ಚಿತ್ರದುರ್ಗ: ಆಯುಷ್ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘ (ರಿ.), ಚಿತ್ರದುರ್ಗ ವತಿಯಿಂದ “ದ್ವಿತೀಯೋತ್ಸವ ಕಾರ್ಯಕ್ರಮ”ವನ್ನು ಮೇ 24ರಂದು ಆಯೋಜಿಸಲಾಗಿದೆ.
ನಗರದ ಶ್ರೀ ಮುರುಘಾ ಮಠ ಆವರಣದಲ್ಲಿ ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಯೋಗ ಸಾಧಕರು, ಶಿಕ್ಷಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಬಸವ ಮುರಘಾ ಶಿವಯೋಗಿ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಪ್ರಸನ್ನ ಕುಮಾರ್ ಬಿ.ಆರ್. ಅವರು ನಿರ್ವಹಿಸಲಿದ್ದಾರೆ. ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಯೋಗಾಚಾರ್ಯೆ ದಿವ್ಯಾ ನಾಗರಾಜ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಪದಾಧಿಕಾರಿಗಳಾಗಿ ಆಯುಷ್ ಯೋಗ ಶಿಕ್ಷಣ ಸಂಘದ ಪ್ರಮುಖರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಯೋಗ ಸಾಧನೆ, ಆರೋಗ್ಯ ಜಾಗೃತಿ ಮತ್ತು ಸಮಾಜಮುಖಿ ಚಟುವಟಿಕೆಗಳ ಕುರಿತು ವಿಶೇಷ ಸಂದೇಶ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖರು:
- ಶ್ರೀ ಎಂ.ಆರ್. ಮುಜಾನಾಫ್ – ಉಪಾಧ್ಯಕ್ಷರು
- ಶ್ರೀ ಸತೀಶ್ ಆರ್.ಪಿ – ಉಪಾಧ್ಯಕ್ಷರು
- ಶ್ರೀ ವೀರ್ಣ – ಗೌರವಾಧ್ಯಕ್ಷರು
- ಶ್ರೀ ನೀಲಮ್ಮ – ಮಹಿಳಾ ಅಧ್ಯಕ್ಷರು
- ಶ್ರೀ ಲಿಂಗರಾಜ್ ಸಿ.ಎಂ – ನಿರ್ದೇಶಕರು
- ಶ್ರೀ ಎಲ್.ಎನ್ ಬಸವರಾಜ್ – ಪ್ರಧಾನ ಕಾರ್ಯದರ್ಶಿ
- ಶ್ರೀ ಲೋಕೇಶ್ ಎಸ್ – ನಿರ್ದೇಶಕರು
- ಶ್ರೀ ಶಿವಕುಮಾರ್ ಎಸ್.ಕೆ – ನಿರ್ದೇಶಕರು
- ಶ್ರೀ ಕೃತಿಕ್ ಡಿ.ಪಿ – ಖಜಾಂಚಿ
- ಶ್ರೀ ರಾಮಾಂಜನೇಯಲು – ನಿರ್ದೇಶಕರು
ಸಂಘದ ವತಿಯಿಂದ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಮತ್ತು ಆರೋಗ್ಯ ಜಾಗೃತಿಯ ಸಂದೇಶವನ್ನು ಸ್ವೀಕರಿಸುವಂತೆ ಯೋಗ ಸಂಸ್ಥೆಯ ಕಾರ್ಯದರ್ಶಿಗಳಾದ ಎಲ್.ಎಸ್. ಬಸವರಾಜ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.