
India vs New Zealand: ಲಕ್ನೋನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿತ್ತು. ನೂರು ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಗೆದ್ದಿರುವುದು ಕೊನೆಯ ಓವರ್ನಲ್ಲಿ. ಅದು ಕೂಡ 20ನೇ ಓವರ್ನ 5ನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ ಫೋರ್ನಿಂದ ಎಂಬುದು ವಿಶೇಷ. ಸ್ಪಿನ್ ಬೌಲರ್ಗಳಿಗೆ ಸಹಕಾರಿಯಾಗಿದ್ದ ಈ ಪಿಚ್ನಲ್ಲಿ ರನ್ಗಳಿಸಲು ಉಭಯ ತಂಡಗಳ ಬ್ಯಾಟರ್ಗಳು ಪರದಾಡಿದರು. ಇದಾಗ್ಯೂ 31 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು.
ಈ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್, ಯುಜ್ವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಬಿಸಿಸಿಐ ಪ್ರಸ್ತುತ ಪಡಿಸುವ ವಿಶೇಷ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಚಹಾಲ್ ಹಾಗೂ ಸೂರ್ಯಕುಮಾರ್ ಅವರನ್ನು ಕುಲ್ದೀಪ್ ಯಾದವ್ ಸಂದರ್ಶಿಸಿದ್ದರು.
ವಿಶೇಷ ಎಂದರೆ ಈ ಪಂದ್ಯದಲ್ಲಿ 1 ವಿಕೆಟ್ ಪಡೆಯುವ ಮೂಲಕ ಯುಜ್ವೇಂದ್ರ ಚಹಾಲ್ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಚಹಾಲ್, ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿದಾಗ ಸಂತೋಷವಾಗುತ್ತದೆ ಎಂದರು.
ಇದನ್ನೂ ಓದಿ: ICC T20 Rankings: ಐಸಿಸಿ ರ್ಯಾಂಕಿಂಗ್ನಲ್ಲೂ ಸರ್ವಶ್ರೇಷ್ಠ ದಾಖಲೆ ಬರೆದ ಸೂರ್ಯಕುಮಾರ್ ಯಾದವ್
ಆ ಬಳಿಕ ತಮ್ಮ ಬ್ಯಾಟಿಂಗ್ ಬಗ್ಗೆ ಸೂರ್ಯಕುಮಾರ್ ಅವರನ್ನು ಪ್ರಶ್ನಿಸಲಾಯಿತು. ಇದೇ ವೇಳೆ ಜೊತೆಗೂಡಿದ ಚಹಾಲ್, ನಾನು ನಿಮಗೆ 360 ಡಿಗ್ರಿ ಬ್ಯಾಟಿಂಗ್ ಕಲಿಸಿದ್ದೇನೆ. ಆದರೆ ಈ ಪಿಚ್ನಲ್ಲಿ ನನ್ನ ಬ್ಯಾಟಿಂಗ್ ಸಲಹೆಯಿಂದ ನೀವು ಬಹಳಷ್ಟು ಚೆನ್ನಾಗಿ ಆಡಿದ್ದೀರಿ ಎಂದು ಕಿಚಾಯಿಸಿದರು.
Local lad
Landmark holder
The ever-so-adaptable Mr. 360Laughter, insights & banter unfold as @yuzi_chahal hosts @imkuldeep18 & @surya_14kumar on Chahal TV
in Lucknow
![]()
– By @ameyatilak
Full interview
![]()
#TeamIndia | #INDvNZ https://t.co/5THSbQ4Epi pic.twitter.com/Ic9C32lafm
— BCCI (@BCCI) January 30, 2023
ಈ ವೇಳೆ ಮಾತು ಮುಂದುವರೆಸಿದ ಸೂರ್ಯಕುಮಾರ್ ಯಾದವ್, ಹೌದು, ನೀವು ಕಳೆದ ಟಿ20 ಸರಣಿಯಲ್ಲಿ ನನಗೆ ಕಲಿಸಿದಂತೆ, ನಾನು ಇಂದು ಅದೇ ರೀತಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸಿದೆ. ಚಹಾಲ್ ನನ್ನ ಬ್ಯಾಟಿಂಗ್ ಕೋಚ್ ಎಂದು ಟ್ರೋಲ್ ಮಾಡಿದರು. ಇದೀಗ ಟೀಮ್ ಇಂಡಿಯಾ ಆಟಗಾರರು ಪರಸ್ಪರ ಕಾಲೆಳೆಯುತ್ತಿರುವ ಫನ್ನಿ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.



in Lucknow