ಸಮಗ್ರ ಸುದ್ದಿ – ನಿಖರತೆಗೆ ಮತ್ತೊಂದು ಹೆಸರು
ಇಂದಿನ ದೈನಿಕ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗಿನ ಪ್ರೇಮ, ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ ಹಾಗೂ ಕೌಟುಂಬಿಕ ಜೀವನದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಇಂದಿನ ಗ್ರಹಗತಿಗಳ ಪ್ರಭಾವ, ಯಶಸ್ಸಿನ ಮಾರ್ಗ ಮತ್ತು ಎದುರಾಗಬಹುದಾದ ಸವಾಲುಗಳನ್ನು ಅರಿತುಕೊಳ್ಳಿ. ಕಳೆದುಕೊಳ್ಳುವ ಭಯ, ದೈಹಿಕ ಶ್ರಮ, ಪ್ರಜ್ಞಾಪೂರ್ವಕ ವ್ಯವಹಾರ ಇಂದಿನ ವಿಶೇಷ.
ಇಂದಿನ ಪಂಚಾಂಗ
- ಶಾಲಿವಾಹನ ಶಕೆ: 1949, ಪರಾಭವ ಸಂವತ್ಸರ
- ಆಯನ: ದಕ್ಷಿಣಾಯನ, ಋತು: ವರ್ಷ
- ಮಾಸ: ಭಾದ್ರಪದ, ಸೌರ ಮಾಸ: ಕನ್ಯಾ
- ಪಕ್ಷ: ಶುಕ್ಲ, ತಿಥಿ: ದ್ವಾದಶೀ
- ನಕ್ಷತ್ರ: ಉತ್ತರಾಫಲ್ಗುಣೀ (ಮಹಾನಕ್ಷತ್ರ), ಧನಿಷ್ಠಾ (ನಿತ್ಯನಕ್ಷತ್ರ)
- ಯೋಗ: ಸುಕರ್ಮ, ಕರಣ: ಬಾಲವ
- ಸೂರ್ಯೋದಯ: 06:09 AM | ಸೂರ್ಯಾಸ್ತ: 06:14 PM
- ರಾಹು ಕಾಲ: 12:12 – 13:42 | ಯಮಗಂಡ ಕಾಲ: 07:40 – 09:11 | ಗುಳಿಕ ಕಾಲ: 10:41 – 12:12
ಮೇಷ ರಾಶಿ: ಆಸ್ತಿ ವಿವಾದಗಳು ಸುಖಾಂತ್ಯ ಕಾಣಲಿವೆ. ಸರ್ಕಾರಿ ಕೆಲಸಗಳಲ್ಲಿ ಉಂಟಾಗುವ ವಿಳಂಬ ಬೇಸರ ತರಿಸಬಹುದು. ರಾಜಕೀಯ ವ್ಯಕ್ತಿಗಳ ಕೆಲಸಗಳಿಗೆ ಮನ್ನಣೆ ದೊರೆಯಲಿದೆ. ಜವಾಬ್ದಾರಿಗಳನ್ನು ಸುಲಭವಾಗಿ ನಿಭಾಯಿಸುವಿರಿ, ಆದರೆ ಇತರರ ಅಧಿಕಾರ ವಹಿಸಿಕೊಂಡರೆ ನಿರ್ವಹಣೆ ಕಷ್ಟವಾದೀತು. ಬೆಲೆಬಾಳುವ ವಸ್ತುಗಳನ್ನು ಅರಿವಿಲ್ಲದೆ ಬೇರೆಯವರಿಗೆ ನೀಡುವ ಸಾಧ್ಯತೆ ಇದೆ. ಮಾತನಾಡುವಾಗ ಎಚ್ಚರವಿರಲಿ.
ವೃಷಭ ರಾಶಿ: ಕಣ್ಣಿನ ದೋಷ ಅಥವಾ ದೃಷ್ಟಿದೋಷದ ಕಾಟ ಎದುರಾಗಬಹುದು. ಆಸ್ತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಕಳೆದುಹೋಗುವ ಆತಂಕವಿರುತ್ತದೆ. ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಪೂರ್ಣ ಹಣ ನೀಡದೆ ಕಂತಿನ ಮೂಲಕ ವ್ಯವಹಾರ ನಡೆಸುವಿರಿ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆಗಳಿದ್ದು ಎಚ್ಚರಿಕೆ ವಹಿಸಿ. ವಿವಾಹದ ಮಾತುಕತೆಗಳು ಗೊಂದಲದೊಡನೆ ಮುಗಿಯಬಹುದು.
ಮಿಥುನ ರಾಶಿ: ನಿಮ್ಮ ಆಸ್ತಿಯ ಮೇಲೆ ಇತರರ ಕಣ್ಣು ಬೀಳುವ ಸಾಧ್ಯತೆ ಇದೆ. ನಿಮ್ಮಿಂದ ಸಹಾಯ ಪಡೆದವರು ಆನಂತರ ನಿಮ್ಮನ್ನು ನಿರ್ಲಕ್ಷ್ಯ ಮಾಡಬಹುದು. ಆಧುನಿಕ ತಂತ್ರಜ್ಞಾನದ ಮೂಲಕ ಭದ್ರತೆಯನ್ನು ಹೆಚ್ಚಿಸಿಕೊಳ್ಳುವಿರಿ. ಬಹಳ ದಿನಗಳ ನಂತರ ಬಾಳಸಂಗಾತಿಯೊಡನೆ ಉತ್ತಮ ಸಮಯ ಕಳೆಯುವಿರಿ. ಶೈಕ್ಷಣಿಕ ಗುರಿಗಳಲ್ಲಿ ಬದಲಾವಣೆ ಕಂಡುಬರಲಿದೆ. ಬೇರೆಯವರ ಜಗಳದಲ್ಲಿ ಮಧ್ಯಪ್ರವೇಶಿಸಿ ತೊಂದರೆಗೆ ಸಿಲುಕದಿರಿ.
ಕರ್ಕಾಟಕ ರಾಶಿ: ಸ್ನೇಹಿತರಿಂದ ಆರ್ಥಿಕ ನೆರವು ದೊರೆಯಲಿದೆ. ತಂದೆಯ ಆರೋಗ್ಯದಲ್ಲಿನ ಏರುಪೇರು ಆತಂಕ ಸೃಷ್ಟಿಸಬಹುದು. ಬಂಧುಮಿತ್ರರೊಡನೆ ಪ್ರೀತಿಯಿಂದ ವರ್ತಿಸುವಿರಿ. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು. ಸಾಲಬಾಧೆಯಿಂದ ಮುಕ್ತರಾಗಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ತಾಳ್ಮೆ ಕಳೆದುಕೊಳ್ಳದಿರುವುದು ಅತ್ಯಗತ್ಯ. ಹಿರಿಯರನ್ನು ಅಗೌರವಿಸಿದರೆ ನಿಮಗೆ ಮುಳುವಾಗಬಹುದು ಎಂಬ ಅರಿವಿರಲಿ.
ಸಿಂಹ ರಾಶಿ: ಹಾಕಿಕೊಂಡ ಯೋಜನೆಗಳು ವಿಳಂಬವಾಗಬಹುದು. ಕೌಟುಂಬಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಸಂಗಾತಿಯ ಬಗ್ಗೆ ವಿಶೇಷ ಕಾಳಜಿ ಇರಲಿದೆ. ನಿಮ್ಮಿಷ್ಟದ ವಸ್ತುಗಳನ್ನು ಪಡೆಯುವಿರಿ. ಯಶಸ್ಸಿಗೆ ಹಿಗ್ಗದೆ ಸಮಾಧಾನದಿಂದಿರಿ. ಭವಿಷ್ಯಕ್ಕಾಗಿ ರಹಸ್ಯವಾಗಿ ಹಣ ಉಳಿತಾಯ ಮಾಡುವಿರಿ. ನಿಮ್ಮ ಸಾಧನೆ ಇತರರಲ್ಲಿ ಅಸೂಯೆ ಮೂಡಿಸಬಹುದು.
ಕನ್ಯಾ ರಾಶಿ: ಸಂಬಂಧಿಕರ ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು. ಸಾಲದ ವ್ಯವಹಾರಗಳ ಬಗ್ಗೆ ಸ್ಪಷ್ಟ ಲೆಕ್ಕಾಚಾರವಿರಲಿ. ಪ್ರೇಮ ವಿಚಾರದಲ್ಲಿ ಅನುಭವಿಗಳ ಕಿವಿಮಾತು ಕೇಳುವುದು ಉತ್ತಮ. ಸರಳ ಜೀವನ ನಿಮ್ಮ ಇಷ್ಟವಾಗಲಿದೆ. ನಂಬಿಕೆಯಿಂದ ವ್ಯಾಪಾರ-ವ್ಯವಹಾರಗಳನ್ನು ಮುಂದುವರಿಸಿ. ಅನಗತ್ಯ ಮಾತುಗಳಿಂದ ಸಮಯ ವ್ಯರ್ಥ ಮಾಡದಿರಿ.
ತುಲಾ ರಾಶಿ: ಸ್ನೇಹಿತರಿಗೆ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಅನಿರೀಕ್ಷಿತ ಧನಲಾಭವು ನೆಮ್ಮದಿ ತರಲಿದೆ. ಅನುಮಾನಗಳನ್ನು ಸೂಕ್ತ ವ್ಯಕ್ತಿಗಳ ಬಳಿ ಮಾತ್ರ ವ್ಯಕ್ತಪಡಿಸಿ. ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಅವಘಡಗಳಾಗಬಹುದು. ನಿಮ್ಮತನವನ್ನು ಬಿಟ್ಟುಕೊಡದೆ ಕೆಲಸ ಸಾಧಿಸಿಕೊಳ್ಳುವಿರಿ. ಬಂಧುಗಳ ಕಟು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದಿರಿ.
ವೃಶ್ಚಿಕ ರಾಶಿ: ಕಾನೂನು ಹೋರಾಟಗಳಿಗೆ ಸಿದ್ಧತೆ ನಡೆಸುವಿರಿ. ನಿಮ್ಮ ದೌರ್ಬಲ್ಯವನ್ನು ಇತರರು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ. ನೇರ ಮಾತುಗಳಿಂದ ನಿಷ್ಠುರ ಕಟ್ಟಿಕೊಳ್ಳುವಿರಿ. ನಿಮ್ಮೊಳಗಿನ ಬದಲಾವಣೆ ನಿಮಗೇ ಅಚ್ಚರಿ ತರಲಿದೆ. ಎಲ್ಲವನ್ನೂ ಒಂದೇ ಬಾರಿಗೆ ಹೇಳದೆ ಹಂತ ಹಂತವಾಗಿ ತಿಳಿಸುವುದು ಜಾಣತನ. ದೇವಸ್ಥಾನ ದರ್ಶನದಿಂದ ಮನಸ್ಸಿಗೆ ಶಾಂತಿ ಲಭಿಸಲಿದೆ.
ಧನು ರಾಶಿ: ಎಲ್ಲವೂ ತನಗೇ ಬೇಕೆಂಬ ಮನೋಭಾವ ಮೂಡಬಹುದು. ಆರ್ಥಿಕ ಪ್ರಗತಿಗಾಗಿ ಹೊಸ ತಂತ್ರಗಳನ್ನು ರೂಪಿಸುವ ಅಗತ್ಯವಿದೆ. ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ಲಾಭವಿದೆ. ವೃತ್ತಿಜೀವನದಲ್ಲಿ ಸರಳ ಮಾರ್ಗ ಅನುಸರಿಸುವಿರಿ. ಹಾಲಿ ಪ್ರೇಮ ಸಂಬಂಧ ಇರುವಾಗಲೇ ಹೊಸ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳಿಗೆ ಸಮಾಜದಲ್ಲಿ ಮನ್ನಣೆ ಗಳಿಸುವ ಹಂಬಲ ಹೆಚ್ಚಾಗಲಿದೆ.
ಮಕರ ರಾಶಿ: ಭವಿಷ್ಯದ ಆರ್ಥಿಕ ಭದ್ರತೆಗಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಿರಿ. ಇತರರ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗುವಿರಿ. ನಿಮ್ಮದೇ ಹಿಂದಿನ ಮಾತುಗಳನ್ನು ಬದಲಾಯಿಸುವಿರಿ. ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ ಆನಂದಿಸುವಿರಿ. ಹಳೆಯ ನೆನಪುಗಳು ಕಾಡಬಹುದು. ಕೋಪ ನಿಯಂತ್ರಿಸಲು ಎಷ್ಟೇ ಪ್ರಯತ್ನಿಸಿದರೂ ಸವಾಲಾಗಬಹುದು.
ಕುಂಭ ರಾಶಿ: ನೀವು ಗುಟ್ಟಾಗಿಟ್ಟಿದ್ದ ರಹಸ್ಯವೊಂದು ಬಹಿರಂಗವಾಗಬಹುದು. ಮಾನಸಿಕ ಒತ್ತಡ ಕಡಿಮೆಯಿದ್ದರೂ ನೆಮ್ಮದಿಯ ಕೊರತೆ ಇರುತ್ತದೆ. ಹಣಕಾಸಿನ ನಿರೀಕ್ಷೆಯಲ್ಲಿರುವಿರಿ. ಬೇಡವಾದ ಅಭ್ಯಾಸಗಳನ್ನು ಬೇಗನೆ ಮೈಗೂಡಿಸಿಕೊಳ್ಳುವ ಅಪಾಯವಿದೆ. ಸಂಬಂಧಿಕರ ಭೇಟಿ ಸಂತಸ ತರಲಿದೆ. ವಿವಾಹ ಕಾರ್ಯಗಳಿಗೆ ಇತರರಿಂದ ವಿಘ್ನ ಎದುರಾಗಬಹುದು. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದ್ದು, ನಿಯಂತ್ರಣ ಕಷ್ಟ.
ಮೀನ ರಾಶಿ: ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಆಪ್ತರ ಸಲಹೆ ಪಡೆಯಿರಿ. ಉದ್ಯೋಗ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಹೆಚ್ಚು ಶ್ರಮಪಡಬೇಕು. ನಿರಂತರ ಪ್ರಯತ್ನವಿರಲಿ. ಅಶಕ್ತರಿಗೆ ಸಹಾಯ ಮಾಡುವುದರಿಂದ ನೆಮ್ಮದಿ ಸಿಗಲಿದೆ. ಮಾಧ್ಯಮಗಳಲ್ಲಿ ನಿಮ್ಮ ಪ್ರತಿಭೆ ಪ್ರದರ್ಶನವಾಗಲಿದೆ. ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವುದು ಉತ್ತಮ. ಅನಗತ್ಯ ಚಿಂತೆಗಳಿಂದ ದೂರವಿರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j