IND vs NZ: ಕನ್ನಡಿಗನ ಕೈಸೇರಿದ ಗೋಲ್ಡನ್ ಬ್ಯಾಟ್, ಪಂದ್ಯಾವಳಿಯ ಆಟಗಾರ ಕಿರೀಟ.

2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಪಂದ್ಯಾವಳಿಯೂ ಕೊನೆಗೊಂಡಿತು. ಇತ್ತ ಫೈನಲ್ ಪಂದ್ಯದಲ್ಲಿ ಸೋತರೂ, ಕಿವೀಸ್ ತಂಡದ ಆರಂಭಿಕ ಆಟಗಾರ ರಚಿನ್ ರವೀಂದ್ರ ಇಡೀ ಟೂರ್ನಿಯ ಹೀರೋ ಆಗಿ ಹೊರಹೊಮ್ಮಿದರು.

ಕಿವೀಸ್ ಪರ ಇಡೀ ಪಂದ್ಯಾವಳಿಯ ಉದ್ದಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ರಚಿನ್​ಗೆ ಗೋಲ್ಡನ್ ಬ್ಯಾಟ್ ಸಿಕ್ಕಿದೆ. ಇಡೀ ಪಂದ್ಯಾವಳಿಯಲ್ಲಿ ಆಡಿದ 4 ಇನ್ನಿಂಗ್ಸ್‌ಗಳಲ್ಲಿ 263 ರನ್ ಕಲೆಹಾಕಿದ ರಚಿನ್ ರವೀಂದ್ರ, ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು
ಕಿವೀಸ್ ಪರ ಇಡೀ ಪಂದ್ಯಾವಳಿಯ ಉದ್ದಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ರಚಿನ್​ಗೆ ಗೋಲ್ಡನ್ ಬ್ಯಾಟ್ ಸಿಕ್ಕಿದೆ. ಇಡೀ ಪಂದ್ಯಾವಳಿಯಲ್ಲಿ ಆಡಿದ 4 ಇನ್ನಿಂಗ್ಸ್‌ಗಳಲ್ಲಿ 263 ರನ್ ಕಲೆಹಾಕಿದ ರಚಿನ್ ರವೀಂದ್ರ, ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು.
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಗೋಲ್ಡನ್ ಬ್ಯಾಟ್ ನೀಡಲಾಗುತ್ತದೆ. ಆ ಪ್ರಕಾರ, ಅತಿ ಹೆಚ್ಚು ರನ್ ಬಾರಿಸಿದ ರಚಿನ್​ಗೆ ಗೋಲ್ಡನ್ ಬ್ಯಾಟ್ ಸಿಕ್ಕಿದೆ. ಇದು ಮಾತ್ರವಲ್ಲದೆ ಇಡೀ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ರಚಿನ್​ಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯೂ ಲಭಿಸಿತು.

ವಾಸ್ತವವಾಗಿ ಗೋಲ್ಡನ್ ಬ್ಯಾಟ್ ರೇಸ್​ನಲ್ಲಿ ಭಾರತದ ಇಬ್ಬರು ಬ್ಯಾಟ್ಸ್‌ಮನ್​ಗಳು ಕೂಡ ಇದ್ದರು. ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿಗೆ ಗೋಲ್ಡನ್ ಬ್ಯಾಟ್ ಗೆಲ್ಲುವ ಅವಕಾಶವಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಚಮತ್ಕಾರ ತೋರದ ಈ ಇಬ್ಬರು ಆಟಗಾರರು ಸ್ವಲ್ಪದರಲ್ಲೇ ಗೋಲ್ಡನ್ ಬ್ಯಾಟ್ ಗೆಲ್ಲುವ ಅವಕಾಶದಿಂದ ವಂಚಿತರಾದರು.

ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 48 ರನ್​ಗಳ ಇನ್ನಿಂಗ್ಸ್ ಅಡಿದ ಶ್ರೇಯಸ್ ಅಯ್ಯರ್ ಕೇವಲ 20 ರನ್​ಗಳ ಅಂತರದಿಂದ ಗೋಲ್ಡನ್ ಬ್ಯಾಟ್ ವಂಚಿತರಾದರು. ಅಯ್ಯರ್ ಈ ಟೂರ್ನಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 48.60 ಸರಾಸರಿಯಲ್ಲಿ 243 ರನ್ ಕಲೆಹಾಕಿದರು. ಈ ಪಂದ್ಯಾವಳಿಯಲ್ಲಿ ಅವರು 2 ಅರ್ಧಶತಕಗಳನ್ನು ಬಾರಿಸಿದರು.

ಈ ಇಬ್ಬರನ್ನು ಹೊರತುಪಡಿಸಿ ಆಡಿದ 3 ಇನ್ನಿಂಗ್ಸ್‌ಗಳಲ್ಲಿ 75.66 ಸರಾಸರಿಯಲ್ಲಿ 227 ರನ್ ಗಳಿಸಿದ ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರೆ, ಇಂಗ್ಲೆಂಡ್‌ನ ಜೋ ರೂಟ್ 225 ರನ್‌ಗಳೊಂದಿಗೆ ನಾಲ್ಕನೇ ಸ್ಥಾನ ಹಾಗೂ ವಿರಾಟ್ ಕೊಹ್ಲಿ 218 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

Source : https://tv9kannada.com/photo-gallery/cricket-photos/champions-trophy-2025-rachin-ravinadra-golden-bat-psr-989141-4.html

Leave a Reply

Your email address will not be published. Required fields are marked *