ಚಿತ್ರದುರ್ಗ ಆ. 20
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಹಿಂದೂ ಮಹಾಗಣಪತಿ ಮಹೋತ್ಸವದ ಅಂಗವಾಗಿ ಈ ಬಾರಿಯ ನೂತನ ಉತ್ಸವ ಸಮಿತಿಯನ್ನು ಘೋಷಿಸಲಾಗಿ ಸೆಪ್ಟೆಂಬರ್ 14ರಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಅಕ್ಟೋಬರ್ 3ರಂದು ವೈಭವದ ಶೋಭಾಯಾತ್ರೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೇಲ್ ತಿಳಿಸಿದರು.
ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯಲ್ಲಿನ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಚೇರಿ ಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ 2026ರ ಹಿಂದು ಮಹಾ ಗಣಪತಿ ಮಹೋತ್ಸವ ಬಗ್ಗೆ ಮಾಹಿತಿ ಯನ್ನು ನೀಡಿದ ಅವರು ಕಳೆದ 18 ವರ್ಷಗಳಿಂದ ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದವತಿಯಿಂದ ಹಿಂದೂ ಮಹಾ ಗಣಪತಿಯನ್ನು ಸ್ಥಾಪನೆ ಮಾಡಿ ಪೂಜೆ ಹಾಗೂ ಶೋಭಾಯಾತ್ರೆಯನ್ನು ನಡೆಸಲಾಗುತ್ತಿದೆ ಪ್ರತಿ ವರ್ಷ ಇದಕ್ಕಾಗಿ ಸಮಿತಿಯನ್ನು ರಚನೆ ಮಾಡಲಾಗುತ್ತದೆ ಇದ್ದಲ್ಲದೆ ಮಹೋತ್ಸವ ಯಶಸ್ವಿಗೆ ವಿವಿಧ ರೀತಿಯ ಸಮಿತಿಗಳನ್ನು ರಚನೆ ಮಾಡಲಾಗುತ್ತದೆ ಎಂದರು.
ಪ್ರತಿ ವರ್ಷ ಜೈನ್ ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದ ಈ ಕಾರ್ಯಕ್ರಮವನ್ನು, ಈ ಬಾರಿ ಅದರ ಮುಂದುಗಡೆ ಇರುವ ಶ್ರೀ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ (ಸರ್ಕಾರಿ ವಿಜ್ಞಾನ ಕಾಲೇಜು ಹತ್ತಿರ) ನಡೆಸಲು ನಿರ್ಧರಿಸಲಾಗಿದೆ. ಜೈನ್ ಮೈದಾನದಲ್ಲಿ ಗೋವುಗಳು ಹಾಗೂ ಬೀದಿ ನಾಯಿಗಳ ಚಿಕಿತ್ಸೆಗೆ ಸಂಬಂಧಿಸಿದ ಫೌಂಡೇಶನ್ ಜಾಗ ಪಡೆದಿರುವುದರಿಂದ ಜಾಗದ ಅಭಾವ ಉಂಟಾಗಬಹುದು ಎಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿದ್ದು, ಈಗಾಗಲೇ ಸಂಬಂಧಪಟ್ಟವರಿಂದ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿದ ಅವರ ಈ ಬಾರಿಯ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸುಧೀರ್ ಜಿ. ಕುಂದಾರ್ಪಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಚನ್ನಕೇಶವ್, ಗೌರವಾಧ್ಯಕ್ಷರಾಗಿ ಷಡಕ್ಷರಪ್ಪ ಹಾಗೂ ಇತರ ಪದಾಧಿಕಾರಿಗಳನ್ನು ಸಮಿತಿಗೆ ನಿಯೋಜಿಸಲಾಗಿದೆ. ಶರಣ್ ಪಂಪವೇಲ್ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಚೆನ್ನಕೇಶವ ಮಾತನಾಡಿ, ಆಗಸ್ಟ್ 26 ಬುಧವಾರ ಬೆಳಿಗ್ಗೆ 9:45 ರಿಂದ 10:30ರ ಒಳಗೆ ಗೋಪೂಜೆ ಹಾಗೂ ಧ್ವಜಪೂಜೆ ನೆರವೇರಲಿದೆ. ಸೆಪ್ಟೆಂಬರ್ 9 ಅಥವಾ 13 (ಬುಧವಾರ/ಭಾನುವಾರ): ಸಮಯ ಮತ್ತು ನಕ್ಷತ್ರವನ್ನು ಆಧರಿಸಿ ಹಿಂದೂ ಮಹಾ ಗಣಪತಿಯ ಪುರಪ್ರವೇಶ ಕಾರ್ಯಕ್ರಮವನ್ನು ಅಂತಿಮಗೊಳಿಸಲಾಗುವುದು. ಸೆಪ್ಟೆಂಬರ್ 14 (ಸೋಮವಾರ): ಬೆಳಿಗ್ಗೆ 9:18 ರಿಂದ 10:45ರ ಶುಭ ಮುಹೂರ್ತದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ. ಅಕ್ಟೋಬರ್ 3: ಅತ್ಯಂತ ವಿಜೃಂಭಣೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.
ವಿಶ್ವ ಹಿಂದೂ ಪರಿಷತ್ನ ಪ್ರಾಂತ ಸತ್ಸಂಗ ಪ್ರಮುಖ್ ಚಂದ್ರಶೇಖರ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಕೇಂದ್ರಸ್ಥಾನ ಮಾತ್ರವಲ್ಲದೆ ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು ಹಾಗೂ ಹೊಸದುರ್ಗ ಭರಮಸಾಗರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲೂ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಸಹಯೋಗದಲ್ಲಿ ಹಿಂದೂ ಮಹಾಗಣಪತಿ ಉತ್ಸವ ನಡೆಯಲಿದೆ. ಈ ತಾಲೂಕುಗಳ ಶೋಭಾಯಾತ್ರೆಗಳು ಚಿತ್ರದುರ್ಗದ ಮುಖ್ಯ ಶೋಭಾಯಾತ್ರೆಗಿಂತ ಮುಂಚಿತವಾಗಿಯೇ ಮುಕ್ತಾಯಗೊಳ್ಳಲಿವೆ.ದೇಶದ ಎರಡನೇ ಅತಿ ದೊಡ್ಡ ಹಿಂದೂ ಮಹಾಗಣಪತಿ ಉತ್ಸವ ಎಂದೇ ಹೆಸರು ಪಡೆದಿರುವ ಈ ಕಾರ್ಯಕ್ರಮವನ್ನು ಕಳೆದ 19 ವರ್ಷಗಳಿಂದ ಅತ್ಯಂತ ವೈಭವದಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ವಿಶ್ವ ಹಿಂದೂ ಪರಿಷತ್ನ್ ಪ್ರಾಂತ ಉಪಾಧ್ಯಕ್ಷರಾದ ಡಾ ಮಂಜುನಾಥ್, ಜಿಲ್ಲಾಧ್ಯಕ್ಷರಾದ ಷಡಕ್ಷರಪ್ಪ ಈ ಬಾರಿಯ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸುಧೀರ್ ಜಿ. ಕುಂದಾರ್ಪಿ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j