ಕೇಂದ್ರ ಸರ್ಕಾರವು ಸೈಬರ್ ವಂಚನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದು, 2027ರ ಜನವರಿ 1ರಿಂದ ವಾಟ್ಸಾಪ್, ಟೆಲಿಗ್ರಾಂನಂತಹ ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ “ಸಿಮ್ ಬೈಂಡಿಂಗ್” (SIM Binding) ನಿಯಮವನ್ನು ಕಡ್ಡಾಯಗೊಳಿಸಿದೆ. ಇದರ ಅನ್ವಯ, ಈ ಆ್ಯಪ್‌ಗಳನ್ನು ಬಳಸಲು ಆಯಾ ಖಾತೆಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಮೊಬೈಲ್‌ನಲ್ಲಿ ಕಡ್ಡಾಯವಾಗಿ ಹಾಗೂ ಸಕ್ರಿಯವಾಗಿ ಇರಲೇಬೇಕಾಗುತ್ತದೆ.
ಹೊಸ ನಿಯಮದ ಕಾರ್ಯವಿಧಾನ ಪ್ರಸ್ತುತ ಒಮ್ಮೆ ಒಟಿಪಿ (OTP) ದೃಢೀಕರಣದ ಮೂಲಕ ಖಾತೆ ತೆರೆದರೆ, ಸಿಮ್ ಕಾರ್ಡ್ ಇಲ್ಲದಿದ್ದರೂ ಕೇವಲ ವೈ-ಫೈ ಸಹಾಯದಿಂದ ಆ್ಯಪ್ ಬಳಸಬಹುದು. ಆದರೆ ಹೊಸ ನಿಯಮದ ಪ್ರಕಾರ, ಮೊಬೈಲ್‌ನಿಂದ ಸಿಮ್ ತೆಗೆದರೆ ಅಥವಾ ರಿಚಾರ್ಜ್ ಇಲ್ಲದೆ ಸಿಮ್ ನಿಷ್ಕ್ರಿಯಗೊಂಡರೆ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಶೇರ್‌ಚಾಟ್ ಮುಂತಾದ ಆ್ಯಪ್‌ಗಳು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳಲಿವೆ. ಈ ಬದಲಾವಣೆಯನ್ನು ಅಳವಡಿಸಿಕೊಳ್ಳಲು ಟೆಲಿಕಾಂ ಮತ್ತು ಮೆಸೇಜಿಂಗ್ ಕಂಪನಿಗಳಿಗೆ 2026ರ ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಲಾಗಿದೆ.
ಕಠಿಣ ನಿಯಮದ ಹಿಂದಿನ ಉದ್ದೇಶ ಒಮ್ಮೆ ಭಾರತೀಯ ನಂಬರ್ ಬಳಸಿ ವಾಟ್ಸಾಪ್ ಆಕ್ಟಿವೇಟ್ ಮಾಡಿಕೊಂಡು, ಬಳಿಕ ಆ ಸಿಮ್ ಬಿಸಾಡಿ ವಿದೇಶಗಳಿಂದ ಕುಳಿತು ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ವಂಚನೆಗಳನ್ನು ನಡೆಸುತ್ತಿದ್ದಾರೆ. ದೂರಸಂಪರ್ಕ ಇಲಾಖೆ ಮಾಹಿತಿ ಪ್ರಕಾರ, ಇಂತಹ ವಂಚನೆಗಳಿಂದ ದೇಶಕ್ಕೆ ವಾರ್ಷಿಕ 22,800 ಕೋಟಿ ರೂ.ಗೂ ಅಧಿಕ ನಷ್ಟವಾಗುತ್ತಿದೆ. ಈ ಜಾಲವನ್ನು ಭೇದಿಸಲು ಸಿಮ್ ಬೈಂಡಿಂಗ್ ಅನಿವಾರ್ಯ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬಳಕೆದಾರರ ಮೇಲಿನ ಪರಿಣಾಮ ಹಾಗೂ ಮುನ್ನೆಚ್ಚರಿಕೆ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ವಾಟ್ಸಾಪ್ ವೆಬ್ (WhatsApp Web) ಬಳಸುವವರ ಪ್ರೈಮರಿ ಮೊಬೈಲ್‌ನಲ್ಲಿ ಸಿಮ್ ಸಕ್ರಿಯವಾಗಿರದಿದ್ದರೆ, ಲಿಂಕ್ ಆದ ಸಾಧನಗಳಲ್ಲೂ ಆ್ಯಪ್ ಕೆಲಸ ಮಾಡುವುದಿಲ್ಲ. ಅಲ್ಲದೆ, ಭದ್ರತೆಗಾಗಿ ಪದೇ ಪದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಅಥವಾ ಆಟೋ-ಲಾಗ್‌ಔಟ್ ಆಗುವ ವ್ಯವಸ್ಥೆ ಜಾರಿಗೆ ಬರಲಿದೆ. ಹೀಗಾಗಿ, ಸಾರ್ವಜನಿಕರು ತಮ್ಮ ಮೆಸೇಜಿಂಗ್ ಆ್ಯಪ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸಲು ಸಿಮ್ ಕಾರ್ಡ್‌ಗೆ ನಿಯಮಿತವಾಗಿ ರಿಚಾರ್ಜ್ ಮಾಡಿಸಿ, ಸದಾ ಚಾಲ್ತಿಯಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು