ಶ್ರಾವಣ ಕೃಷ್ಣ ಚತುರ್ದಶಿ ದಿನಭವಿಷ್ಯ: ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ಚರ್ಚೆ, ಧನಲಾಭದ ಯೋಗ!

ಶಾಲಿವಾಹನ ಶಕವರ್ಷ 1949ರ ಪರಾಭವ ಸಂವತ್ಸರದ ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶೀ ತಿಥಿಯ ಗುರುವಾರದ ಈ ದಿನದ ಪಂಚಾಂಗದ ವಿಶೇಷತೆಗಳು ಹಾಗೂ ದ್ವಾದಶ ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ.

ಇಂದಿನ ದಿನದ ವಿಶೇಷವಾಗಿ ನಿರ್ಮಾಣ ಕಾರ್ಯಕ್ಕೆ ತಾತ್ಕಾಲಿಕ ತಡೆ, ಕಾನೂನಾತ್ಮಕ ಹೋರಾಟ, ದಾಂಪತ್ಯದಲ್ಲಿ ಸಣ್ಣಪುಟ್ಟ ಕಲಹ, ಸಮಯದ ಅಭಾವ, ಮನೋನಿಗ್ರಹ ಹಾಗೂ ಹೊಸ ಕೆಲಸಗಳ ಸಾಧಕ-ಬಾಧಕಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುವ ದಿನವಾಗಿದೆ.

ಇಂದಿನ ಪಂಚಾಂಗದ ಸಂಕ್ಷಿಪ್ತ ವಿವರ:

  • ಸೂರ್ಯೋದಯ: ಬೆಳಿಗ್ಗೆ 06:09
  • ಸೂರ್ಯಾಸ್ತ: ಸಂಜೆ 06:23
  • ರಾಹು ಕಾಲ: ಮಧ್ಯಾಹ್ನ 01:48 ರಿಂದ 03:20 ರವರೆಗೆ
  • ಯಮಗಂಡ ಕಾಲ: ಬೆಳಿಗ್ಗೆ 06:10 ರಿಂದ 07:41 ರವರೆಗೆ
  • ಗುಳಿಕ ಕಾಲ: ಬೆಳಿಗ್ಗೆ 09:13 ರಿಂದ 10:45 ರವರೆಗೆ

ದ್ವಾದಶ ರಾಶಿಗಳ ಫಲಾಫಲಗಳು:

  • ಮೇಷ ರಾಶಿ: ಆಸ್ತಿಯ ಹಂಚಿಕೆಯ ವಿಚಾರದಲ್ಲಿ ಪ್ರಮುಖ ಚರ್ಚೆಗಳು ನಡೆಯಲಿವೆ. ನಿಮ್ಮ ವೃತ್ತಿಪರ ಕೆಲಸಗಳಿಗೆ ಕೆಲವು ವಿಘ್ನಗಳು ಎದುರಾಗಬಹುದು. ಸ್ವ ಉದ್ಯೋಗಿಗಳಿಗೆ ಓಡಾಟ ಹೆಚ್ಚಾಗಲಿದೆ. ವ್ಯಾಪಾರವು ಅಭಿವೃದ್ಧಿ ಹೊಂದಿ ಹಂತ ಹಂತವಾಗಿ ಮೇಲಕ್ಕೇರುವಿರಿ. ಕುಟುಂಬದಲ್ಲಿ ನಿರಾತಂಕ ವಾತಾವರಣವಿರುತ್ತದೆ. ನಿಮ್ಮ ಬಗ್ಗೆ ಇತರರು ಮಾತನಾಡಿಕೊಳ್ಳುವ ವಿಷಯವೊಂದೇ ಅಸಮಾಧಾನ ತರಬಹುದು. ನಿರೀಕ್ಷಿತ ಕಾರ್ಯ ಮುಗಿಯುವವರೆಗೆ ಮನಸ್ಸಿಗೆ ಪೂರ್ಣ ನೆಮ್ಮದಿ ಸಿಗುವುದಿಲ್ಲ.
  • ವೃಷಭ ರಾಶಿ: ಬಂಧುಗಳ ಭೇಟಿಯಿಂದ ಮನಸ್ಸು ಉತ್ಸಾಹದಿಂದ ಕೂಡಿರುತ್ತದೆ. ಮಾಡಬೇಕಾದ ಕೆಲಸಗಳನ್ನು ವೇಗವಾಗಿ ಹಾಗೂ ಎಚ್ಚರಿಕೆಯಿಂದ ಪೂರ್ಣಗೊಳಿಸಿ. ಸಹೋದರನಿಂದ ಅನಿರೀಕ್ಷಿತ ಸಹಾಯ ದೊರೆತು ಮನಸ್ಸಿಗೆ ಸಂತೋಷವಾಗುತ್ತದೆ. ಸಮಾಜದಲ್ಲಿ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಮನೋಭಾವವಿರಲಿ. ಇಷ್ಟವಿಲ್ಲದ ಮಾತುಗಳು ಬೇಸರ ತರಿಸಬಹುದು. ಸಹವಾಸದಿಂದ ಸ್ವಭಾವದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.
  • ಮಿಥುನ ರಾಶಿ: ಇಂದು ನೀವು ಯಾರ ಸಹಾಯವನ್ನೂ ಬಯಸುವುದಿಲ್ಲ. ಆಲಸ್ಯದಿಂದಾಗಿ ಕಚೇರಿಯ ಕೆಲಸಗಳಲ್ಲಿ ಆಸಕ್ತಿ ಕಡಿಮೆ ಇರಲಿದೆ. ಒಳ್ಳೆಯ ಅಭ್ಯಾಸಗಳು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಹಿತಶತ್ರುಗಳನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಸಂಗಾತಿಯೊಂದಿಗೆ ಹೆಚ್ಚು ಸಮಯ ಮಾತನಾಡುತ್ತೀರಿ. ಅನಗತ್ಯ ಕರೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು. ಮನೆಗೆ ಅತಿಥಿಗಳ ಆಗಮನದಿಂದ ದಿನವು ಕಳೆಯಲಿದೆ.
  • ಕರ್ಕಾಟಕ ರಾಶಿ: ಯಾವುದೇ ಸುಲಭವಾಗಿ ಸಿಗುವ ಸತ್ಯಗಳನ್ನು ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ. ವೈಯಕ್ತಿಕ ಕಾರಣಗಳಿಂದ ಉದ್ಯೋಗ ಬದಲಾವಣೆಯ ಯೋಚನೆ ಬರಬಹುದು. ಹಿಂದಿನ ಸಾಲಗಳನ್ನು ತೀರಿಸಿ ನಿರಾಳರಾಗುವಿರಿ. ಅನಾರೋಗ್ಯದ ಕಾರಣದಿಂದ ಪ್ರಯಾಣಗಳನ್ನು ಕಡಿಮೆ ಮಾಡುವುದು ಉತ್ತಮ. ಆರ್ಥಿಕ ಸ್ಥಿತಿಯು ತೃಪ್ತಿಕರವಾಗಿದ್ದರೂ ಮಾನಸಿಕ ನೆಮ್ಮದಿ ಕೊಂಚ ಕೊರತೆಯಾಗಬಹುದು.
  • ಸಿಂಹ ರಾಶಿ: ಅಪರಿಚಿತ ವ್ಯಕ್ತಿಗಳು ನಿಮ್ಮ ಸರಳತೆಯ ಲಾಕ್ ಪಡೆದುಕೊಳ್ಳಲು ಯತ್ನಿಸಬಹುದು. ಸ್ನೇಹಿತರ ಮಾತುಗಳು ಕೆಲವು ಸಂದರ್ಭಗಳಲ್ಲಿ ನಿಮಗೆ ಉಪಯುಕ್ತವಾಗಲಿವೆ. ಉದ್ಯಮವನ್ನು ವಿಸ್ತರಿಸುವ ಹೊಸ ಯೋಚನೆಗಳು ಮೂಡಲಿವೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಸಣ್ಣದಾದ ಅಳುಕು ಕಾಡಬಹುದು. ಒತ್ತಡ ತಗ್ಗಿಸಿಕೊಳ್ಳಲು ಜವಾಬ್ದಾರಿಗಳನ್ನು ಹಂಚಿಕೊಳ್ಳಿ. ಸಮಾಜ ಸೇವಕರ ಭೇಟಿಯಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ.
  • ಕನ್ಯಾ ರಾಶಿ: ಮನಸ್ಸಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸೂಕ್ತ ಮಾರ್ಗಗಳನ್ನು ಹುಡುಕುವಿರಿ. ಸಣ್ಣಪುಟ್ಟ ಕಿರಿಕಿರಿಯಿಂದ ದೂರವಿರಲು ಪ್ರಯತ್ನಿಸಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸವನ್ನು ಇಂದೇ ಮುಗಿಸುವ ನಿರ್ಧಾರ ಮಾಡುವಿರಿ. ದೊಡ್ಡ ಮೊತ್ತದ ವಸ್ತುಗಳನ್ನು ಖರೀದಿಸುವಾಗ ಅವಶ್ಯಕತೆಯ ಬಗ್ಗೆ ಗಮನವಿರಲಿ. ಹೊಸ ಸಂಬಂಧಗಳ ಕಡೆಗೆ ನಿಮ್ಮ ಗಮನ ಹರಿಯಬಹುದು.
  • ತುಲಾ ರಾಶಿ: ಪುಣ್ಯಕ್ಷೇತ್ರಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಯೋಗವಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಾಲವನ್ನು ಮರುಪಾವತಿಸಿ ನಿರಾಳರಾಗುವಿರಿ. ನಿಮ್ಮವರಿಗೆ ಎದುರಾದ ಅವಮಾನವನ್ನು ಸಹಿಸದೆ ಕೋಪಗೊಳ್ಳುವ ಸಾಧ್ಯತೆಯಿದೆ. ಬಂದ ಹಣವನ್ನು ಭದ್ರವಾಗಿ ಜೋಪಾನ ಮಾಡಿಕೊಳ್ಳುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಯಾವುದೇ ಸಂದರ್ಭದಲ್ಲೂ ನಿಮ್ಮವರನ್ನು ಬಿಟ್ಟುಕೊಡದ ಗುಣ ಮೆಚ್ಚುವಂತದ್ದು.
  • ವೃಶ್ಚಿಕ ರಾಶಿ: ಪ್ರಮುಖ ವಸ್ತುವೊಂದನ್ನು ಕಳೆದುಕೊಂಡು ಚಿಂತಾಮಗ್ನರಾಗುವಿರಿ. ಸ್ವಾವಲಂಬನೆಯ ಜೀವನವನ್ನು ನೀವು ಹೆಚ್ಚು ಇಷ್ಟಪಡುತ್ತೀರಿ. ನಿಮಗೆ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸುವಿರಿ. ವೇತನ ಹೆಚ್ಚಳಕ್ಕಾಗಿ ಹಲವು ಮಾರ್ಗಗಳಲ್ಲಿ ಶ್ರಮಿಸುವಿರಿ. ಅಹಂಕಾರವನ್ನು ಎಲ್ಲರ ಮುಂದೆ ಪ್ರದರ್ಶಿಸುವುದು ಬೇಡ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ, ಸಂಗಾತಿಯಿಂದ ಉತ್ತಮ ಪ್ರೋತ್ಸಾಹ ಸಿಗಲಿದೆ.
  • ಧನು ರಾಶಿ: ಅತಿಯಾದ ಒತ್ತಡದಿಂದ ಕೆಲವು ವಿಚಾರಗಳು ಮರೆತುಹೋಗಬಹುದು. ತಲೆನೋವಿನ ಸಮಸ್ಯೆ ಕಾಡಬಹುದು. ಎಲ್ಲರೊಂದಿಗೆ ಬೆರೆಯುವ ಒಳ್ಳೆಯ ಸ್ವಭಾವದಿಂದ ಕೆಲವೊಮ್ಮೆ ತಪ್ಪು ಅಭಿಪ್ರಾಯ ಮೂಡಬಹುದು. ನಿಮ್ಮ ಅಮೂಲ್ಯ ವಸ್ತುಗಳನ್ನು ಇತರರಿಗೆ ಕೊಟ್ಟು ಕಳೆದುಕೊಳ್ಳುವ ಸಂಭವವಿದೆ. ಸಂಗಾತಿಯೊಂದಿಗೆ ಒಡನಾಟ ಸಂತೋಷ ತರಲಿದೆ. ಉತ್ತಮ ಭೂಮಿ ಅಥವಾ ಆಸ್ತಿ ಲಾF ಸಿಗುವ ಯೋಗವಿದೆ.
  • ಮಕರ ರಾಶಿ: ಸಂಗಾತಿಗೆ ಹೊರಸ್ಥಳಗಳಿಗೆ ಪ್ರಯಾಣಿಸುವ ಅಥವಾ ಬೇರೆ ಸ್ಥಳಗಳನ್ನು ನೋಡುವ ಬಯಕೆ ಮೂಡುತ್ತದೆ. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಬಹುದು. ಪ್ರೇಮ ವಿಚಾರವನ್ನು ವ್ಯಕ್ತಪಡಿಸುವಾಗ ಗೊಂದಲಗಳು ಉಂಟಾಗಬಹುದು. ನಿದ್ರೆಯ ಕೊರತೆ ಕಾಡಬಹುದು. ಇತರರೊಂದಿಗೆ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಹಿಂಜರಿಯುವಿರಿ.
  • ಕುಂಭ ರಾಶಿ: ಇಂದು ಉದ್ಯೋಗದ ಕೆಲಸಗಳಿಂದ ಕೊಂಚ ವಿರಾಮ ಪಡೆದು ಮನೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುವಿರಿ. ಕಾರ್ಯಗಳು ಸಿದ್ಧLಗುವವರೆಗೆ ಮೌನವಾಗಿರುವುದು ಉತ್ತಮ ಎಂಬ ಹಿರಿಯರ ಮಾತುಗಳು ದಾರಿದೀಪವಾಗುತ್ತವೆ. ಅಸಾಧ್ಯವೆನಿಸಿದ ಕೆಲಸಗಳನ್ನು ಸಾಧಿಸಲು ಪ್ರಯತ್ನಿಸುವಿರಿ. ಹಳೆಯ ಕಡತಗಳನ್ನು ಪರಿಶೀಲಿಸಿ ಕೆಲವು ಅಮೂಲ್ಯ ದಾಖಲೆಗಳನ್ನು ಪಡೆದುಕೊಳ್ಳುವಿರಿ.
  • ಮೀನ ರಾಶಿ: ವೃತ್ತಿಜೀವನಕ್ಕೆ ಬೇಕಾದ ಪೂರ್ವಸಿದ್ಧತೆಗಳಲ್ಲಿ ತೊಡಗಿಕೊಳ್ಳುವಿರಿ. ಸ್ತ್ರೀಯರ ಮೂಲಕ ಇಂದು ನಿಮಗೆ ಆರ್ಥಿಕ ಸಹಾಯ ದೊರೆಯಲಿದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಅತಿಯಾದ ಪ್ರಶಂಸೆಯು ನಿಮ್ಮನ್ನು ದಾರಿ ತಪ್ಪಿಸದಂತೆ ಎಚ್ಚರಿಕೆ ವಹಿಸಿ. ಸಮಾಜದಲ್ಲಿ ಹೆಸರು ಗಳಿಸಲು ನಾನಾ ದಾರಿಗಳು ಗೋಚರಿಸಲಿವೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *