ಚಿತ್ರದುರ್ಗ| ಸಿ.ಎಂ.ಸಿ.ಆರ್.ಐ.ನಲ್ಲಿ ಎಐ, ಆರೋಗ್ಯ ಕ್ಷೇತ್ರ ಮತ್ತು ಸುಸ್ಥಿರ ಇಂಧನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ.

ಚಿತ್ರದುರ್ಗ ಜೂ. 17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಗುಡ್ಡದ ರಂಗವ್ವನಹಳ್ಳಿಯಲ್ಲಿರುವ ಚಿತ್ರದುರ್ಗ ಸರ್ಕಾರೀ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿ.ಎಲ್.ಎಸ್.ಎ.) ಹಾಗೂ ಚಿತ್ರದುರ್ಗ ಸರ್ಕಾರೀ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಸಿ.ಎಂ.ಸಿ.ಆರ್.ಐ.) ಈ ಮೂರೂ ಸಂಸ್ಥೆಗಳ ಸಹಯೋಗದಲ್ಲಿ ತಜ್ಞರ ವಿಶೇಷ ಉಪನ್ಯಾಸ ಕಾರ್ಯಕ್ರಮವು ನೆರವೇರಿತು.

ವಿಶೇಷ ತಜ್ಞ ಉಪನ್ಯಾಸ ಕಾರ್ಯಕ್ರಮ ಸರಣಿಯ ಮೊದಲನೆಯ ಉಪನ್ಯಾಸದಲ್ಲಿ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ತಜ್ಞರೂ ಹಾಗೂ ಲಾತವ್ಯ ಟೆಕ್ನಾಲಜೀಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರೋ. ಶಶಿಧರ್ ರಾವ್ ಅವರು “ಎನ್ವಿಶನಿಂಗ್ ಗ್ಲೋಬಲ್ ಪಾಸಿಬಿಲಿಟೀಸ್ ಅಂಡ್ ಛಾಲೆಂಜಸ್ ಇನ್ ದಿ ಇರಾ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಎ.ಐ. ಇನ್ ಹೆಲ್ತ್ ಕೇರ್ ಅಂಡ್ ರೋಬೋಟಿಕ್ ಸರ್ಜರಿ” (ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನದ ಈ ಕಾಲಘಟ್ಟದ ಜಾಗತಿಕ ಸಾಧ್ಯತೆಗಳು ಹಾಗೂ ಸವಾಲುಗಳು – ಆರೋಗ್ಯ ಕ್ಷೇತ್ರ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ) ಎಂಬ ವಿಷಯದ ಬಗ್ಗೆ ಆಧುನಿಕ ತಂತ್ರಜ್ಞಾನ ಹಾಗೂ ವೈದ್ಯಕೀಯ ಶಾಸ್ತ್ರ ಈ ಎರಡೂ ಕ್ಷೇತ್ರಗಳ ಆಳವಾದ ಅಧ್ಯಯನ ಆಧಾರಿತವಾದ ಸವಿಸ್ತಾರವಾದಂತಹ ಉಪನ್ಯಾಸ ನೀಡಿದರು.

ಎರಡನೆಯ ಉಪನ್ಯಾಸದಲ್ಲಿ ನವೀಕರಿಸಬಹುದಾದ ಸೌರಶಕ್ತಿ ಆಧಾರಿತ ಇಂಧನ ತಜ್ಞರು ಹಾಗೂ ಸೆಲ್ಕೋ ಸೋಲಾರ್ ಕಂಪನಿಯ ಉತ್ತರ ಕರ್ನಾಟಕ ವಿಭಾಗದ ವ್ಯವಸ್ಥಾಪಕರಾದ ರೋ. ಮಂಜುನಾಥ್ ಭಾಗವತ್ ಅವರು “ಎನ್ವಿರಾನ್ಮೆಂಟ್ ಫ್ರೆಂಡ್ಲಿ ಸಸ್ಟೈನಬಲ್ ಎನರ್ಜಿ ಫಾರ್ ಸ್ಟೇಬಲ್ ಫ್ಯೂಚರ್ ಆಫ್ ಹ್ಯೂಮನ್ಕೈನ್ಡ್” (ಮಾನವಕುದ ಸ್ಥಿರ ಭವಿಷ್ಯಕ್ಕೆ ಪರಿಸರಸ್ನೇಹಿ ಸ್ನೇಹಿ ಸುಸ್ಥಿರ ಇಂಧನ) ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗದ ಖಜಾಂಚಿಗಳಾದ ರೋ. ಶಿವರಾಮ್, ಕ್ಲಬ್‍ನ ಸ್ಥಾಪನಾ ಅಧ್ಯಕ್ಷರು ರೋ. ಗಾಯತ್ರಿ ಶಿವರಾಮ್, ಉಪಾಧ್ಯಕ್ಷರು ರೋ. ಗುರುಮೂರ್ತಿ, ಬೋರ್ಡ್ ಆಫ್ ಡೈರೆಕ್ಟರ್ಸ್ ಸದಸ್ಯರಾದ ರೋ. ಶಂಕರಪ್ಪ, ಸಿ.ಎಂ.ಸಿ.ಆರ್.ಐ. ನ ಪ್ರಿನ್ಸಿಪಾಲ್, ಅರಿವಳಿಕೆ ವಿಭಾಗ ತಜ್ಞರಾದ ಡಾ. ಮೇಘಾ, ವಿವಿಧ ವಿಭಾಗ ಮುಖ್ಯಸ್ಥರು, ಡಾ. ವೇಣು, ಅನೇಕ ವಿಭಾಗಗಳ ಪ್ರಾಧ್ಯಾಪಕರುಗಳು, ಬೋಧಕರು, ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿ.ಎಲ್.ಎಸ್.ಎ.) ಪಿ.ಎಲ್.ವಿ. ಸದಸ್ಯರುಗಳು, ಮೂರೂ ಸಂಸ್ಥೆಗಳ ಗಣ್ಯರು, ಆಹ್ವಾನಿತರು ಮತ್ತಿತರರು ಉಪಸ್ಥಿತರಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *