ಚಿತ್ರದುರ್ಗ: ಒನಕೆ ಓಬವ್ವ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಮಾದಾರ ಚನ್ನಯ್ಯ ಶ್ರೀಗಳಿಂದ ಚಾಲನೆ.

ಚಿತ್ರದುರ್ಗ ಜೂ. 26

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕøತಿಯಲ್ಲಿ ಹೆಸರಾಗಿದೆ, ಇದನ್ನು ಮತ್ತಷ್ಟು ಹೆಸರು ಮಾಡುವತ್ತ ನಾವುಗಳು ಮುಂದಾಗಬೇಕಿದೆ. ಮಾನವನಿಗೆ ಕ್ರೀಡೆ ಎನ್ನುವುದು ಬಹಳ ಮುಖ್ಯವಾಗಿದೆ, ಉತ್ತಮವಾದ ಆರೋಗ್ಯವನ್ನು ಪಡೆಯಲು ಕ್ರೀಡೆ, ವ್ಯಾಯಾಮ ಮುಖ್ಯವಾಗಿದೆ ಎಂದು ಶ್ರೀ ಮಾದಾರ ಗುರು ಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು. 

ಚಿತ್ರದುರ್ಗ ನಗರದ ಶ್ರೀ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಚಿತ್ರದುರ್ಗ ಕ್ರಿಕೆಟ್ ಕ್ಲಬ್(ರಿ). ಮತ್ತು ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್(ರಿ). ವತಿಯಿಂದ ಇಂದಿನಿಂದ ಜುಲೈ 5ರವರೆಗೆ ನಡೆಯಲಿರುವ ಒನಕೆ ಓಬವ್ವ ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‍ನ ಪಂದ್ಯಾವಳಿಯ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕ್ರೀಡೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ, ಸೋತವರು ಮುಂದಿನ ಪಂದ್ಯಾವಳಿಯಲ್ಲಿ ಗೆಲುವನ್ನು ಸಾಧಿಸಲು ತಯಾರಾಗಬೇಕಿದೆ ಅದೇ ರೀತಿ ಗೆದ್ದವರು ಸಹಾ ಬೀಗದೇ ಮತ್ತಷ್ಟು ಪಂದ್ಯಗಳನ್ನು ಗೆಲಲ್ಲು ಅಭ್ಯಾಸವನ್ನು ಮಾಡುವುದರ ನಿರಂತರಾಗಬೇಕಿದೆ, ಚಿತ್ರದುರ್ಗದಲ್ಲಿ ಒಂದಲ್ಲ ಒಂದು ಕ್ರೀಡೆಗಳು ನಡೆಯುತ್ತಿರುತ್ತವೆ, ಹಳೇ ಮಾದ್ಯಮಿಕ ಶಾಲಾ ಆವರಣದಲ್ಲಿ ನಿರಂತರವಾಗಿ ಕ್ರೀಡೆಗಳು ನಡೆಯುತ್ತಿರುತ್ತವೆ ನಮ್ಮ ಮಠವೂ ಸಹಾ ಕ್ರೀಡೆಗೆ ಪ್ರೋತ್ಸಾಹವನ್ನು ನೀಡುತ್ತದೆ ನಮ್ಮಲ್ಲಿನ ಕ್ರೀಡಾ ಪಟುಗಳು ಚನ್ನಾಗಿ ಅಭ್ಯಾಸವನ್ನು ಮಾಡಿ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಆಟವನ್ನು ಆಡುವುದರ ಮೂಲಕ ಚಿತ್ರದುರ್ಗಕ್ಕೆ ಹೆಸರನ್ನು ತರಬೇಕೆಂದು ತಿಳಿಸಿದರು. 

ಚಿತ್ರದುರ್ಗ ಜಿಲ್ಲೆ ತನ್ನದ ಆದ ಇತಿಹಾಸವನ್ನು ಹೊಂದಿದೆ ಇಲ್ಲಿ ಕಲೆ, ಸಂಗೀತ, ಸಾಹಿತ್ಯ, ಸಂಸ್ಕøತಿ, ಕ್ರೀಡೆ, ಬುಡಕಟ್ಟು ಸಂಪ್ರದಾಯವನ್ನು ಹೊಂದಿದೆ, ಇಲ್ಲಿ ಎಲ್ಲದಕ್ಕೂ ಸಹಾ ಪ್ರೋತ್ಸಾಹ ನೀಡುವಂತ ದಾನಿಗಳು ಇದ್ದಾರೆ ಇವರ ಮೂಲಕ ಇವುಗಳನ್ನು ಬೆಳಸಬೇಕಿದೆ, ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಹೊಂದಬಹುದಾಗಿದೆ, ಮಾನವನು ತನ್ನ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕಿದೆ ಅದು ಯಾವ ಕ್ಷೇತ್ರದಲ್ಲಿ ಆದರೂ ಸಹಾ ನಡೆಯುತ್ತದೆ. ಯೋಗ,ಧ್ಯಾನ, ಕ್ರೀಡೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಶ್ರೀಗಳು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಕೀಲರು, ಕಾಂಗ್ರೆಸ್ ಮುಖಂಡರು ಒನಕೆ ಓಬವ್ವ ಕಪ್‍ನ ಅಧ್ಯಕ್ಷರಾದ ಜಿ.ಎಸ್ ಕುಮಾರ್‍ಗೌಡ ಮಾತನಾಡಿ, ಚಿತ್ರದುರ್ಗ ಕ್ರಿಕೆಟ್ ಕ್ಲಬ್(ರಿ). ಮತ್ತು ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್(ರಿ).ವತಿಯಿಂದ ಕಳೇದ ಹಲವಾರು ವರ್ಷಗಳಿಂದ ನಿರಂತರವಾಗಿ ಈ ರೀತಿಯಾದ ಪಂದ್ಯಾವಳಿಗಳನ್ನು ನಡೆಸುತ್ತಾ ಬರಲಾಗಿದೆ, ಇಂದಿನ ಯುವ ಪೀಳಿಗೆ ಬರಿ ಅಭ್ಯಾಸ ಮಾಡುವುದಲ್ಲಿ ನಿರಂತರಾಗದೇ ಕ್ರೀಡೆಯಲ್ಲಿ ಭಾಗವಹಿಸಿ ಆಡುವುದರ ಮೂಲಕ ದೇಹ ಹಾಗೂ ಮನಸ್ಸನ್ನು ಹಿಡಿತದಲ್ಲಿ ಇಟ್ಟು ಕೊಳ್ಳಬಹುದಾಗಿದೆ, ಇದರಿಂದ ನಿಮ್ಮ ಅಭ್ಯಾಸಕೂ ಸಹಾ ನೆರವಾಗಲಿದೆ ಎಂದರು.

ಚಿತ್ರದುರ್ಗ ಕ್ರಿಕೆಟ್ ಕ್ಲಬ್‍ನ ಕಾರ್ಯದರ್ಶಿ ಆಶೋಕ್, ಸರ್ಕಾರಿ ವಿಜ್ಞಾನ ಕಾಲೇಜಿನ  ಪ್ರಾಚಾರ್ಯರಾದ ರವಿಕಾಂತ,  ಚಿತ್ರದುರ್ಗ ಕ್ರಿಕೆಟ್ ಕ್ಲಬ್‍ನ ಅಧ್ಯಕ್ಷರಾದ ರಮೇಶ್.ಟಿ, ಅಂತರಾಷ್ಟ್ರೀಯ ಕ್ರೀಡಾಪಟು ಎನ್.ಡಿ.ಕುಮಾರ್, ನಗರಸಭೆಯ ಮಾಜಿ ಅಧ್ಯಕ್ಷರಾದ ನಿರಂಜನ ಮೂರ್ತಿ, ಹಿರಿಯ ಆಟಗಾರರಾದ ಭಾಸ್ಕರ್, ರವಿಕುಮಾರ್, ಖಾನ್, ತಿಪ್ಪೇರುದ್ರಸ್ವಾಮಿ, ಅರ್ಜುನ, ಕಮಲ್ ಯಾದವ್, ಮಲ್ಲಿಕಾರ್ಜನ್ ಗುರು ಮೂರ್ತಿ, ಪೈಲಟ್ ನಾಗರಾಜ್, ವಿಜಯಕುಮಾರ್ ಮಂಜುನಾಥ್ ಗುಪ್ತ, ಸೇರಿದಂತೆ ಇತರರು ಭಾಗವಹಿಸಿ ದ್ದರು. 

ಈ ಪಂದ್ಯಾವಳಿಗೆ ಒಳ್ಳಾರಿ, ಚಿತ್ರದುರ್ಗ, ತುಮಕೂರು, ಸಾಗರ, ಹೊಸದುರ್ಗ, ಬೆಂಗಳೂರು ಕಡೆಗಳಿಂದ ತಂಡಗಳು ಆಗಮಿಸಿದ್ದವು. 

Leave a Reply

Your email address will not be published. Required fields are marked *