Daily Horoscope,11 July 2026: ಶನಿವಾರದಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ.

ಇಂದು ಶನಿವಾರ, ಶಾಲಿವಾಹನ ಶಕವರ್ಷ 1949, ಪರಾಭವ ನಾಮ ಸಂವತ್ಸರದ ಉತ್ತರಾಯಣ, ಗ್ರೀಷ್ಮ ಋತುವಿನ ನಿಜ ಜ್ಯೇಷ್ಠ ಮಾಸ. ಕೃಷ್ಣ ಪಕ್ಷದ ದ್ವಾದಶೀ ತಿಥಿಯ ಈ ದಿನದಂದು ಕೆಲವು ರಾಶಿಗಳಿಗೆ ಆರ್ಥಿಕ ಲಾಭವಾದರೆ, ಇನ್ನು ಕೆಲವರಿಗೆ ಅನಗತ್ಯ ಗೊಂದಲಗಳು ಎದುರಾಗಲಿವೆ. ಹಾಗಾದರೆ ನಿಮ್ಮ ರಾಶಿಯ ಇಂದಿನ ಭವಿಷ್ಯವೇನು? ಶುಭಾಶುಭಗಳ ಸಂಪೂರ್ಣ ವಿವರ ಇಲ್ಲಿದೆ.

ಇಂದಿನ ಪಂಚಾಂಗ:

  • ಸೌರ ಮಾಸ: ಮಿಥುನ
  • ಮಹಾನಕ್ಷತ್ರ: ಪುನರ್ವಸು
  • ನಿತ್ಯನಕ್ಷತ್ರ: ರೋಹಿಣೀ
  • ಯೋಗ: ಶೂಲಿ | ಕರಣ: ಬಾಲವ
  • ಸೂರ್ಯೋದಯ: ಬೆಳಿಗ್ಗೆ 06:01 | ಸೂರ್ಯಾಸ್ತ: ಸಂಜೆ 06:49
  • ರಾಹು ಕಾಲ: ಬೆಳಿಗ್ಗೆ 09:13 ರಿಂದ 10:49 ರವರೆಗೆ
  • ಯಮಗಂಡ ಕಾಲ: ಮಧ್ಯಾಹ್ನ 02:01 ರಿಂದ 03:37 ರವರೆಗೆ
  • ಗುಳಿಕ ಕಾಲ: ಬೆಳಿಗ್ಗೆ 06:01 ರಿಂದ 07:37 ರವರೆಗೆ

ದ್ವಾದಶ ರಾಶಿಗಳ ಇಂದಿನ ಭವಿಷ್ಯ

ಮೇಷ ರಾಶಿ: ಹೊಸ ಆಲೋಚನೆಗಳು ನಿಮ್ಮಲ್ಲಿ ಉತ್ಸಾಹ ತುಂಬಲಿವೆ. ಆರ್ಥಿಕ ವಹಿವಾಟುಗಳಲ್ಲಿ ಎಚ್ಚರಿಕೆ ಹೆಜ್ಜೆ ಇಡುವುದು ಒಳಿತು. ಹಳೆಯ ಸಂಬಂಧಗಳನ್ನು ಮರುಜೋಡಿಸಲು ಇದು ಸಕಾಲ. ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ನಿಮ್ಮ ಕಾರ್ಯಗಳು ಸುಲಭವಾಗಲಿವೆ. ಆದರೆ, ಮಕ್ಕಳಿಂದ ಕಿರಿಕಿರಿ ಅಥವಾ ಅಪಹಾಸ್ಯ ಎದುರಿಸಬೇಕಾದೀತು. ಅಂದುಕೊಂಡ ಗುರಿ ಮುಟ್ಟುವವರೆಗೆ ಛಲ ಬಿಡದಿರಿ.

ವೃಷಭ ರಾಶಿ: ಆರ್ಥಿಕ ವಿಚಾರಗಳಲ್ಲಿ ಬೇರೆಯವರ ಸಹಾಯ ಹಸ್ತ ಚಾಚಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆ ಇದೆ. ಇಂದಿನ ನಿಮ್ಮ ಪ್ರಯಾಣ ತ್ರಾಸದಾಯಕವಾದರೂ, ಕೊನೆಯಲ್ಲಿ ನೆಮ್ಮದಿ ತರಲಿದೆ. ದೃಷ್ಟಿದೋಷದ ಚಿಂತೆ ಕಾಡಬಹುದು. ಹೊಸ ಮನೆ ಖರೀದಿಸುವ ಕುರಿತು ಸಂಗಾತಿಯೊಂದಿಗೆ ಮಹತ್ವದ ಚರ್ಚೆ ನಡೆಸುವಿರಿ.

ಮಿಥುನ ರಾಶಿ: ವಿದ್ಯಾಭ್ಯಾಸದಲ್ಲಿನ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಒಲಿಯಲಿದೆ. ಹಳೆಯ ವಸ್ತುಗಳ ಮಾರಾಟದಿಂದ ಲಾಭ ಗಳಿಸುವಿರಿ. ಹಣಕಾಸು ಹೂಡಿಕೆ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ಜೀವನ ಸಂಗಾತಿಯೊಂದಿಗೆ ಆಪ್ತವಾಗಿ ಕಾಲ ಕಳೆಯುವಿರಿ. ಆದರೆ ವ್ಯಾಪಾರ-ವ್ಯವಹಾರದಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪದಿಂದ ಪ್ರಗತಿ ಕುಂಠಿತವಾಗುವ ಲಕ್ಷಣಗಳಿವೆ.

ಕರ್ಕಾಟಕ ರಾಶಿ: ಅಪರಿಚಿತರ ವಾಹನದಲ್ಲಿ ಪ್ರಯಾಣಿಸುವ ಪ್ರಮೇಯ ಬರಬಹುದು. ದುಸ್ಸಾಹಸಕ್ಕೆ ಕೈಹಾಕದಿರುವುದು ಜಾಣತನ. ಆರ್ಥಿಕವಾಗಿ ಲಾಭ ಕಂಡರೂ ಮಾನಸಿಕ ನೆಮ್ಮದಿಯ ಕೊರತೆ ಕಾಡಲಿದೆ. ಆತಂಕದ ಮನಸ್ಥಿತಿಯಿಂದಾಗಿ ಕೆಲಸಗಳಲ್ಲಿ ಹಿಂದೇಟು ಹಾಕುವಿರಿ. ಕುಟುಂಬದವರ ಅತಿಯಾದ ಪ್ರೀತಿ ನಿಮ್ಮನ್ನು ಕಟ್ಟಿಹಾಕಿದಂತೆ ಭಾಸವಾಗಬಹುದು.

ಸಿಂಹ ರಾಶಿ: ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರಿ. ಕೆಲಸದಲ್ಲಿ ತಾಳ್ಮೆ ಮತ್ತು ಸಾವಧಾನತೆ ಇರಲಿದೆ. ಯಶಸ್ಸಿನ ಹಂಬಲ ತೀವ್ರವಾಗಿರುತ್ತದೆ. ಆದರೆ, ಸರ್ಕಾರಿ ಸೌಲಭ್ಯಗಳು ಕೈತಪ್ಪುವ ಸಾಧ್ಯತೆ ಇದೆ. ನೀವು ಕಣ್ಣಾರೆ ಕಂಡದ್ದೆಲ್ಲವೂ ಸತ್ಯವಾಗಿರುವುದಿಲ್ಲ, ಹಾಗಾಗಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.

ಕನ್ಯಾ ರಾಶಿ: ಕೆಲವು ಅನಿರೀಕ್ಷಿತ ಕಾರಣಗಳಿಂದಾಗಿ ನಿಮ್ಮ ಕಾರ್ಯಸಾಧನೆಯಲ್ಲಿ ವಿಳಂಬವಾಗಬಹುದು. ದಿನವಿಡೀ ಸಂತೋಷದಿಂದ ಕಳೆಯಲು ಯೋಜನೆ ರೂಪಿಸುವಿರಿ. ಅರ್ಧಕ್ಕೆ ನಿಂತಿದ್ದ ಗೃಹ ನಿರ್ಮಾಣ ಕಾರ್ಯ ಮರುಚಾಲನೆ ಪಡೆಯಲಿದೆ. ದೈವಬಲದ ಮೇಲೆ ನಂಬಿಕೆಯಿಟ್ಟು ನಿಮ್ಮ ಪ್ರಯತ್ನವನ್ನು ಮುಂದುವರಿಸಿ, ಯಶಸ್ಸು ಖಂಡಿತ.

ತುಲಾ ರಾಶಿ: ಬೆಳಗ್ಗೆ ಸುಗಮವಾಗಿ ಆರಂಭವಾದ ಕೆಲಸಗಳು ಸಂಜೆಯ ವೇಳೆಗೆ ಗೊಂದಲ ಸೃಷ್ಟಿಸಬಹುದು. ಅತಿಯಾದ ಆಶಾವಾದ ನಿಮ್ಮನ್ನು ವಂಚನೆಗೆ ದೂಡುವ ಅಪಾಯವಿದೆ. ನಿಮ್ಮವರೇ ಬೆನ್ನಿಗೆ ಚೂರಿ ಹಾಕುವ ಸಾಧ್ಯತೆ ಇರುವುದರಿಂದ ಎಚ್ಚರವಿರಲಿ. ಹಿನ್ನಡೆಯಾದರೂ ಛಲ ಬಿಡದೆ ಮುನ್ನಡೆಯುವುದು ಇಂದಿನ ಅನಿವಾರ್ಯತೆ.

ವೃಶ್ಚಿಕ ರಾಶಿ: ಯಾವುದೇ ಹೊಸ ಜವಾಬ್ದಾರಿ ಹೊರುವ ಮುನ್ನ ನಿಮ್ಮ ಮೇಲಿನ ಒತ್ತಡವನ್ನು ಅರಿತುಕೊಳ್ಳಿ. ಸಂಗಾತಿಯ ಕಡೆಯಿಂದ ನಿರೀಕ್ಷಿತ ಕಾಳಜಿ ಸಿಗದಿರುವುದು ಬೇಸರ ತರಿಸಬಹುದು. ಗಣ್ಯರ ಒಡನಾಟದಿಂದ ನಿಮ್ಮ ಜೀವನದಲ್ಲಿ ಹೊಸ ತಿರುವು ಸಿಗಲಿದೆ. ಅತಿಯಾದ ಆತ್ಮವಿಶ್ವಾಸದ ಬದಲು ವಿವೇಚನೆಯಿಂದ ಹೆಜ್ಜೆ ಇಡುವುದು ಉತ್ತಮ.

ಧನು ರಾಶಿ: ಸಂಗಾತಿಯೊಂದಿಗೆ ಅನ್ಯೋನ್ಯತೆ ಹೆಚ್ಚಲಿದೆ. ಕಟ್ಟುನಿಟ್ಟಿನ ಜೀವನಶೈಲಿಯಿಂದ ಕೊಂಚ ಹೊರಬರಲು ಪ್ರಯತ್ನಿಸುವಿರಿ. ಮೇಲಧಿಕಾರಿಗಳ ಮುಂದೆ ಅಸಮರ್ಪಕ ವರ್ತನೆ ತೋರುವ ಸಾಧ್ಯತೆ ಇದೆ, ಎಚ್ಚರವಿರಲಿ. ಉತ್ತಮ ಭೂಲಾಭದ ನಿರೀಕ್ಷೆ ಮಾಡಬಹುದು. ತೆರಿಗೆ ವಿಚಾರದಲ್ಲಿ ನಿಮಗೆ ಆರ್ಥಿಕ ಲಾಭವಾಗಲಿದೆ.

ಮಕರ ರಾಶಿ: ಹಿರಿಯರ ಸಲಹೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಹೊಸ ಸ್ಥಳಗಳ ಭೇಟಿಯಿಂದ ನಿಮ್ಮ ಉತ್ಸಾಹ ಇಮ್ಮಡಿಯಾಗಲಿದೆ. ವಿದೇಶ ಪ್ರಯಾಣಕ್ಕೆ ಸಿದ್ಧತೆ ನಡೆಸುವಿರಿ. ಸ್ನೇಹಿತರ ನೆರವಿನಿಂದ ಸ್ಥಿರಾಸ್ತಿ ಖರೀದಿಸುವ ಯೋಗವಿದೆ. ವಿವಾಹ ಆಕಾಂಕ್ಷಿಗಳಿಗೆ ಸೂಕ್ತ ಸಂಬಂಧ ಕೂಡಿಬರಲಿದೆ.

ಕುಂಭ ರಾಶಿ: ಕೆಲಸದ ಜಂಜಾಟದಿಂದ ಬಿಡುವು ಪಡೆದು ಕುಟುಂಬದೊಂದಿಗೆ ಕಾಲ ಕಳೆಯುವಿರಿ. ಮಕ್ಕಳ ಮೇಲಿನ ಖರ್ಚು ವ್ಯರ್ಥವೆನಿಸಬಹುದು. ಹಿಂದೊಮ್ಮೆ ಮಾಡಿದ ಸಹಾಯಕ್ಕೆ ಇಂದು ತಕ್ಕ ಪ್ರತಿಫಲ ಸಿಗಲಿದೆ. ಅನಗತ್ಯ ತಿರುಗಾಟ ಸುಸ್ತು ಮಾಡಬಹುದು. ಇತರರನ್ನು ನಿಂದಿಸುವ ಅಭ್ಯಾಸ ಬಿಡುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರಲಿದೆ.

ಮೀನ ರಾಶಿ: ವೃತ್ತಿಜೀವನದ ಹೊಸ ಸವಾಲುಗಳಿಗೆ ಸಿದ್ಧತೆ ಮಾಡಿಕೊಳ್ಳುವಿರಿ. ಹೊಸ ಪರಿಚಯಸ್ಥರೊಂದಿಗೆ ಒಡನಾಡುವಾಗ ಎಚ್ಚರವಿರಲಿ. ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ಶೀಘ್ರದಲ್ಲೇ ಶುಭ ಸಮಾಚಾರವೊಂದು ಕಿವಿಗೆ ಬೀಳಲಿದೆ. ಇಂದಿನ ಬದಲಾವಣೆಗಳನ್ನು ಮುಕ್ತವಾಗಿ ಮತ್ತು ಸಂತೋಷದಿಂದ ಸ್ವೀಕರಿಸಿ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *