ಅಕ್ಟೋಬರ್ 05 : 2026ನೇ ಸಾಲಿನ ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜಾ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ಅಕ್ಟೋಬರ್ 25ರ ಭಾನುವಾರದಂದು ನಿಗದಿಪಡಿಸಲಾಗಿದ್ದ ರಜೆಯನ್ನು ಇದೀಗ ಅಕ್ಟೋಬರ್ 26ರ ಸೋಮವಾರಕ್ಕೆ ಬದಲಾಯಿಸಲಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರಿ ನೌಕರರಿಗೆ ಸತತ ಮೂರು ದಿನಗಳ ಕಾಲ ಸರಣಿ ರಜೆ (ಲಾಂಗ್ ವೀಕೆಂಡ್) ಲಭ್ಯವಾಗಲಿದೆ.
ರಜೆ ಬದಲಾವಣೆಗೆ ಕಾರಣವೇನು? ಸರ್ಕಾರದ ಹಿಂದಿನ ಅಧಿಸೂಚನೆಯಂತೆ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 25 (ಭಾನುವಾರ) ರಂದು ಘೋಷಿಸಲಾಗಿತ್ತು. ಆದರೆ, ವಾಲ್ಮೀಕಿ ಜಯಂತಿಯನ್ನು ಸಾಂಪ್ರದಾಯಿಕವಾಗಿ ‘ಶೀಗಿ ಹುಣ್ಣಿಮೆ’ಯ ದಿನದಂದೇ ಆಚರಿಸಲಾಗುತ್ತದೆ. ಈ ವರ್ಷ ಶೀಗಿ ಹುಣ್ಣಿಮೆಯು ಅಕ್ಟೋಬರ್ 26ರ ಸೋಮವಾರ ಬಂದಿರುವ ಹಿನ್ನೆಲೆಯಲ್ಲಿ, ಅಂದೇ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881ರ ಅನ್ವಯ ಈ ರಜೆಯನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಲಾಗಿದ್ದು, ಇದು ಬ್ಯಾಂಕ್‌ಗಳಿಗೂ ಅನ್ವಯವಾಗಲಿದೆ


ನೌಕರರಿಗೆ 3 ದಿನಗಳ ‘ಲಾಂಗ್ ವೀಕೆಂಡ್’: ರಜಾ ದಿನಾಂಕದ ಈ ಬದಲಾವಣೆಯಿಂದಾಗಿ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರಿಗೆ ಸತತ 3 ದಿನಗಳ ರಜೆ ಸಿಗಲಿದೆ. ಅಕ್ಟೋಬರ್ 24 (ನಾಲ್ಕನೇ ಶನಿವಾರ), ಅಕ್ಟೋಬರ್ 25 (ಭಾನುವಾರ) ಹಾಗೂ ಅಕ್ಟೋಬರ್ 26 (ಸೋಮವಾರ- ವಾಲ್ಮೀಕಿ ಜಯಂತಿ) ಸೇರಿ ಒಟ್ಟು ಮೂರು ದಿನಗಳ ಬಿಡುವು ದೊರೆಯಲಿದೆ. ಅಕ್ಟೋಬರ್ ತಿಂಗಳಲ್ಲಿ ದಸರಾ, ದುರ್ಗಾ ಪೂಜೆ, ಛತ್ ಪೂಜೆಯಂತಹ ಸಾಲು ಸಾಲು ಹಬ್ಬಗಳಿದ್ದು, ಈ ಸರಣಿ ರಜೆಯು ನೌಕರರ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು