ಮತಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡುತ್ತಿದೆ: ಬಿ.ವೈ. ವಿಜಯೇಂದ್ರ ಆರೋಪ.

ಚಿತ್ರದುರ್ಗ ಜು. 08

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕಾಂಗ್ರೆಸ್ ಅಧಿಕಾರ ದುರ್ಬಳಕೆ ರಾಜ್ಯದಲ್ಲಿ ಮತಪರಿಷ್ಕರಣೆ ನಡೆಯುತ್ತಿದೆ ರಾಜ್ಯ ಕಾಂಗ್ರೆಸ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಕೈ ಹಾಕಿದೆಅಧಿಕಾರಿಗಳ ದುರ್ಬಳಕೆ ಮಸೀದಿಗಳಲ್ಲಿ ಎಸ್‍ಐಅರ್ ನಡೆಯುತ್ತಿದೆ ತಪ್ಪು ಮುಚ್ಚಲು ಆಯೋಗ ದೂರುವುದು ಸರಿಯಲ್ಲ ಮಾನ ಮಾರ್ಯಾದೆ ಇದ್ರೆ ಚುನಾವಣಾ ಆಯೋಗಕ್ಕೆ ಸಹಕಾರ ನೀಡಲಿ ಎಂದು ರಾಜ್ಯ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಕಾಂಗ್ರೆಸ್ ಪಕ್ಷಕ್ಕೆ ಸವಾಲ್ ಹಾಕಿದ್ದಾರೆ.

ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ಜಿಲ್ಲೆ ಘಟಕದವತಿಯಿಂದ ನಗರದ ಸ್ಟೇಡಿಯಂ ರಸ್ತೆಯಲ್ಲಿನ ಜಿ ಜಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವ ಸಿದ್ದತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗ ರಾಜ್ಯದಲ್ಲಿ ಎಸ್.ಐ.ಆರ್‍ನಡೆಯುತ್ತಿದೆ ಇದನ್ನು ಕೇಂದ್ರ ಸರ್ಕಾರ ನಡೆಸುತ್ತಿಲ್ಲ ಇದನ್ನು ನಡೆಸುತ್ತಿರುವುದು ಚುನಾವಣಾ ಆಯೋಗ ಆದರೆ ಇದನ್ನು ತಿಳಿಯದ ಕಾಂಗ್ರೆಸ್ ಸರ್ಕಾರ ವಿನಾಕಾರಣ ಇದನ್ನು ವಿರೋಧ ಮಾಡುತ್ತಿದೆ, ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿ ಕೊಳ್ಳುತ್ತಿದೆ, ಅಧಿಕಾರವನ್ನು ದುರ್ಬಳಕೆ ಆಗುತ್ತಿದೆ, 20 ವರ್ಷಗಳ ನಂತರ ಇದು ನಡೆಯುತ್ತಿದೆ ಇದಕ್ಕೆ ಎಲ್ಲರು ಸಹಾ ಸಹಕಾರವನ್ನು ನೀಡಬೇಕಿದೆ, ನಮ್ಮ ಪಕ್ಷದ ಬಿಎಲ್‍ಎಗಳು ಇದರ ಬಗ್ಗೆ ಗಮನ ನೀಡಿ ಮತದಾರರಿಗೆ ಸಹಕಾರವನ್ನು ನೀಡಿ ಯಾವ ಮತದಾರರು ಸಹಾ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿ, ದೇಶದಲ್ಲಿ ಮತದಾರರ ಮತ ಪಟ್ಟಿ ಪರಿಷ್ಕರಣೆ ನಡೆಯುವಂತೆ ರಾಜ್ಯದಲ್ಲೂ ನಡೆಯುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಕೈ ಹಾಕಿದೆ ಒತ್ತಡ ಹೇರುವುದು, ಅಧಿಕಾರಿಗಳ ದುರ್ಬಳಕೆ ಮತ್ತು ಮಸೀದಿಗಳಲ್ಲಿ ಎಸ್‍ಐಅರ್ ನಡೆಸುತ್ತಿದೆ.ತಮ್ಮ ತಪ್ಪು ಮುಚ್ಚಿಹಾಕಲು ಚುನವಾಣಾ ಆಯೋಗ ದೂರುವುದು ಸರಿಯಲ್ಲ. ಕಾಂಗ್ರೆಸ್‍ಗೆ ಮಾನ ಮರ್ಯಾದೆ ಇದ್ದರೆ, ಸಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗದ ಮೇಲೆ ವಿಶ್ವಾಸವಿಟ್ಟು ಸಹಕಾರ ನೀಡಬೇಕು ಮತ ಪರಿಷ್ಕರಣೆ ಚುನಾವಣಾ ಆಯೋಗ ತೆಗೆದುಕೊಂಡ ನಿರ್ಣಯ ಅದಕ್ಕೆ ಕಾಂಗ್ರೆಸ್ ಸರ್ಕಾರ ಕಲ್ಲಾಕುತ್ತಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗು ಕಾಂಗ್ರೆಸ್‍ಗೆ ತಾಕತ್ತಿದ್ದರೆ, ಸೋನಿಯಾ ರಾಹುಲ್ ಅವರ ರಾಜೀನಾಮೆ ಮೊದಲು ಪಡೆಯಬೇಕೆಂದು ನ್ಯಾಷನಲ್ ಹೆರಾಲ್ಡ್‍ನ ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದಿದ್ದಾರೆ.ಅದು ಬಿಟ್ಟು ಮೋದಿ ಅವರ ರಾಜೀನಾಮೆ ಕೇಳುತ್ತಿದ್ದಾರೆ.ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ನೈತಿಕತೆ ಇದ್ದರೆ, ಮೊದಲು ರಾಹುಲ್ ಗಾಂಧಿ ರಾಜೀನಾಮೆ ಪಡೆಯಿರಿ,ಕಾಂಗ್ರೆಸ್ ನವರು ಶ್ರೀರಾಮ ಟ್ರಸ್ಟ್ ನಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಆದರೆ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣವನ್ನು ಯಾಕೆ ಸಿಬಿಐಗೆ ಕೊಡಲಿಲ್ಲ.ಈಗ ಸಿಬಿಐ ನೆನಪಾಗಿದೆ. ಈಗಾಗಲೇ ಯೋಗಿ ಅದಿತ್ಯನಾಥ್ ಅವರು ತಡ ಮಾಡದೆ ಎಸ್‍ಐಟಿ ರಚಿಸಿ ತನಿಖೆ ಆರಂಭಿಸಿದ್ದಾರೆ ಎಂದರು.

ಇನ್ನು ರಾಜ್ಯದಲ್ಲಿ ಮೂರು ವರ್ಷಗಳಿಂದ ಹಿಂದುಗಳ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ನಡೆಯುತ್ತಿದೆ. ಅಂತವರಿಗೆ ಜೈಲಿಗೆ ಹಾಕಿ ಬಿರಿಯಾನಿ ತಿನ್ನಿಸೋದು ಬಿಟ್ಟು,ಅವರನ್ನು ಶಾಶ್ವತವಾಗಿ ಜೈಲಿಗಟ್ಟುವ ತಾಕತ್ತಿದಿಯಾ ಎಂದು ಪ್ರಶ್ನಿಸಿದರು.ಹಿಂದೂಗಳು ಮೇಲೆ ದೌರ್ಜನ್ಯ ಎಸಗುತ್ತಿರುವವರ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿಲ್ಲ, ಬಿಜೆಪಿ ಅಲ್ಪ ಸಂಖ್ಯಾತರ ವಿರೋಧಿಯಲ್ಲ, ಆದರೆ ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ನೋಡಿ ಸುಮ್ಮನೆ ಕೂರಲ್ಲ.ನರಸತ್ತ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನ ಪಾಠ ಕಲಿಸಬೇಕಿದೆ.ರಾಜ್ಯದಲ್ಲಿ ಬೊಗಳೆ ಹೊಡ್ಕೊಂಡು ಗ್ಯಾರಂಟಿಗಳ ನೆಪದಲ್ಲಿ ರಾಜ್ಯವನ್ನು ಅರಾಜಕತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ.ಮೆರೆಯುತ್ತಿರುವ ಕಾಂಗ್ರೆಸ್ ಜೋರಾಗಿ ಉರಿಯುತ್ತಿರುವ ದೀಪದಂತ ಪರಿಸ್ಥಿತಿಯಲ್ಲಿದೆ.ಕಾಂಗ್ರೆಸ್ ಆಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನ್ನು ಶಾಶ್ವತವಾಗಿ ಮನೆಯಲ್ಲಿ ಕೂರಿಸುತ್ತಾರೆ ಎಂದು ಭವಿಷ್ಯ ನುಡಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮಹತ್ತರ ಜವಾಬ್ದಾರಿ ರಾಜ್ಯ ಸರ್ಕಾರಕ್ಕಿದೆ. ಆದರೆ ಕಳೆದ ಮೂರು ವರ್ಷಗಳಿಂದ ನೆರೆ ಬಂದಾಗಲೂ ರೈತರ ಸಹಾಯಕ್ಕೆ ಕಾಂಗ್ರೆಸ್ ಸರ್ಕಾರ ಬರಲಿಲ್ಲ. ಬರ ಬಂದಾಗಲೂ ಕಾಂಗ್ರೆಸ್ ಸರ್ಕಾರ ಪರಿಹಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರವನ್ನು ದೂರುವುದು ಬಿಟ್ಟರೆ ಏನು ಮಾಡುತ್ತಿಲ್ಲ. ಕೇವಲ ಮೊಸಳೆ ಕಣ್ಣೀರು ಹಾಕುತ್ತಾರೋ ಅಥವ ಸಹಾಯ ಮಾಡುತ್ತಾರೋ ಬರುವ ದಿನಗಳಲ್ಲಿ ನೋಡುತ್ತೇವೆ. ಸದನದಲ್ಲಿ ಚರ್ಚೆ ಮಾಡುತ್ತೇವೆಂದರು.

ಸಭೆಯಲ್ಲಿ ಶಾಸಕರಾದ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಿವಯೋಗಿ ಸ್ವಾಮಿ, ಜಿಲ್ಲಾ ಆಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಮುಖಂಡರುಗಳಾದ ಎನ್.ಆರ್.ಲಕ್ಷ್ಮೀಕಾಂತ, ರಾಜಣ್ಣ, ಅನಿಲ್ ವಿಭಾಗ ಸಹಾ ಪ್ರಭಾರಿ ಎ.ಮುರಳಿ, ಆಗ್ನೇಯ ಚುನಾವಣಾ ಸಹಾ ಪ್ರಭಾರಿ ರಘುಚಂದನ್, ಉಪಾಧ್ಯಕ್ಷರಾದ ಡಾ.ಸಿದ್ಧಾರ್ಥ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದ, ಮಾಧುರಿ ಗೀರೀಶ್, ಮೋಹನ್ ಕುಮಾರ್, ಕೇಶವ ಪ್ರಸಾದ್, ಕಾಡುಗೊಲ್ಲ ಸಂಘದ ರಾಜ್ಯಧ್ಯಕ್ಷರಾದ ರಾಜಣ್ಣ, ರಾಮದಾಸ್, ನಗರಾಧ್ಯಕ್ಷ ಲೋಕೇಶ್ ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಪಕ್ಷದ ಅಗ್ನೇಯ ಪದವೀಧರ ಕ್ಷೇತ್ರ ಅಭ್ಯರ್ಥಿ ಕೆ.ಎಂ.ಸುರೇಶ್ ಸೇರಿದಂತೆ ಭಾರತೀಯ ಜನತಾ ಪಾರ್ಟಿಯ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿದಿಗಳು, ಜಿಲ್ಲೆಯ ಎಲ್ಲಾ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾ ಅಧ್ಯಕ್ಷರು ಸೇರಿದಂತೆ ಸರ್ವ ಪದಾಧಿ ಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *