ಅಕ್ಟೋಬರ್ 13 ರಂದು ನಡೆಯಬೇಕಿದ್ದ ಮದಕರಿನಾಯಕ ಜಯಂತಿಯನ್ನು ಅಕ್ಟೋಬರ್ 26 ರಂದು ನಡೆಸಲು ಜಿಲ್ಲಾ ವಾಲ್ಮೀಕಿ ಸಮಾಜ ತೀರ್ಮಾನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಅ. 10 : ಅಕ್ಟೋಬರ್ 13 ರಂದು ನಡೆಯಬೇಕಿದ್ದ ಮದಕರಿನಾಯಕ ಜಯಂತಿಯನ್ನು ನಮ್ಮ ಸಮುದಾಯದ ಶ್ರೀಗಳು ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಂತಿಯನ್ನು ಅಕ್ಟೋಬರ್ 26 ರ ಭಾನುವಾರ ನಡೆಸಲು ಚಿತ್ರದುರ್ಗ ಜಿಲ್ಲಾ ವಾಲ್ಮೀಕಿ ಸಮಾಜದ ತೀರ್ಮಾನಿಸಿದೆ ಎಂದು ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವು ಅಕ್ಟೋಬರ್ 13 ರಂದೇ ಮದಕರಿ ನಾಯಕರ ಜಯಂತಿಯನ್ನು ಆಚರಿಸಿಕೊಂಡ ಬರಲಾಗುತ್ತಿತ್ತು ಆದರಂತೆ ಈ ವರ್ಷವು ಸಹಾ ಅಚರಣೆ ಮಾಡಲು ಸಕಲ ಸಿದ್ದತೆಗಳನ್ನು ನಡೆಸಲಾಗಿತ್ತು. ಆದರೆ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಜಯಂತಿ ಆಚರಣೆಗೆ ಮೆರುಗು ತುಂಬುವುದಿಲ್ಲ ಎಂಬ ಕಾರಣಕ್ಕೆ ಜಯಂತಿಯನ್ನು ಮುಂದೂಡಲಾಗಿದೆ ಎಂದರು.

ಬೇರೆ ಜನಾಂಗದಲ್ಲಿ ಹಲವಾರು ಸ್ವಾಮೀಜಿಗಳು ಇದ್ದಾರೆ ಆದರೆ ವಾಲ್ಮೀಕಿ ಸಮಾಜದಲ್ಲಿ ಒಬ್ಬರು ಮಾತ್ರ ಶ್ರೀಗಳು ಇದ್ದು ಅವರನ್ನು ಬಿಟ್ಟು ಕಾರ್ಯಕ್ರಮ ಮಾqಲು ಸಾಧ್ಯವಿಲ್ಲ. ಜಯಂತಿ ಆಚರಣೆಗೆ ವಿವಿಧ ಮಠಾಧೀಶರು ಆಗಮಿಸುವುದಾಗಿ ತಿಳಿಸಿದ್ದರು, ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಂತಿಯನ್ನು 26 ಕ್ಕೆ ಮುಂದುಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಲಿಂಗವ್ವನಾಗತಿ ಹಳ್ಳಿ ತಿಪ್ಪೇಸ್ವಾಮಿ, ಎ.ಟಿ.ತಿಪ್ಪೇಸ್ವಾಮಿ, ಪ್ರಶಾಂತ್ ನಾಯಕ್, ಬಸವರಾಜ್,
ಬಿ.ಮಂಜಿನಾಥ್, ಗುಡುದೇಶ್ವರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *