Skip to content
  • Thursday, March 26, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • WTC Final 2023: ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಔಟ್..!
Sports

WTC Final 2023: ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಔಟ್..!

June 4, 2023
samagrasuddi

WTC Final 2023: ಜನವರಿ 7 ರಿಂದ ಶುರುವಾಗಲಿರುವ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಫೈನಲ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.ಹೌದು, ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್​ವುಡ್ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.ಕಳೆದ ಕೆಲ ತಿಂಗಳಿಂದ ಪಾದದ ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಜೋಶ್ ಹ್ಯಾಝಲ್​ವುಡ್ ಈ ಬಾರಿಯ ಐಪಿಎಲ್​ನಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು. ಇದಾಗ್ಯೂ ಅವರು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವಾಡಲಿದ್ದಾರೆ ಎನ್ನಲಾಗಿತ್ತು.ಅದರಂತೆ ಫೈನಲ್ ಪಂದ್ಯಕ್ಕೆ ಹ್ಯಾಝಲ್​ವುಡ್ ಕಠಿಣ ಅಭ್ಯಾಸವನ್ನೂ ಕೂಡ ಆರಂಭಿಸಿದ್ದರು. ಇದೀಗ ಫಿಟ್​ ಆಗಿದ್ದರೂ ಆಸ್ಟ್ರೇಲಿಯಾ ಕ್ರಿಕೆಟ್​ ಬೋರ್ಡ್ ಅವರಿಗೆ ವಿಶ್ರಾಂತಿ ಸೂಚಿಸಿದೆ. ಇದಕ್ಕೆ ಮುಖ್ಯ ಕಾರಣ ಮುಂಬರುವ ಆ್ಯಶಸ್ ಸರಣಿ.ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಗೆ ಜೋಶ್ ಹ್ಯಾಝಲ್​ವುಡ್ ಅತ್ಯವಶ್ಯಕ. ಇದೀಗ ಅವರು ಫಿಟ್​ನೆಸ್ ಸಾಧಿಸುತ್ತಾ ಬಂದಿದ್ದಾರೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡ ಆ್ಯಶಸ್ ಸರಣಿ ಆಡಬೇಕಿದೆ. ಮುಂಬರುವ ಸರಣಿಯನ್ನು ಗಮನದಲ್ಲಿರಿಸಿ ಎಚ್ಚರಿಕೆಯ ಸಲುವಾಗಿ ಜೋಶ್ ಹ್ಯಾಝಲ್​ವುಡ್​ ಅವರನ್ನು ಫೈನಲ್ ಪಂದ್ಯದಿಂದ ಹೊರಗಿಡಲಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ತಿಳಿಸಿದ್ದಾರೆ.ಇನ್ನು ಜೋಶ್ ಹ್ಯಾಝಲ್​ವುಡ್ ಸ್ಥಾನಕ್ಕೆ 33 ವರ್ಷದ ವೇಗದ ಬೌಲರ್ ಮೈಕೆಲ್ ನೆಸರ್ ಅವರನ್ನು ಆಯ್ಕೆ ಮಾಡಲಾಗಿದೆ. 2021-22ರ ಆ್ಯಶಸ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ನೆಸರ್, ಆ ಬಳಿಕ ಆಡಿದ್ದು ಕೇವಲ ಒಂದು ಟೆಸ್ಟ್ ಪಂದ್ಯ ಮಾತ್ರ. ಇದೀಗ ಮತ್ತೆ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಆಸ್ಟ್ರೇಲಿಯಾ ಪರ 59 ಟೆಸ್ಟ್ ಪಂದ್ಯಗಳನ್ನಾಡಿರುವ ಜೋಶ್ ಹ್ಯಾಝಲ್​ವುಡ್ ಒಟ್ಟು 222 ವಿಕೆಟ್ ಕಬಳಿಸಿದ್ದಾರೆ. ಇದೀಗ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಪ್ರಮುಖ ವೇಗಿ ಹೊರಗುಳಿಯುತ್ತಿರುವುದು ಆಸೀಸ್ ಬಳಗಕ್ಕೆ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ.
ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಮೈಕೆಲ್ ನೆಸರ್.

source https://tv9kannada.com/photo-gallery/cricket-photos/wtc-final-2023-josh-hazlewood-ruled-out-of-wtc-final-kannada-news-zp-594076.html

Tags: Cricket, samagrasuddi, ಸಮಗ್ರ ಸುದ್ದಿ

Post navigation

NAM vs KAR: 8 ಸಿಕ್ಸರ್, 13 ಫೋರ್: ನಮೀಬಿಯಾ ವಿರುದ್ಧ ಕನ್ನಡಿಗನ ಸಿಡಿಲಬ್ಬರದ ಶತಕ
WTC Final 2023: ‘ಭಾವನಾತ್ಮಕ ಕ್ಷಣವಾಗಿತ್ತು’; ತಂಡದಿಂದ ಹೊರಗಿದ್ದ ಬಗ್ಗೆ ರಹಾನೆ ಹೇಳಿದ ಮಾತುಗಳಿವು

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ

March 25, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
  • Horoscope Today, 26 March: ಈ ರಾಶಿಯವರಿಗೆ ಇಂದು ಮಾನಸಿಕವಾಗಿ ಸ್ವಲ್ಪ ಗೊಂದಲದ ದಿನ.
  • 2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ
  • RCB New Era:ಬೃಹತ್ ಮೊತ್ತಕ್ಕೆ ಮಾರಾಟವಾದ ಆರ್‌ಸಿಬಿ; ಹೊಸ ಮಾಲೀಕರು ಯಾರು? ಕೊಹ್ಲಿ ಭವಿಷ್ಯವೇನು? ಸಂಪೂರ್ಣ ವಿವರ.
  • UPSC ನಿಂದ ಮೆಗಾ ನೇಮಕಾತಿ: 1300ಕ್ಕೂ ಅಧಿಕ ವೈದ್ಯಾಧಿಕಾರಿ ಹುದ್ದೆಗಳು ಖಾಲಿ, ಮಾ.31 ಕಡೆ ದಿನ.
  • ಕರ್ನಾಟಕ ಆಯುಷ್ ಇಲಾಖೆ ನೇಮಕಾತಿ 2026:ಬೆಂಗಳೂರಿನಲ್ಲಿ ಖಾತೆ ಸಹಾಯಕ ಹುದ್ದೆಗೆ ನೇರ ಸಂದರ್ಶನ | AYUSH Karnataka Recruitment
Copyright © 2026
CONTACT US
Theme by: Theme Horse
Proudly Powered by: WordPress