ವಾಲ್ಮೀಕಿ ಧ್ವನಿ ವತಿಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ನಗದು ಬಹುಮಾನ ಘೋಷಣೆ

ಸಮಗ್ರ ಸುದ್ದಿ ಚಿತ್ರದುರ್ಗ ಮೇ. 11 
ವಾಲ್ಮೀಕಿ ಧ್ವನಿ ಪತ್ರಿಕೆಯ ವತಿಯಿಂದ 16ನೇ ವರ್ಷದ 77 ಪಾಳೆಗಾರರ ನೆನಪಿನೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಬಿರ್ಸಾಮುಂಡ ಜಿಲ್ಲಾ ಸಂಘದ ಉದ್ಘಾಟನೆಯೂ ಮೇ. 22ರ ಶುಕ್ರವಾರ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಾಲ್ಮೀಕಿ ಧ್ವನಿ ಪತ್ರಿಕೆಯ ಸಂಪಾದಕರಾದ ಸೊಂಡೆಕೆರೆ ಶಿವಣ್ಣ ತಿಳಿಸಿದ್ದಾರೆ. 


ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ, ನಮ್ಮ ಸಮುದಾಯದ ಮಕ್ಕಳಿಗೆ  ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ. 2025-2026 ನೇ ಸಾಲಿನಲ್ಲಿ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚಿನ ಅಂಕ ಪಡೆದ ನಾಯಕ ಸಮುದಾಯದ ವಿದ್ಯಾರ್ಥಿ / ವಿದ್ಯಾರ್ಥಿನಿಯರು ತಮ್ಮ ಅಂಕಪಟ್ಟಿ ಮತ್ತು ಮೊಬೈಲ್ ನಂಬರ್‍ನ್ನು ಈ ಕೆಳಗೆ ತೋರಿಸಿದ ದೂರವಾಣಿಗಳಿಗೆ ವಾಟ್ಸಪ್ ಮೂಲಕ ಮತ್ತು ನೇರವಾಗಿ ದಾಖಲೆಗಳನ್ನು ದಿನಾಂಕ:08-05-2026 ರೊಳಗೆ ತಲುಪಿಸಲು ಕೋರಿದೆ.


ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕಪಡೆದ ಒಬ್ಬ ವಿದ್ಯಾರ್ಥಿಗೆ ಲ್ಯಾಪ್‍ಟಾಪ್, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಒಬ್ಬೊಬ್ಬ ವಿದ್ಯಾರ್ಥಿಗೆ 10.000/- ಪ್ರೋತ್ಸಾಹ ಧನ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾರ್ಥಿಗೆ ರೂ11,000/-ಪ್ರೋತ್ಸಾಹ ಧನವನ್ನು ನೀಡಲಾಗುವುದು.

ಈ ಕಾರ್ಯಕ್ರಮಕ್ಕೆ ಶ್ರೀ ವಾಲ್ಮೀಕಿ ಮಠದ ಪ್ರಸನ್ನನಂದ ಪುರಿಸ್ವಾಮಿಜಿಗಳು, ಸಚಿವರಾದ ಸತೀಶ್ ಜಾರಕಿಹೊಳಿ, ಡಿ.ಸುಧಾಕರ್, ಮಾಜಿ ಸಚಿವರಾದ ಶ್ರೀರಾಮುಲು, ಸಂಸದರಾದ ಪ್ರಿಯಾಂಕ ಜಾರಕಿಹೊಳಿ, ಗೋವಿಂದ ಕಾರಜೋಳ, ರಾಯಚೂರು ಕುಲಪತಿಗಳಾದ ಹನುಮಂತಪ್ಪ ಸೇರಿದಂತೆ ಇತರೆ ರಾಜಕೀಯ ಮುಖಂಡರು ಸಮಾಜದ ಬಾಂಧವರು ಭಾಗವಹಿಸಲಿದ್ದಾರೆ. 


2025-2026 ನೇ ಸಾಲಿನಲ್ಲಿ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದ ಜಿಲ್ಲೆಯ ನಾಯಕ ಸಮುದಾಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರು 7676030224,  9620906209, 9449065644,8880757640 ಈ ದೂರವಾಣಿಗಳಿಗೆ ತಮ್ಮ ಅಂಕಪಟ್ಟಿ ಮತ್ತು ಮೊಬೈಲ್ ನಂಬರ್‍ನ್ನು ಕಳುಹಿಸಿಕೊಡಲು ಮನವಿ ಮಾಡಲಾಗಿದೆ. 


ಗೋಷ್ಟಿಯಲ್ಲಿ ಬೋರಯ್ಯ, ದೊಡ್ಡಉಳ್ಳಾರ್ತಿ, ಗೌರೀಶ್, ಗೋವಿಂದರಾಜು ಶಿವಮೂರ್ತಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *