ಚಿತ್ರದುರ್ಗ| ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳಿಂದ ಸ್ಮಾರಕ ಸ್ವಚ್ಛತೆ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 19 : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಸರ್ಕಾರಿ ಕಲಾ ಕಾಲೇಜ್ ಸ್ವಾಯತ್ತ ಇತಿಹಾಸ ಪರಂಪರೆ ಕೂಟ ಮತ್ತು ಎನ್‍ಎಸ್‍ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಚಿತ್ರದುರ್ಗ ನಗರದ ಐತಿಹಾಸಿಕ ಸ್ಮಾರಕವಾದ ಸಿಹಿ ನೀರು ಹೊಂಡದ ಪಕ್ಕದಲ್ಲಿರುವ ಉಚ್ಚಂಗಿ ಯಲ್ಲಮ್ಮ ಬಾಗಿಲ ಬಳಿಯಲ್ಲಿ ಸ್ಮಾರಕ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಹ್ಲಾದ ಜಿ ಮಾತನಾಡಿ ಚಿತ್ರದುರ್ಗ ಪಾಳೇಗಾರ ಅರಸರ ಕಾಲದಲ್ಲಿ ನಿರ್ಮಾಣವಾದ ಭವ್ಯವಾದ ಕೋಟೆಯ ಕೊನೆಯ ಸುತ್ತು ಹಾಗೂ ಈಗಿನ ಮೊದಲ ಸುತ್ತಿನ ಪ್ರಮುಖ ನಾಲ್ಕು
ಬಾಗಿಲು ಈಗ ಉಳಿದುಕೊಂಡಿದ್ದು ಅವುಗಳನ್ನು ಸಂರಕ್ಷಿಸುವುದು ಜರೂರು ಅವಶ್ಯಕತೆ ಇದೆ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಂದ ಸ್ಮಾರಕಗಳ ಬಳಿಯಲ್ಲಿ ಹೆಚ್ಚು ಹೆಚ್ಚು ಸ್ವಚ್ಛತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಎಷ್ಟೋ ಸ್ಮಾರಕಗಳನ್ನು ಮರ-ಗಿಡ ಗಂಟೆಗಳಿಂದ ಹಾಳಾಗದಂತೆ ರಕ್ಷಿಸಬಹುದು ಎಂದು ತಿಳಿಸಿದರು.

ಚಿತ್ರದುರ್ಗದ ಮದಕರಿ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಗೋಪಾಲಸ್ವಾಮಿ ನಾಯಕ್‍ಮಾತನಾಡುತ್ತ ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ ಸ್ಮಾರಕ ಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದರೊಂದಿಗೆ ಆಸಕ್ತಿ ವಹಿಸಬೇಕು ತಮ್ಮ ತಮ್ಮ ಊರುಗಳಲ್ಲಿರುವ
ಶಿಲಾಶಾಸನ ಕೋಟೆ ಸ್ಮಾರಕಗಳನ್ನುಸಂರಕ್ಷಿಸಲು ಪುರಾತತ್ವ ಇಲಾಖೆಯ ಗಮನಕ್ಕೆ ತರಬೇಕು ಎಂದರು.

ಕಾಲೇಜಿನ ಎನ್‍ಎಸ್‍ಎಸ್ ಘಟಕ ಅಧಿಕಾರಿಗಳಾದ ಪ್ರಸಾದ್ ಮಾತನಾಡಿ ಮುಂದಿನ ದಿನಗಳಲ್ಲಿ ಸ್ಮಾರಕಗಳ ಬಳಿಯಲ್ಲಿ ಎನ್‍ಎಸ್‍ಎಸ್‍ ವತಿಯಿಂದ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು
ಮೂಡಿಸಲಾಗುವುದು ಎಂದರು

ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ಸ್ಮಾರಕದ ಮೇಲೆ ಮತ್ತು ಒಳ ಆವರಣವನ್ನು ಸ್ವಚ್ಛಗೊಳಿಸಿದರು.

Leave a Reply

Your email address will not be published. Required fields are marked *