ಕೆಪಿಎಸ್‌ಸಿಯಿಂದ ಗ್ರೂಪ್ ‘ಬಿ’ಗೆ ನೇಮಕಾತಿ; ಸ್ಪರ್ಧಾ ಪರೀಕ್ಷೆ ಮೂಲಕ ಹುದ್ದೆಗಳ ಭರ್ತಿ.

ಸರ್ಕಾರಿ ನೌಕರಿಯ ಕನಸು ಕಂಡಿರುವ ಹಲವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ಹುದ್ದೆಯ ಸಂಪೂರ್ಣ ವಿವರ ಇಲ್ಲಿದೆ.

ಒಟ್ಟು ಹುದ್ದೆ: 327

ಹುದ್ದೆ ವಿವರ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 100
ಜಲ ಸಂಪನ್ಮೂಲ ಇಲಾಖೆ 90
ಭೂಮಾಪನ, ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆ 27
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 40
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ 23
ಜಲಸಂಪನ್ಮೂಲ ಇಲಾಖೆ 10
ಕಾರ್ಖಾನೆ, ಬಾಯ್ಲರ್ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ 12
ಅಂತರ್ಜಲ ನಿರ್ದೇಶನಾಲಯ 25

ಹುದ್ದೆ ಹೆಸರು: ಸಹಾಯಕ ಇಂಜಿನಿಯರ್(ಸಿವಿಲ್), ಸಹಾಯಕ ನಿರ್ದೇಶಕರು(ಕಾರ್ಖಾನೆ/ಭೂದಾಖಲೆ/ಬಾಯ್ಲರ್), ಪತ್ರಾಂಕಿತ ವ್ಯವಸ್ಥಾಪಕರು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಭೂವಿಜ್ಞಾನಿ

ವಿದ್ಯಾರ್ಹತೆ
ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ಸಿವಿಲ್ ಇಂಜಿನಿಯರಿಂಗ್/ಮೆಕ್ಯಾನಿಕಲ್ ಇಂಜಿನಿಯರಿಂಗ್/ಬಿ.ಟೆಕ್/ಬಿಇ/ಇತರ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು.

ವಯೋ ಅರ್ಹತೆ: ಕೆಪಿಎಸ್‌ಸಿ ನಿಯಮಾನುಸಾರ ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಮಾನದಂಡವಾಗಿದೆ. 2ಎ/2ಬಿ/3ಎ/3ಬಿಯವರಿಗೆ 3 ವರ್ಷ,

ಎಸ್ಸಿ/ಎಸ್ಟಿ/ಪ್ರವರ್ಗ-1ಕ್ಕೆ 5 ವರ್ಷ,

ಅಂಗವಿಕಲರು ಹಾಗೂ ವಿಧವೆಯರಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿವೆ.

ಅರ್ಜಿ ಶುಲ್ಕ: ಮಾಜಿ ಸೈನಿಕರಿಗೆ 50ರೂ.,

ಪ್ರವರ್ಗ 2ಎ/2ಬಿ/3ಎ/3ಬಿಗೆ 150ರೂ. ಹಾಗೂ ಸಾಮಾನ್ಯ ವರ್ಗದವರಿಗೆ 300ರೂ. ಅರ್ಜಿ ಶುಲ್ಕ ಆನ್‌ಲೈನ್ ಮುಖೇನ ಪಾವತಿಸಬೇಕಿದೆ.

ಅಭ್ಯರ್ಥಿ ಆಯ್ಕೆ ಹೀಗಿರಲಿದೆ
ಕೆಪಿಎಸ್‌ಸಿ ನಡೆಸುವ ಸ್ಪರ್ಧಾಪರೀಕ್ಷೆ ಹಾಗೂ ಸಂದರ್ಶನ ಮುಖೇನ ಅಭ್ಯರ್ಥಿಗಳು ಗಳಿಸುವ ಶೇಕಡವಾರು ಪ್ರಮಾಣ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ ಆಯ್ಕೆ ನಡೆಯಲಿದೆ.

ವೇತನ ಶ್ರೇಣಿ
ಸಹಾಯಕ ಇಂಜಿನಿಯರ್(ಸಿವಿಲ್), ಸಹಾಯಕ ನಿರ್ದೇಶಕರು(ಭೂದಾಖಲೆ), ಕಲ್ಯಾಣಾಧಿಕಾರಿ – 43,100ರೂ.-83,900ರೂ.
ಸಹಾಯಕ ನಿರ್ದೇಶಕರು(ವಾಣಿಜ್ಯ)-45,300ರೂ.-88,300ರೂ.
ಸಹಾಯಕ ಇಂಜಿನಿಯರ್(ಮೆಕ್ಯಾನಿಕಲ್), ಸಹಾಯಕ ನಿರ್ದೇಶಕರು(ಕೈಗಾರಿಕೆ/ಬಾಯ್ಲರ್ಸ್‌), ಭೂವಿಜ್ಞಾನಿ-43,100ರೂ.-83,900ರೂ.

ಅರ್ಜಿ ಇಲ್ಲಿ ಸಲ್ಲಿಸಿ
bit.ly/3TfNVHI

ಅರ್ಜಿ ಸಲ್ಲಿಕೆ ಪ್ರಾರಂಭ: 15.04.2024
ಅರ್ಜಿ ಸಲ್ಲಿಕೆಗೆ ಕೊನೇ ದಿನ: 14.05.2024

ಹೆಚ್ಚಿನ ವಿವರ: bit.ly/3PnfVId / bit.ly/3TBzJKD

Source : https://m.dailyhunt.in/news/india/kannada/vijayvani-epaper-vijaykan/kepiessiyindha+grup+bi+ge+nemakaati+spardha+parikshe+mulaka+huddegala+bharti-newsid-n591728200?listname=topicsList&topic=news&index=2&topicIndex=1&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *