WTC ಬೆಸ್ಟ್ ಇಲೆವೆನ್: ಟೀಮ್ ಇಂಡಿಯಾದ ಮೂವರಿಗೆ ಸ್ಥಾನ

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾ ಟೀಮ್ ಆಫ್​ ದಿ ಟೂರ್ನಮೆಂಟ್ ಅನ್ನು ಪ್ರಕಟಿಸಿದೆ. 2021 ರಿಂದ 2023ರವರೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರನ್ನು ಈ ತಂಡಕ್ಕಾಗಿ ಆಯ್ಕೆ ಮಾಡಲಾಗಿದೆ.ವಿಶೇಷ ಎಂದರೆ ಆಸ್ಟ್ರೇಲಿಯಾ ಪ್ರಕಟಿಸಿರುವ ಈ ಬೆಸ್ಟ್ ಇಲೆವೆನ್​​ನಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಇಬ್ಬರು ಆಲ್​ರೌಂಡರ್​ಗಳು ಒಬ್ಬರು ವಿಕೆಟ್ ಕೀಪರ್ ಎಂಬುದು ಇಲ್ಲಿ ಮತ್ತೊಂದು ವಿಶೇಷ.
ಇದಾಗ್ಯೂ ಈ ತಂಡದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಸ್ಥಾನ ಪಡೆದಿಲ್ಲ. ಹಾಗೆಯೇ ಬೌಲಿಂಗ್ ವಿಭಾಗದಿಂದ ಯಾವುದೇ ವೇಗದ ಬೌಲರ್​ ಕೂಡ ಆಯ್ಕೆಯಾಗಿಲ್ಲ.ಇನ್ನು ಬೆಸ್ಟ್ ಇಲೆವೆನ್​ನಲ್ಲಿ ಪ್ರಸ್ತುತ ತಂಡದಿಂದ ಹೊರಗುಳಿದಿರುವ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. ಕಳೆದ 2 ವರ್ಷಗಳಲ್ಲಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪಂತ್ 43.41 ಸರಾಸರಿಯಲ್ಲಿ 868 ರನ್​ಗಳಿಸಿ ಮಿಂಚಿದ್ದರು. ಹೀಗಾಗಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಬೆಸ್ಟ್ ಇಲೆವೆನ್ ಈ ಕೆಳಗಿನಂತಿದೆ...1- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)2- ದಿಮುತ್ ಕರುಣರತ್ನೆ (ಶ್ರೀಲಂಕಾ)3- ಬಾಬರ್ ಆಝಂ (ಪಾಕಿಸ್ತಾನ್)3- ಬಾಬರ್ ಆಝಂ (ಪಾಕಿಸ್ತಾನ್)5- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)6- ರವೀಂದ್ರ ಜಡೇಜಾ- ಆಲ್​ರೌಂಡರ್ (ಭಾರತ)7- ರವಿಚಂದ್ರನ್ ಅಶ್ವಿನ್- ಆಲ್​ರೌಂಡರ್ (ಭಾರತ)8- ರಿಷಭ್ ಪಂತ್- ವಿಕೆಟ್ ಕೀಪರ್ (ಭಾರತ)9- ಪ್ಯಾಟ್ ಕಮಿನ್ಸ್- ಆಲ್​ರೌಂಡರ್ (ಆಸ್ಟ್ರೇಲಿಯಾ)10- ಕಗಿಸೊ ರಬಾಡ (ಸೌತ್ ಆಫ್ರಿಕಾ)11- ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್)ಭಾರತ-ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವು ಜೂನ್ 7 ರಿಂದ ಶುರುವಾಗಲಿದೆ. ಇಂಗ್ಲೆಂಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ.

source https://tv9kannada.com/photo-gallery/cricket-photos/wtc-final-2023-cricket-australias-wtc-team-of-the-tournament-kannada-news-zp-594111.html

Leave a Reply

Your email address will not be published. Required fields are marked *