ಬಿಜೆಪಿ ಎಸ್‌ಟಿ ಮೋರ್ಚಾ ಚಿತ್ರದುರ್ಗ ಜಿಲ್ಲಾ ಸಮಿತಿ ಪುನಾರಚನೆ: ನೂತನ ಪದಾಧಿಕಾರಿಗಳ ನೇಮಕ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ: ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸಂಘಟನಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸುವ ಉದ್ದೇಶದಿಂದ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಭಾರತೀಯ ಜನತಾ ಪಾರ್ಟಿಯ ಎಸ್‌ಟಿ ಮೋರ್ಚಾ ಸಮಿತಿಯನ್ನು ಪುನರಚಿಸಲಾಗಿದೆ. ಈ ಕುರಿತು ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜೆ.ಬಿ. ರಾಜು ಅಧಿಕೃತ ಆದೇಶ ಹೊರಡಿಸಿದ್ದು, ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

​ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿವಿಧ ಜವಾಬ್ದಾರಿಗಳಿಗೆ ನಾಯಕರನ್ನು ನೇಮಕ ಮಾಡಲಾಗಿದ್ದು, ಸಮಿತಿಯಲ್ಲಿ 5 ಜನ ಉಪಾಧ್ಯಕ್ಷರು, 2 ಜನ ಪ್ರಧಾನ ಕಾರ್ಯದರ್ಶಿಗಳು, 7 ಜನ ಕಾರ್ಯದರ್ಶಿಗಳು ಹಾಗೂ 12 ಜನ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

​ಪ್ರಮುಖ ನೇಮಕಾತಿಗಳ ವಿವರ:

  • ಉಪಾಧ್ಯಕ್ಷರು: ಗೌರಿ ರಾಜಕುಮಾರ್ (ಹೊಳಲ್ಕೆರೆ), ಟಿ.ಜೆ. ತಿಪ್ಪೇಸ್ವಾಮಿ (ಚಳ್ಳಕೆರೆ), ಎಸ್. ಲೋಕೇಶ್ (ಹಿರಿಯೂರು), ಕೆ.ಬಿ. ಮಹೇಶ್ (ಮೊಳಕಾಲ್ಮೂರು), ನರಸಿಂಹಮೂರ್ತಿ ಎ. (ಭರಮಸಾಗರ) ಹಾಗೂ ಟಿ.ಎಸ್. ವಸಂತ (ಚಿತ್ರದುರ್ಗ ಗ್ರಾಮಾಂತರ).
  • ಪ್ರಧಾನ ಕಾರ್ಯದರ್ಶಿಗಳು: ಬಿ.ಓ. ಬೋಸೆರಂಗಪ್ಪ (ನಾಯಕನಹಟ್ಟಿ) ಮತ್ತು ನವೀನ್ ಎನ್. (ಚಳ್ಳಕೆರೆ).
  • ಕಾರ್ಯದರ್ಶಿಗಳು: ದಕ್ಷಿಣ ಮೂರ್ತಿ ಎಸ್. (ಹಿರಿಯೂರು), ನಾಗರಾಜ್ ಬಿ. ನಾಯಕ್ (ಪರಶುರಾಮಪುರ), ಅಜಯ್ ಜೆ.ಆರ್. (ಹೊಳಲ್ಕೆರೆ), ವಿಜಯಕುಮಾರ್ ಆರ್. (ಹೊಸದುರ್ಗ), ಪಿ. ಜಯ್ಯಣ್ಣ ಹಾಗೂ ಮಲೇಶ್ ನಾಯಕ.
  • ಕಾರ್ಯಕಾರಿಣಿ ಸದಸ್ಯರು: ತಿಪ್ಪೇಸ್ವಾಮಿ, ಕಣ್ಣಮಪ್ಪ ಎಸ್., ಎಂ.ಓ. ತಿಪ್ಪೇಸ್ವಾಮಿ, ರಾಜಶೇಖರ್, ಹರೀಶ್ ಕೆ., ರಮೇಶ್ ಟಿ.ಎಂ., ಮಂಜುನಾಥ್ ಓ., ಮರಡಿ ವಿಶ್ವನಾಥ್, ಹೇಮದಳ ದೇವರಾಜ್ ಮತ್ತು ಭೀಮಣ್ಣ ಸೇರಿದಂತೆ ಒಟ್ಟು 12 ಜನರಿಗೆ ಸ್ಥಾನ ಕಲ್ಪಿಸಲಾಗಿದೆ.

​ಸಂಘಟನೆಯಲ್ಲಿ ಹೊಸ ಜೋಶ್ ತುಂಬಿರುವ ನೂತನ ಪದಾಧಿಕಾರಿಗಳು ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಶ್ರಮಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಜೆ.ಬಿ. ರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *