IPL 2023: 35 ಸಿಕ್ಸ್, 45 ಫೋರ್: RCB ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ಭಯ..!

IPL 2023 RCB vs LSG: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಹೈವೋಲ್ಟೇಜ್ ಕದನ ನಡೆಯಲಿದೆ. ಅದು ಕೂಡ ಕರ್ನಾಟಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ನಡುವೆ ಎಂಬುದು ವಿಶೇಷ. ಹೀಗಾಗಿ ತವರಿನ ಸ್ಟೇಡಿಯಂನಲ್ಲಿ ಕೆಎಲ್ ರಾಹುಲ್​ಗೂ ಫುಲ್ ಸಪೋರ್ಟ್ ಕಂಡು ಬರಲಿದೆ.ಇದುವೇ ಈಗ ಆರ್​ಸಿಬಿ ತಂಡದ ಚಿಂತೆಗೂ ಕಾರಣವಾಗಿದೆ. ಏಕೆಂದರೆ ಕೆಎಲ್ ರಾಹುಲ್ ಯಾವ ತಂಡದ ವಿರುದ್ಧ ಆಡುತ್ತರೋ ಗೊತ್ತಿಲ್ಲ. ಆದರೆ ಆರ್​ಸಿಬಿ ವಿರುದ್ಧ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದಕ್ಕೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಅವರ ಅಂಕಿ ಅಂಶಗಳೇ ಸಾಕ್ಷಿ.ಏಕೆಂದರೆ ಕೆಎಲ್ ರಾಹುಲ್ ಇದುವರೆಗೆ ಆರ್​ಸಿಬಿ ವಿರುದ್ಧ ಒಟ್ಟು 12 ಇನಿಂಗ್ಸ್​ ಆಡಿದ್ದಾರೆ. ಈ ವೇಳೆ ಬರೋಬ್ಬರಿ 610 ರನ್​ ಕಲೆಹಾಕಿದ್ದಾರೆ. ಹಾಗೆಯೇ ನಾಲ್ಕು ಬಾರಿ ಅಜೇಯರಾಗಿ ಕೂಡ ಉಳಿದಿದ್ದರು. ಅಂದರೆ ಆರ್​ಸಿಬಿ ವಿರುದ್ಧ ಕೆಎಲ್ ರಾಹುಲ್ 76.25 ಸರಾಸರಿಯಲ್ಲಿ ರನ್​ ಕಲೆಹಾಕಿದ್ದಾರೆ.ಇನ್ನು ಆರ್​ಸಿಬಿ ವಿರುದ್ಧ 147.69 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಕೆಎಲ್ ರಾಹುಲ್ 1 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳನ್ನು ಕೂಡ ಸಿಡಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟ್​ನಿಂದ ಮೂಡಿಬಂದಿರುವುದು 45 ಫೋರ್​ಗಳು ಹಾಗೂ 35 ಸಿಕ್ಸ್​ಗಳು.ಅಂದರೆ ಆರ್​ಸಿಬಿ ವಿರುದ್ಧದ 12 ಇನಿಂಗ್ಸ್​ಗಳಲ್ಲಿ ಕೆಎಲ್ ರಾಹುಲ್ ಸಿಕ್ಸ್​ ಹಾಗೂ ಫೋರ್​ಗಳ ಮೂಲಕವೇ ಒಟ್ಟು 390 ರನ್​ ಬಾರಿಸಿದ್ದಾರೆ. ಇದೀಗ ಕೆಎಲ್ ರಾಹುಲ್ ತನ್ನ ತವರು ಮೈದಾನ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇತ್ತ ಆರ್​ಸಿಬಿ ಅಭಿಮಾನಿಗಳು ಕೂಡ ಕೆಎಲ್ ರಾಹುಲ್ ಕಡೆಯಿಂದ ಭರ್ಜರಿ ಇನಿಂಗ್ಸ್​ನ ನಿರೀಕ್ಷೆಯಲ್ಲಿದೆ. ಅಲ್ಲದೆ ಕೆಎಲ್​​ಆರ್ ಅಬ್ಬರಿಸಲಾರಂಭಿಸಿದರೆ ಪ್ರೇಕ್ಷಕರ ಗ್ಯಾಲರಿಯಿಂದ ಭರಪೂರ ಬೆಂಬಲ ವ್ಯಕ್ತವಾಗುವುದರಲ್ಲಿ ಅನುಮಾನವೇ ಇಲ್ಲ. ಇದುವೇ ಈಗ ಆರ್​ಸಿಬಿ ತಂಡದ ಚಿಂತೆಗೆ ಕಾರಣವಾಗಿದೆ.

source https://tv9kannada.com/photo-gallery/cricket-photos/ipl-2023-rcb-vs-lsg-kl-rahul-dangerous-for-rcb-kannada-news-zp-au50-553052.html

Leave a Reply

Your email address will not be published. Required fields are marked *