Entertainment: ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ಹಾಗೂ ಈ ಹಿಂದೆ ಪವರ್ ಟಿವಿಯಲ್ಲಿ ಪ್ರಸಾರವಾಗಿ ಭಾರಿ ಜನಪ್ರಿಯತೆ ಪಡೆದಿದ್ದ ಹೈ ವೋಲ್ಟೇಜ್ ರಿಯಾಲಿಟಿ ಶೋ ‘ಹಳ್ಳಿ ಪವರ್’ ಈಗ ಹೊಸ ರೂಪದಲ್ಲಿ ಮರಳುತ್ತಿದೆ. ಹೌದು, ‘ಹಳ್ಳಿ ಪವರ್ ರಿಲೋಡೆಡ್’ ಎಂಬ ಹೊಸ ಹೆಸರಿನೊಂದಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಈ ಕಾರ್ಯಕ್ರಮ ಸಂಪೂರ್ಣವಾಗಿ ಸಜ್ಜಾಗಿದೆ. ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಈ ಕಾರ್ಯಕ್ರಮದ ಸಾರಥ್ಯ ವಹಿಸಲಿದ್ದು, ಇದೀಗ ಆಡಿಷನ್ ಪ್ರಕ್ರಿಯೆಗಳು ಅಧಿಕೃತವಾಗಿ ಶುರುವಾಗಿವೆ.

ಸಿಟಿ ಹುಡುಗಿಯರಿಗೆ ಹಳ್ಳಿ ಸವಾಲು!
ಈ ಬಾರಿಯ ಶೋ ವಿಶೇಷವಾಗಿ ನಗರ ಪ್ರದೇಶದ ಯುವತಿಯರನ್ನು ಕೇಂದ್ರವಾಗಿಟ್ಟುಕೊಂಡು ಮೂಡಿಬರಲಿದೆ. “ಮಾಡರ್ನ್ ಸಿಟಿ ಹುಡುಗಿರೆಲ್ಲಾ ಹಳ್ಳಿಗೆ ಬರೋಕೆ ರೆಡಿನಾ?” ಎಂಬ ಕುತೂಹಲಕಾರಿ ಟ್ಯಾಗ್‌ಲೈನ್‌ನೊಂದಿಗೆ ಆಡಿಷನ್ ಕರೆಯಲಾಗಿದೆ. ನಗರದ ಹೈ-ಫೈ ಜೀವನದಲ್ಲಿ ಬೆಳೆದ ಮಾಡರ್ನ್ ಹುಡುಗಿಯರು ಹಳ್ಳಿಯ ವಾತಾವರಣ, ಅಲ್ಲಿನ ಜೀವನಶೈಲಿ ಮತ್ತು ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ಈ ಬಾರಿಯ ಕಾರ್ಯಕ್ರಮದ ಪ್ರಮುಖ ಹೈಲೈಟ್.
https://www.instagram.com/p/DZ4x1YPTBp-/?igsh=MXUzMGxvZDNjdGdieQ==
ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಇರುವ ಯುವತಿಯರಿಗೆ 18 ರಿಂದ 28 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಆಡಿಷನ್ ಎಲ್ಲಿ? ಯಾವಾಗ?
- ದಿನಾಂಕ ಮತ್ತು ಸಮಯ: ಜೂನ್ 27 (ಶನಿವಾರ), ಬೆಳಗ್ಗೆ 9 ಗಂಟೆಗೆ.
- ಸ್ಥಳ: ಅಬ್ಬಯ್ಯ ನಾಯ್ಡು ಸ್ಟುಡಿಯೋ, ಚಿಕ್ಕಲ್ಲಸಂದ್ರ, ಬೆಂಗಳೂರು.
- ತರಬೇಕಾದ ದಾಖಲೆಗಳು: ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ವಿಳಾಸ ದೃಢೀಕರಣ ಪತ್ರದ (Address Proof) ಜೆರಾಕ್ಸ್.
- ಸಂಪರ್ಕ ಸಂಖ್ಯೆ: 9513134434 (ವಾಟ್ಸಾಪ್ ಮಾತ್ರ).
ಗಮನಿಸಿ:
ಸ್ಪರ್ಧಿಗಳು ತಮ್ಮ ಭಾವಚಿತ್ರ ಮತ್ತು ಸಂಪೂರ್ಣ ವಿವರಗಳನ್ನು ಮೇಲಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದು. ಆದರೆ ಈ ಸಂಖ್ಯೆಗೆ ಯಾವುದೇ ಕರೆಗಳನ್ನು ಮಾಡುವಂತಿಲ್ಲ. ಜೀ ವಾಹಿನಿಯ ಈ ಆಡಿಷನ್ ಸಂಪೂರ್ಣ ಉಚಿತವಾಗಿದ್ದು, ಯಾರಾದರೂ ವಾಹಿನಿಯ ಹೆಸರಿನಲ್ಲಿ ಹಣ ಕೇಳಿದರೆ ನೀಡಬೇಡಿ. ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾಹಿನಿ ಎಚ್ಚರಿಸಿದೆ.
ಹಿಂದಿನ ಸೀಸನ್ ಬೆಳಗಾವಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈ ಬಾರಿಯ ‘ಹಳ್ಳಿ ಪವರ್ ರಿಲೋಡೆಡ್’ ಶೋ ಯಾವ ಹಳ್ಳಿಯಲ್ಲಿ ನಡೆಯಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.