ಚಿತ್ರದುರ್ಗ ಅ. 12
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮಾಜಿ ಸಚಿವರಾದ ದಿ.ಅಶ್ವತ್‍ರೆಡ್ಡಿಯವರ ಮೊಮ್ಮಗ ಸಂದೀಪ್ ಗುಂರ್ಡಾಪಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್‍ರವರು ಸಂದೀಪ್ ಗುಂರ್ಡಾಪಿರವರಿಗೆ ಕಾಂಗ್ರೆಸ್ ಪಕ್ಷದ ಭಾವುಟವನ್ನು ನೀಡುವುದರ ಮೂಲಕ ಶಾಲನ್ನು ಹಾಕಿ ಪಕ್ಷಕ್ಕೆ ಅಧಿಕೃತವಾಗಿ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ರಾಜ್ಯದ ಹಿರಿಯ ಮುತ್ಸದ್ದಿ ಹಾಗೂ ಜಿಲ್ಲೆಯಲ್ಲಿ ಹಲವು ಬಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಜಿ.ಎಚ್. ಅಶ್ವತ್ಥರೆಡ್ಡಿ ಅವರ ಕುಟುಂಬದ ಹಿರಿಯ ಮೊಮ್ಮಗ ಸಂದೀಪ್ ಗುಂಡಾರ್ಪಿ ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಹಿಂದಿನಿಂದಲೂ ಸಾಮಾಜಿಕ ಕಾರ್ಯಕ್ರಮ ಹಾಗೂ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಂದೀಪ್ ಗುಂಡಾರ್ಪಿ ಅವರು, ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲೂ ದೂರದಿಂದಲೇ ಭಾಗವಹಿಸುತ್ತಿದ್ದರು. ಅವರನ್ನು ಪಕ್ಷಕ್ಕೆ ಆಹ್ವಾನಿಸಲಾಗಿದ್ದು, ಅದರಂತೆ ಅವರು ಇಂದು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ ಅಶ್ವತ್ಥರೆಡ್ಡಿ ಅವರ ಬಗ್ಗೆ ಅಪಾರ ಅಭಿಮಾನವಿರುವ ಎಲ್ಲರೂ ಸೇರಿ ಸಂದೀಪ್ ಗುಂಡಾರ್ಪಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿದ ಸಂದೀಪ್ ಗುಂರ್ಡಾಪಿ ತಮ್ಮ ತಾತಂದಿರು ಕಾಂಗ್ರೆಸ್ ಪಕ್ಷದಲ್ಲಿ
ಲೋಕೋಪಯೋಗಿ ಸಚಿವರಾಗಿದ್ದರು ಹಾಗೂ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಹಾಗೂ ಧೀಮಂತ ನಾಯಕರಾಗಿದ್ದರು ತಾವು ದಿವಂಗತ ಮಾಜಿ ಸಚಿವ ಅಶ್ವತ್ಥರೆಡ್ಡಿಯವರ ಮೊಮ್ಮಗ ಹಾಗೂ ಹಿಂದಿನ ಸಚಿವರೊಬ್ಬರ ಕುಟುಂಬದಿಂದ ಬಂದಿರುವುದಾಗಿ ತಿಳಿಸಿ ತಾವೂ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರೂ, ಬಹಿರಂಗವಾಗಿ ಗುರುತಿಸಿ ಕೊಂಡಿರಲಿಲ್ಲ. ಆದರೆ ಈ ದಿನ ಕಾಂಗ್ರೆಸ್ ವತಿಯಿಂದ ಅಧಿಕೃತವಾಗಿ ತಾಜ್‍ಪೀರ್ ಅವರ ತಮಗೆ ಬಾವುಟ ನೀಡಿ, ಪಕ್ಷದ ಶಾಲ್‍ನ್ನು ಹೊಂದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುವುದಾಗಿ ಮತ್ತು ತಮ್ಮಂತಹ ಯುವ ಪಡೆಯನ್ನು ಕಟ್ಟಲು ತಾವು ಉತ್ಸುಕರಾಗಿರುವುದಾಗಿ ತಿಳಿಸಿ ಹಿರಿಯರು ಹಾಗೂ ಮುಖಂಡರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸೇರಿರುವುದು ತಮಗೆ ಅತ್ಯಂತ ಖುಷಿಯನ್ನು ತಂದಿದೆ. ತಮ್ಮ ರಕ್ತದಲ್ಲೇ ಸುಮಾರು ಐದಾರು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಂಟು ಇದ್ದು, ತಾವು ಸೆಕ್ಯುಲರ್ ಮನಸ್ಥಿತಿಯವರಾಗಿ ಸಂವಿಧಾನದ ಆಧಾರದ ಮೇಲೆ ತಮ್ಮ ಮನಸ್ಸನ್ನು ರೂಪಿಸಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷವೇ ತಮಗೆ ಅತ್ಯಂತ ಸೂಕ್ತವಾದ ಪಕ್ಷವಾಗಿದೆ ಎಂದು ದೃಢವಾಗಿ ನಂಬಿರುವುದಾಗಿ ತಿಳಿಸಿದ್ದಾರೆ.
ಈ ದೇಶದ ಸೇವೆಗೆ ಕಾಂಗ್ರೆಸ್ ಪಕ್ಷವೇ ಅತ್ಯಂತ ಒಳ್ಳೆಯ ಪಕ್ಷ ಎಂಬ ಭಾವನೆಯಿಂದ ತಾವು ಮತ್ತೆ ಕಾಂಗ್ರೆಸ್‍ಗೆ ಮರಳಿರುವುದಾಗಿ ಸಂದೀಪ್ ಗುಂಡಾರ್ಪಿ ಸ್ಪಷ್ಟಪಡಿಸಿ. ಇನ್ನುಮುಂದೆ ಪಕ್ಷವನ್ನು ಸಂಘಟಿಸಿ, ಬಲಪಡಿಸುವ ಮೂಲಕ ಪಕ್ಷದ ಬೆಳವಣಿಗೆಗೆ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಸಿ ಕಾರ್ಯಾಧ್ಯಕ್ಷರಾದ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ,ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಕುಮಾರಗೌಡ, ಖುದ್ದುಸ್, ಆನಂತಕುಮಾರ್, ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು