
ಬೆಂಗಳೂರು : ನಟ ನಂದಮೂರಿ ತಾರಕರತ್ನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 48 ಗಂಟೆಗಳ ತಪಾಸಣೆ (Observation) ಮುಗಿದಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನದ ನಂತರ ತಾರಕರತ್ನ ಆರೋಗ್ಯ ಸ್ಥಿತಿ ಕುರಿತು ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ.
ಕುಂಪ್ಪಂ ನಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಂತರ ಅವರನ್ನು ಬೆಂಗಳೂರಿನ
ನಾರಾಯಣ ಹೃದಯಾಲಯದ ವೈದ್ಯರ ತಂಡವು ಚಿಕಿತ್ಸೆ ಮುಂದುವರೆಸಿದೆ. ಆದರೆ, ಇಂದಿನ ವೈದ್ಯಕೀಯ ಪರೀಕ್ಷೆಗಳು ನಿರ್ಣಾಯಕ. ಅವರು ಇಂದು ಎಂಆರ್ಐ (MRI) ಸ್ಕ್ಯಾನ್ ಮಾಡಲಿದ್ದಾರೆ. ಇದರ ಆಧಾರದ ಮೇಲೆ ಚಿಕಿತ್ಸೆಯನ್ನು ಮುಂದುವರಿಸಲಾಗುವುದು.
ಆರೋಗ್ಯ ಸಚಿವ ಸುಧಾಕರ್ ಅವರು ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಅವರ ಹೃದಯ ಬಡಿತ ಸಾಮಾನ್ಯವಾಗಿದೆ ಆದರೆ ಅವರ ಮೆದುಳಿನ ಕಾರ್ಯವು ಸರಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಹೃದಯಾಘಾತವಾದ ನಂತರ 30 ನಿಮಿಷಗಳ ಕಾಲ ರಕ್ತ ಸಂಚಾರ ಸ್ಥಗಿತಗೊಂಡಿದ್ದರಿಂದ ಮೆದುಳಿನ ಕಾರ್ಯಚಟುವಟಿಕೆಗೆ ತೊಂದರೆಯಾಗಿರುವುದು ಪರೀಕ್ಷೆಗಳ ಮೂಲಕ ಪತ್ತೆಯಾಗಿದೆ ಎಂದರು.
The post ನಂದಮೂರಿ ತಾರಕರತ್ನ Health update ; ಆರೋಗ್ಯ ಸ್ಥಿರ, ಮುಂದುವರಿದ ಚಿಕಿತ್ಸೆ first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/6vnNsbV
via IFTTT