ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 17 ದೇಶದಲ್ಲಿ ಅರಾಜುಕತೆ ಉಂಟು ಮಾಡುವ ಕೆಲಸವನ್ನು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಮಾಡುತ್ತಿವೆ. ದೇಶದಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರು ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದ ವಾಲ್ಮೀಕಿ ಭವನದಲ್ಲಿ ಶನಿವಾರ ಬಿಜೆಪಿ ಮತ್ತು ಜೆಡಿಎಸ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರ ಚುನಾವಣೆಯ ಹಿನ್ನಲೆಯಲ್ಲಿ ಮತದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಎನ್ಡಿಎ ಪಕ್ಷ ಮೂರನೇ ಬಾರಿ ಅಧಿಕಾರದಲ್ಲಿದೆ. ಕಳೆದ 12 ವರ್ಷದಿಂದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚಾಗಿದೆ.ಈ ದೇಶದ ಪ್ರಧಾನ ಮಂತ್ರಿ ಆಗಲೆಂದೆ ಹುಟ್ಟಿರುವಂತ ನೆಹರು ಕುಟುಂಬದ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ.. ಆದರೆ ಗೆಲುವು ಕಾಣದೆ ಹತಾಶೆಯಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಈವಿಎಂ ಬಗ್ಗೆ ಅಪಪ್ರಚಾರ ಮಾಡಿದರು. ಈಗ
ಎಸ್ಐಆರ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಹಾರದಲ್ಲಿ, ರಾಜಸ್ಥಾನದಲ್ಲಿ ಹಾಗೂ ಪಶ್ಚಿಮಬಂಗಾಳದ ಉಪಚುನಾವಣೆಯಲ್ಲಿ ಸಹ ಕಾಂಗ್ರೆಸ್ ಪಕ್ಷ ಸೋತಿದೆ…ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗದ ಮೇಲೆ ಸಹ ಭರವಸೆ ಇಲ್ಲ.. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಪ್ರಶ್ನೆ ಮಾಡಲು ಹೊರಟಿದ್ದಾರೆ..ಈ ದೇಶದ ಮತದಾರರು ಕಾಂಗ್ರೆಸ್ ಪಕ್ಷದ ಬಗ್ಗೆ ರಾಹುಲ್ ಗಾಂಧಿಯ ಬಗ್ಗೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.ರಾಹುಲ್ ಗಾಂಧಿಯವರು
ಹತಾಶೆಯಾಗಿ ಅರಾಜುಕತೆ ಸೃಷ್ಟಿ ಮಾಡಲು ಹೊರಟಿದ್ದಾರೆ.ಬೋರಾ ಎಂಬ ಮಹಿಳೆಯು ಪ್ರತಿಭಟನೆಯ ಸಂದರ್ಭದಲ್ಲಿ ಟೀ-ಶರ್ಟ್ ಮೇಲೆ ತಲೆ ಬುರುಡೆ ಇರುವ ಚಿತ್ರವನ್ನ ಹಾಕಿಕೊಂಡು ಅರಾಜುಕತೆ ಸೃಷ್ಟಿ ಮಾಡಲು ಹೊರಟಿದ್ದಾಳೆ ಎಂದು ಆರೋಪಿಸಿದರು.
ಅ. 23 ರಂದು ನಡೆಯುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾದ ಕೆ.ಎಂ ಸುರೇಶ್ರವರನ್ನು ಮೊದಲ ಪ್ರಶಸ್ತದ ಮತ ನೀಡುವ ಮುಖಾಂತರ ಜಯಶೀಲರನ್ನಾಗಿ ಮಾಡಬೇಕಿದೆ..ಕೆಎಂಸುರೇಶ್ರವರು ಸಜ್ಜನ ರಾಜಕಾರಣಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿ ದ್ದಾರೆ.ರಾಜಕೀಯ ಕ್ಷೇತ್ರದಲ್ಲಿ ಸೇವೆಯನ್ನ ಮಾಡಬೇಕೆನ್ನುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದಾರೆ. ಮೇಲ್ಮನೆಯ ಘನತೆ ಉಳಿಯಬೇಕಾದರೆ ಸುರೇಶ್ ರವರು ಗೆಲ್ಲಬೇಕಾಗಿದೆ ಎಂದ ಅವರು. ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಎನ್ಡಿಎ ಅಭ್ಯರ್ಥಿಯಾದ ಕೆ.ಎಂ ಸುರೇಶ್ ರವರಿಗೆ ಮೊದಲ ಪ್ರಾಶಸ್ತದ ಮತ ನೀಡುವುದರ ಮೂಲಕ ಬಹಳ ಅಂತರದಿಂದ ಗೆಲುವು ಸಾಧಿಸಲು ನಾವು ಸನ್ನದರಾಗಬೇಕಾಗಿದೆ. ಎಂದು ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಕರೆ ನೀಡಿದರು.
ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, ಕೇಂದ್ರದಲ್ಲಿ ಕಳೆದ 12 ವರ್ಷಗಳಿಂದ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳಂಕರಹಿತ ಅಧಿಕಾರ ನಡೆಸುತ್ತಿದ್ದಾರೆ. ದೇಶದಲ್ಲಿ 12 ವರ್ಷದಿಂದ ಅಧಿಕಾರವನ್ನು ಹಿಡಿಯಲಾಗದೆ ಹತಾಶೆಯಲ್ಲಿದ್ದಾರೆ ನಕಲಿ ಗಾಂಧಿಯವರು.ಮೋದಿಜಿ ಬಗ್ಗೆ ಕಾಂಗ್ರೆಸ್ಸಿಗೆ ಭಯವಿದೆ. ಚುನಾವಣೆಯನ್ನು ಗೆಲ್ಲಲಾಗದ ಕಾಂಗ್ರೆಸ್ನವರು ನೀಟ್ ಬಗ್ಗೆ,.ಸಂವಿಧಾನಿಕ ಸಂಸ್ಥೆಗಳಾದ ಸಿಬಿಐ ಈಡಿ ಗಳ ಮೇಲೆ ಟೀಕೆ ಮಾಡುವುದರ ಮುಖಾಂತರ ನೀಚ ಬುದ್ಧಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ದೇಶದಲ್ಲಿ ಈ ಹಿಂದೆ 70 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ನವರು ಸಂವಿಧಾನಿಕ ಸಂಸ್ಥೆಗಳ ಮೇಲೆ ಟೀಕೆ
ಮಾಡಲಿಲ್ಲ.ಚುನಾವಣಾ ಆಯೋಗದ ಮೇಲೆ ಟೀಕೆ ಮಾಡಲಿಲ್ಲ.ಪ್ರಜಾಪ್ರಭುತ್ವದ ಬಗ್ಗೆ ಅಗೌರವ ತೋರುವ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಅದು ಸಾಧ್ಯವಿಲ್ಲ.ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ನೆಹರು ಕುಟುಂಬವೇ ಅಧಿಕಾರ ನಡೆಸಿದೆ.. ಅವರದೇ ಕುಟುಂಬದ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಅದು ಸಾಧ್ಯವಿಲ್ಲ ಎಂದ ಅವರು ದಿನಾಂಕ: 23.10.2026 ರಂದು ನಡೆಯುವ ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಯಾದ ಕೆ.ಎಂ ಸುರೇಶ್ ರವರಿಗೆ ಮೊದಲ ಪ್ರಾಸಸ್ತದ ಮತವನ್ನು ನೀಡುವ ಮುಖಾಂತರ ಗೆಲುವು ಸಾಧಿಸಿಲು ನಾವೆಲ್ಲ ಸನ್ನಧರಾಗಬೇಕು ಎಂದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡಡಿ ಮಾತನಾಡಿ ದೆಹಲಿಯಲ್ಲಿ ಕಾಂಗ್ರೇಸ್ ಮತ್ತು ಇತರೆ ಪಕ್ಷಗಳು ಯುವಕರನ್ನು ತಮ್ಮ ಕಡೆ ಸೆಳೆಯಲು ಹಾಗೂ ಪ್ರತಿಭಟನೆಗಳ ಮೂಲಕ ಮೂರು ದಿನಗಳಿಂದ ಪ್ರಯತ್ನಿಸುತ್ತಿವೆ ವಿವಿಧ ಪಕ್ಷಗಳ ಪ್ರಯತ್ನಗಳ ನಡುವೆಯೂ, ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇಕಡಾ ತೊಂಬತ್ತರಷ್ಟು ಹಾಗೂ ಇತ್ತೀಚೆಗೆ ನಡೆದ ಒರಿಸ್ಸಾ ರಾಜ್ಯದ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಹದಿನೇಳು ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಜನತಾ ಪಕ್ಷವು ಜಯ ಸಾಧಿಸಿರುವುದು ಐತಿಹಾಸಿಕ ಎಂದು ವಿವರಿಸಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಇರುವುದರಿಂದ ಹಾಗೂ ವಿವಿಧ ವಲಯ ಗಳಲ್ಲಿ
ಇರುವ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡುವುದು ಕಷ್ಟಸಾಧ್ಯವಾಗಿದ್ದರೂ, ಮುಂಬರುವ ನಾಲ್ಕೈದು ದಿನಗಳ ಕಾಲ ಎಲ್ಲರೂ ಶ್ರಮಿಸಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಮತ್ತು ನಾಲ್ಕು ಚುನಾವಣೆಯನ್ನು ಗೆಲ್ಲುವ ನಿರ್ಧಾರಕ್ಕೆ ಎಲ್ಲರೂ
ಸಹಕಾರ ನೀಡಬೇಕು ಎಂದು ್ಲ ವಿನಂತಿಸಿ ಮುಂಬರುವ ಐದು ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಎಚ್ಚೆತ್ತುಕೊಂಡು, ಯಾವುದೇ ರೀತಿಯ ನಿದ್ರೆ ಇಲ್ಲದೆ ಪ್ರತಿ ಮತದಾರರನ್ನು ನೇರವಾಗಿ ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಬೇಕು
ಹಾಗೂ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಶಾಸಕತರಾದ ಡಾ.ಎಂ.ಚಂದ್ರಪ್ಪ ಮಾತನಾಡಿ, ಕೆ.ಎಂ. ಸುರೇಶ್ ಅತ್ಯುತ್ತಮ ಅಭ್ಯರ್ಥಿಯಾಗಿದ್ದು, ಅವರನ್ನು ಗೆಲ್ಲಿಸಲು ಎಲ್ಲಾ ಕಾರ್ಯಕರ್ತರು ಒಮ್ಮಸ್ಸಿನಿಂದ ಶ್ರಮಿಸಬೇಕು ಜಿಲ್ಲೆಯಲ್ಲಿ ಸುರೇಶ್ ಅವರ ಪರವಾಗಿ ಅತ್ಯುತ್ತಮ ವಾತಾವರಣವಿದ್ದು, ಸುಮಾರು 48 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಇರುವುದರಿಂದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿ. ಜಿಲ್ಲೆಯಲ್ಲಿ ಟೀಚರ್ಸ್, ಗ್ರಾಜ್ಯುಯೇಟ್ಸ್ ಸೇರಿದಂತೆ ವಿವಿಧ ವರ್ಗದ ಮತದಾರರು ಬೇರೆ ಬೇರೆ ಕಡೆಗಳಲ್ಲಿ ಇರುವುದರಿಂದ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ, ಎಲ್ಲರೂ ತಮ್ಮ ತಮ್ಮ ಗ್ರಾಮಗಳಲ್ಲಿರುವ ಮತದಾರರನ್ನು ಸ್ವಯಂ ಪ್ರೇರಣೆಯಿಂದ ಕರೆತಂದು ಮತಹಾಕಿಸುವಂತೆ ವಿನಂತಿಸಿದರು.
ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿದ್ದು, ಶೇ. 60 ರಿಂದ 70 ಕ್ಕಿಂತ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಈ ಹಿಂದೆ ನಡೆದ ಹತ್ತು ಚುನಾವಣೆಗಳಲ್ಲಿ 8 ಬಾರಿ ಬಿಜೆಪಿಯಿಂದ ಹಾಗೂ 2 ಬಾರಿ ಜೆಡಿಎಸ್ನಿಂದ ಗೆಲುವು
ಸಾಧಿಸಲಾಗಿದ್ದು, ಆದರೆ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲೂ ನೆಲಕಚ್ಚಿದೆ ಎರಡೂ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ನ ಎಲ್ಲ ಕಾರ್ಯಕರ್ತರು ಒಗ್ಗೂಡಿ ಮತದಾರರನ್ನು ಬೆಂಬಲಿಸುವಂತೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಯಾವುದೇ ರೀತಿಯ ಉದಾಸೀನ ಮಾಡದೆ ಮುಂಬರುವ 28ರ ಚುನಾವಣೆ ಹಾಗೂ ಜನವರಿಯಲ್ಲಿ ನಡೆಯುವ ತಾಲೂಕು ಮತ್ತು ಜಿಲ್ಲಾ ಪಂಚಾಯತಿ
ಚುನಾವಣೆಯಲ್ಲಿಯೂ ಶ್ರಮಿಸಬೇಕು. ನಮ್ಮ ರಾಜ್ಯ ಅಧ್ಯಕ್ಷರು ಹಗಲು-ರಾತ್ರಿ ಎನ್ನದೆ ರಾಜ್ಯದ ವಿವಿಧೆಡೆ ಸಂಚರಿಸಿ ಶ್ರಮಿಸುತ್ತಿದ್ದಾರೆ.
ಅಂತಹ ಹಿರಿಯ ಹಾಗೂ ಯುವ ನಾಯಕನ ನೇತೃತ್ವದಲ್ಲಿ ಎಲ್ಲರೂ ಕೈಜೋಡಿಸಬೇಕು ಎರಡೂ ಪಕ್ಷಗಳ ಎನ್ಡಿಎ ಕಾರ್ಯಕರ್ತರು ಒಗ್ಗಟ್ಟಾಗಿ, ಯಾವುದೇ ಉದಾಸೀನಕ್ಕೆ ಅವಕಾಶ ನೀಡದೆ, ಸುಪ್ತವಾಗಿರುವ ಮತದಾರರನ್ನು ಗುರುತಿಸಿ ಮತದಾನ ಕೇಂದ್ರಗಳಿಗೆ ಬರುವಂತೆ ಮಾಡುವ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಸ್,ಕೆ, ಬಸವರಾಜನ್, ನೇರ್ಲಗುಂಟೆ ತಿಪ್ಪೇಸ್ವಾಮಿ, ವೈ.ಎ.ನಾರಾಯಣಸ್ವಾಮಿ, ಮುಖಂಡರಾದ ಹನುಮಂತೇಗೌಡ, ವೆಂಕಟೇಶ್ ಯಾದವ್, ಮೋಹನ್ ಕುಮಾರ್, ಲಿಂಗಮೂರ್ತಿ, ಲಕ್ಷ್ಮೀಕಾಂತ, ಡಾ.ಸಿದ್ಧಾರ್ಥ, ರಘುಚಂದನ್, ಮಲ್ಲಿಕಾರ್ಜನ್ ಸೇರಿದಂತೆ ವಿವಿಧ ಮಂಡಲಗಳ ಪದಾಧಿ ಕಾರಿಗಳು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು