ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ. 06
ನಗರದ ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಶಾರದಾ ಪೂಜಾ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಆಚರಿಸಲಾಯಿತು. ಶಾರದಾ ದೇವಿಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಕಳೆದ ಒಂದು ವರ್ಷದಿಂದ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ಎಲ್ಲ ಮಕ್ಕಳಿಗೂ ಸಹಾ ಒಳ್ಳೆಯದಾಗಲಿ ಎಂಬ ಸುದ್ದದೇಶದಿಂದ ಶಾಲೆಯ ಆಡಳಿತ ಮಂಡಳಿಯವರು ಶಾರದ ಪೂಜೆಯನ್ನು ನಡೆಸಿದ್ದರು.
ಶಾಲಾ ಅಧ್ಯಕ್ಷರಾದ ಬಾಬುಲಲ್ ಜೀ ಪಟಿಯಾತ್ ರವರು ಮಕ್ಕಳನ್ನು ಉದ್ದೇಶಿಸಿ ಯಾವುದೇಭಯ ಬೀತಿಯಿಲ್ಲದೆ ಪರೀಕ್ಷೆಯನ್ನು ಎದುರಿಸಬೇಕೆಂದು ತಿಳಿ ಹೇಳಿದರು ಮಕ್ಕಳಿಗೆ ಹೆಚ್ಚು ಶ್ರಮ ಪಟ್ಟು ಓದಬೇಕು, ಹಾಗೂಏಕಾಗ್ರತೆಯಿಂದ ಓದಬೇಕು ಯಾವುದೇ ಕಾರಣಕ್ಕೂ ಪರೀಕ್ಷೆಯ ಭಯಬೇಡ ಹಬ್ಬದ ರೀತಿಯಲ್ಲಿ ಪರೀಕ್ಷೆಯನ್ನುಸಂಭ್ರಮಿಸಬೇಕು ಎಂದು ಮಕ್ಕಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಸಲಹಾ ಸಮಿತಿಯ ಸದಸ್ಯರಾದ ಪುಕ್‍ರಾಜ್‍ಜೀ ಅಗ್ನಿಗೋತರ್ ಶಾಂತಿಲಾಲ್ ಜೀ ಬಂಬ್, ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಸಿಸೋಡಿಯಾ, ಸಹಕಾರ್ಯದರ್ಶಿ ಸುರೇಶ್‍ಪಟಿಯಾತ್ , ಖಜಾಂಚಿಯಾದ ರಾಜೇಂದ್ರ ದಲೇಷಾ , ಜವೇರಿಲಾಲ್, ಮಹವಿರ್ ದರ್‍ಲೇಷಾ, ಆಶಿಕ್‍ಕುಮಾರ್ ವಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಜಿಮಾ ಸ್ವಾಲೆಹಾ, ಜನಕ ರೆಡ್ಡಿ ಹಾಗೂ ಶಿಕ್ಷಕರು ,ಪೋಷಕರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಶಾಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಅನೇಕ ಹಾಡು, ನೃತ್ಯಗಳನ್ನು ಪ್ರದರ್ಶಿಸಿದರು ಹಾಗೆಯೇ 2025-26ನೇಸಾಲಿನ ಅತೀ ಹೆಚ್ಚು ಅಂಕಗಳಿಸಿದ ಹಾಗೂ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು
ವಿತರಿಸಲಾಯಿತು.
