IPL 2023: 3 ಪಂದ್ಯಗಳು ಬಾಕಿ: RCBಯ 6 ಆಟಗಾರರು ವೇಟಿಂಗ್

IPL 2023: ಐಪಿಎಲ್​ ಸೀಸನ್ 16 ರಲ್ಲಿ ಆರ್​ಸಿಬಿ ತಂಡವು 11 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ ಆರ್​ಸಿಬಿ 6 ಮ್ಯಾಚ್​ಗಳಲ್ಲಿ ಸೋತಿದೆ. ಇದಾಗ್ಯೂ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿಲ್ಲ. ಇದಕ್ಕೆ ಸಾಕ್ಷಿಯೇ ಆರ್​ಸಿಬಿ ಪರ 6 ಆಟಗಾರರು ಬೆಂಚ್ ಕಾಯುತ್ತಿರುವುದು.ಹೌದು, ಆರ್​ಸಿಬಿ ತಂಡದಲ್ಲಿರುವ 25 ಆಟಗಾರರಲ್ಲಿ 6 ಆಟಗಾರರು ಇನ್ನೂ ಕೂಡ ಒಂದೇ ಒಂದು ಪಂದ್ಯವಾಡಿಲ್ಲ. ಅಂದರೆ ಕಳೆದ 11 ಪಂದ್ಯಗಳಲ್ಲಿ ಆರ್​ಸಿಬಿ ಸತತ ವೈಫಲ್ಯ ಹೊಂದಿದ್ದ ಆಟಗಾರರನ್ನೇ ಕಣಕ್ಕಿಳಿಸಿದೆ.ಇತ್ತ ಆರ್​ಸಿಬಿ ಪರ ಚೊಚ್ಚಲ ಅವಕಾಶಕ್ಕಾಗಿ 6 ಆಟಗಾರರು ಕಾಯುತ್ತಿದ್ದಾರೆ. ಆದರೆ ಇನ್ನುಳಿದಿರುವುದು ಕೇವಲ 3 ಪಂದ್ಯಗಳು ಮಾತ್ರ. ಇವರಲ್ಲಿ ಯಾರಿಗೆ ಆರ್​ಸಿಬಿ ಪರ ಪದಾರ್ಪಣೆ ಮಾಡುವ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.ಆರ್​ಸಿಬಿ ಪರ ಒಂದೇ ಒಂದು ಪಂದ್ಯವಾಡದ 6 ಆಟಗಾರರ ಪಟ್ಟಿ ಇಲ್ಲಿದೆ...1- ಫಿನ್ ಅಲೆನ್2- ಮನೋಜ್ ಭಾಂಡಗೆ3- ಸೋನು ಯಾದವ್4- ಅವಿನಾಶ್ ಸಿಂಗ್5- ರಜನ್ ಕುಮಾರ್6- ಹಿಮಾಂಶು ಶರ್ಮಾಇನ್ನು ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದ ವೇಗಿ ಸಿದ್ದಾರ್ಥ್​ ಕೌಲ್ ತಂಡದಲ್ಲಿದ್ದರೂ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಅಂದರೆ ಆರ್​ಸಿಬಿ ಪರ ಈ ಸಲ ಒಟ್ಟು 7 ಆಟಗಾರರು ಒಂದೇ ಒಂದು ಪಂದ್ಯವಾಡಿಲ್ಲ. ಇವರಲ್ಲಿ 6 ಆಟಗಾರರು ಐಪಿಎಲ್​ಗೆ ಪಾದರ್ಪಣೆ ಮಾಡಲು ಕಾಯುತ್ತಿದ್ದಾರೆ.RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

source https://tv9kannada.com/photo-gallery/cricket-photos/ipl-2023-rcb-players-didnt-debut-in-ipl-kannada-news-zp-575834.html

Leave a Reply

Your email address will not be published. Required fields are marked *