ಶ್ರೀಲಂಕಾದಲ್ಲೂ ಯಶ್ ಜೊತೆಗಿನ ಫೋಟೋಗೆ ಮುಗಿಬಿದ್ದ ಜನ..!

ಕೆಜಿಎಫ್ ಸರಣಿ ಸಿನಿಮಾವಾದ ಮೇಲೆ ಯಶ್ ಪ್ರಸಿದ್ಧಿ ಜಗತ್ತಿನಾದ್ಯಂತ ಹಬ್ಬಿದೆ. ಎಲ್ಲೆಲ್ಲಿಯೂ ಯಶ್ ಕ್ರೇಜ್ ಜೋರಾಗಿದೆ. ಆದರೆ ಅಭಿಮಾನಿಗೆ ಯಶ್ ಮುಂದಿನ ಸಿನಿಮಾ ಯಾವುದಿರಬಹುದು..? ಅನೌನ್ಸ್ಮೆಂಟ್ ಯಾವಾಗ ಎಂಬುದೇ ಚಿಂತೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ಯಶ್ ಗೆ ಯಾವಾಗಲೂ ಎದುರಾಗುವ ಪ್ರಶ್ನೆ ಇದೆ ಆಗಿದೆ.

ಯಶ್ ಕೂಡ ಸಿನಿಮಾ ಅಪ್ಡೇಟ್ ಆದಷ್ಟು ಬೇಗ ಕೊಡ್ತೀನಿ ಎಂದಿದ್ದಾರೆ. ಮತ್ತೆ ಕೆಜಿಎಫ್ ಮಟ್ಟದಲ್ಲಿಯೇ ಸಿನಿಮಾವೊಂದನ್ನು ಮಾಡಬಹುದು ಎಂಬ ನಿರೀಕ್ಷೆ ಏನೋ ಇದೆ. ಹೀಗಾಗಿ ಅಭಿಮಾನಿಗಳು ಕೂಡ ತಾಳ್ಮೆ ತಂದುಕೊಂಡಿದ್ದಾರೆ. ಸದ್ಯ ರಾಕಿಬಾಯ್ ಸುತ್ತಾಟ ನಡೆಸುತ್ತಿದ್ದಾರೆ. ಅದು ಸಿನಿಮಾಗಾ ವೈಯಕ್ತಿಕ ಎಂಬುದು ಮಾತ್ರ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

ಯಶ್ ಹೋದಲ್ಲಿ ಬಂದಲ್ಲಿ ಫ್ಯಾನ್ಸಚ ಇದ್ದೆ ಇರ್ತಾರೆ. ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಯಶ್ ಗೆ ಅಭಿಮಾನಿಗಳು ಮುತ್ತಕೊಂಡಿದ್ದಾರೆ. ಫೋಟೋಗಾಗಿ ಹೊಟೇಲ್ ಸಿಬ್ಬಂದಿ ಸೇರಿದಂತೆ ಹೊಟೇಲ್ ಗೆ ಬಂದಿದ್ದ ಜನರು ಮುಗಿಬಿದ್ದಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮೂಲಗಳ ಪ್ರಕಾರ ದಿಲ್ ರಾಜು ಬ್ಯಾನರ್ ನಲ್ಲಿ ಯಶ್ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

The post ಶ್ರೀಲಂಕಾದಲ್ಲೂ ಯಶ್ ಜೊತೆಗಿನ ಫೋಟೋಗೆ ಮುಗಿಬಿದ್ದ ಜನ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/VNXqIpv
via IFTTT

Leave a Reply

Your email address will not be published. Required fields are marked *