇಶಕ್ಕಾಗಿ ಸೇವೆಯನ್ನು ಮಾಡಿದವರನ್ನು ನೆನಸಬೇಕಿದೆ. ಅವರ ಮಾಡಿದ ತ್ಯಾಗದಿಂದಾಗಿ ಇಂದು ನಾವುಗಳು ಇಷ್ಟರ ಮಟ್ಟಿಗೆ ಇದ್ದೇವೆ, ಇಲ್ಲವಾದಲ್ಲಿ ಬ್ರಟಿಷರ ದಾಸ್ಯದಲ್ಲಿ ಇರಬೇಕಿತ್ತು, ಡಾ,ಬಾಬು ಜಗ ಜೀವನರಾಂರವರು ಉಪ ಪ್ರಧಾನಿಯಾಗಿಯೇ ತೃಪ್ತಿಯನ್ನು ಪಟ್ಟುಕೊಳ್ಳಬೇಕಾಯಿತು, ದೇಶದ ಪ್ರಧಾನ ಮಂತ್ರಿಯಾಗಲು ಎಲ್ಲಾ ರೀತಿಯಾದ ಅರ್ಹತೆಯನ್ನು ಹೊಂದಿದ್ದರು ಸಹಾ ಇವರ ದಲಿತರು ಎಂಬ ಕಾರಣಕ್ಕಾಗಿ ಮೇಲ್ವರ್ಗದ ಜನಾಂಗ ಇವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಮುಂದೆ ಬರಲಿಲ್ಲ, ಆದರೆ ಇವರ ವಹಿಸಿಕೊಂಡ ಖಾತೆಗಳಿಗೆ ನ್ಯಾಯವನ್ನು ಒದಗಿಸಿ ಎಲ್ಲವನ್ನು ಸುಭೀಕ್ಷವಾಗಿ ನಡೆಸಿದ್ದಾರೆ ಎಂದರು.

ಜಿ.ಪಂ.ಮಾಜಿ ಸದಸ್ಯರಾದ ನರಸಿಂಹರಾಜು ಮಾತನಾಡಿ, ಡಾ,ಬಾಬು ಜಗ ಜೀವನರಾಂರವರು ದೇಶದ ಆಹಾರ ಮಂತ್ರಿಯಾದಾಗ ದೇಶ ಆಹಾರ ಸಮಸ್ಯೆಯಿಂದ ನರಳುತ್ತಿತ್ತು ಇದನ್ನು ಮನಗಂಡು ಹಸಿರುಕ್ರಾಂತಿಯನ್ನು ನಡೆಸುವುದರ ಮೂಲಕ ದೇಶದ ಆಹಾರ ಸಮಸ್ಯೆಯನ್ನು ನಿವಾರಣೆ ಮಾಡಿದರು. ರೈತರಿಗೆ ಉತ್ತಮವಾದ ಬೀಜ, ಗೋಬ್ಬರ ಬೆಳೆಯನ್ನು ಬೆಳೆಯಲು ನೀರಿನ ವ್ಯವಸ್ಥೆಯನ್ನು ಮಾಡುವುದರ ಮೂಲಕ ಆಹಾರ ಸಮಸ್ಯೆಗೆ ನಾಂದಿ ಹಾಡಿದರು, ವಿವಿಧ ಸಚಿವರಾಗಿ ಉತ್ತಮವಾದ ಆಡಳಿತವನ್ನು ನೀಡಿದರು. ರಕ್ಷಣಾ ಸಚಿವರಾಗಿ ದೇಶವನ್ನು ಶತೃಗಳಿಂದ ಕಾಪಾಡಿದರು. ನಾವುಗಳು ಏನಾದರೂ ಸಾಧನೆಯನ್ನು ಮಾಡಿದಾಗ ಮಾತ್ರ ನಮ್ಮ ಸಾವಿನ ನಂತರ ಸ್ಮರಣೆಯನ್ನು ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಮಾತನಾಡಿ ಡಾ,ಬಾಬು ಜಗ ಜೀವನರಾಂರವರು ನಾಲ್ಕು ಪ್ರಧಾನ ಮಂತ್ರಿಗಳ ಕೈಯಲ್ಲಿ ಸಚಿವರಾಗಿ ಕೆಲಸವನ್ನು ಮಾಡಿದ್ದಾರೆ. ಇದ್ದಲ್ಲದೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಜೊತೆಯಲ್ಲಿಯೂ ಸಹಾ ಕೆಲಸವನ್ನು ಮಾಡಿದ್ದಾರೆ. ತಮಗೆ ವಹಿಸಿದ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ದೇಶದ ಸ್ವಾತಂತ್ರ್ಯ ಸಮಯದಲ್ಲಿ ದೇಶದ ಜನತೆಗೆ ಆಹಾರವನ್ನು ನೀಡುವ ಜವಾಬ್ದಾರಿಯನ್ನು ಹೊತ್ತಿದ್ದು ಇದಕ್ಕೆ ತಕ್ಕಂತೆ ಆಹಾರವನ್ನು ಉತ್ಪಾದನೆಯನ್ನು ಮಾಡಿದರು ಈಗ ಭಾರತ ತನ್ನ 140 ಕೋಟಿ ಜನರಿಗೆ ಆಹಾರವನ್ನು ನೀಡಿ ಬೇರೆ ದೇಶಗಳಿಗೆ ಆಹಾರವನ್ನು ರಫ್ತು ಮಾಡುವಂತ ಸಾಮರ್ಥ್‍ವನ್ನು ಹೊಂದಿದೆ. ಡಾ,ಬಾಬು ಜಗ ಜೀವನರಾಂರವರು ಒಮ್ಮೆ ಕಾಂಗ್ರೆಸ್‍ನ್ನು ಬಿಟ್ಟು ಬೇರೆ ಪಕ್ಷವನ್ನು ರಚನೆ ಮಾಡಿದರು ಆದರೆ ಸ್ವಲ್ಪ ಸಮಯದ ನಂತರ ಅವರು ವಾಪಾಸ್ಸು ಕಾಂಗ್ರೆಸ್‍ಗೆ ಬಂದರು ನಾನು ಸಾಯುವುದಾದರೆ ಕಾಂಗ್ರೆಸ್‍ನಲ್ಲಿ ಸಾಯುತ್ತೇನೆ ಎಂದಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ನಗರಾಧ್ಯಕ್ಷ ಲಕ್ಷ್ಮೀಕಾಂತ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ತಾಲ್ಲೂಕು ಗ್ಯಾರೇಂಟಿ ಅಧ್ಯಕ್ಷರಾದ ಪ್ರಕಾಶ್, ಸೇವಾದಳದ ಅಧ್ಯಕ್ಷ ಭೂತೇಶ್, ಮಹಿಳಾ ಸೇವಾದಳದ ಅಧ್ಯಕ್ಷೆ ನೇತ್ರಾವತಿ, ಗ್ಯಾರೆಂಟಿ ಸಮಿತಿ ಸದಸ್ಯೆ ಇಂದಿರಮ್ಮ, ಮುದಸಿರ್, ಉಪಾಧ್ಯಕ್ಷರಾದ ರವಿಕುಮಾರ್, ಬಸವರಾಜು, ರಾರ್ಬಟ್, ಎಸ್.ಘಟಕದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *