ವಿದ್ಯಾದಾಯಿನಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರತಿಭೆಗಳಿಗೆ ಗೌರವ, ವಿದ್ಯಾರ್ಥಿ ವೇದಿಕೆಗೆ ಚಾಲನೆ.

ಚಿತ್ರದುರ್ಗ ನಗರದ ವಿದ್ಯಾನಗರದಲ್ಲಿ ಇರುವ ವಿದ್ಯಾದಾಯಿನಿ ಪಬ್ಲಿಕ್ ಸ್ಕೂಲ್ ನಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ವಿದ್ಯಾರ್ಥಿ ವೇದಿಕೆ ಯ ಉದ್ಘಾಟನೆ ಸಮಾರಂಭ ದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಡಾ. ಗೋಪಾಲ್ ಮಾತನಾಡುತ್ತ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಯಗೆ ಬೇಕಾದ ಎಲ್ಲಾ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಇಂದಿನಿಂದ ಪ್ರಾರಂಭವಾಗುತ್ತವೆ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ಸಹದಿಂದ ಭಾಗವಹಿಸಿ ಎಂದರು.

ಶಾಲೆಯಲ್ಲಿ ಉಚಿತವಾಗಿ ನೀಡುವ ಅಬಕಸ್, ಸ್ಪೋಕನ್ ಇಂಗ್ಲಿಷ್, ಸಂಜೆಯ ವಿಶೇಷ ತರಗತಿಗಳ ಬಗ್ಗೆ ಮಾಹಿತಿ ನೀಡಿದರು. 2025 26 ನೇ ಸಾಲಿನಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ಪ್ರತಿ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಪದಕ ಮತ್ತು ಪ್ರಶಸ್ತಿ ಪತ್ರದೊಂದಿಗೆ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀಮತಿ ಸುನೀತ ಮಲ್ಲಿಕಾರ್ಜುನ, ಮಾಜಿ ನಗರಸಭೆ ಅಧ್ಯಕ್ಷರು ಭಾಗವಹಿಸಿ ಮಕ್ಕಳಿಗೆ ಹಿತ ವಚನ ಹೇಳಿದರು. ಶ್ರೀಮತಿ ಜ್ಯೋತಿ ದೇವೇಂದ್ರಪ್ಪ ಮಾಜಿ ಗ್ರಾಮ ಪಂಚಾಯತ್ ಅದ್ಯಕ್ಷರು ಮದಕರಿಪುರ ಇವರು ಸಾಧಕರಿಗೆ ಬಹುಮಾನ ವಿತರಣೆ ಮಾಡಿದರು. ಮುಖ್ಯ ಅಥಿತಿಗಳು ಶಾಲೆಯಲ್ಲಿ ನೂತನವಾಗಿ ಪ್ರಾರಂಭವಾದ ಗ್ರಂಥಾಲಯ, ವಿಜ್ಞಾನದ ಲ್ಯಾಬ್, ಕ್ರೀಡಾ ಕೊಠಡಿ, ಕಂಪ್ಯೂಟರ್ ಲ್ಯಾಬ್ ಕೊಠಡಿಗಳನ್ನು ಉದ್ಘಾಟನೆ ಮಾಡಲಾಯಿತು

ಶ್ರೀಮತಿ ವನಜಾಕ್ಷಿ ಸದಸ್ಯರು ಮೇದೇಹಳ್ಳಿ ಗ್ರಾಮಪಂಚಾಯಿತಿ,ಶಾಲೆಯ ಅಧ್ಯಕ್ಷರು ಶ್ರೀಮತಿ ವಿಜಯಲಕ್ಷ್ಮಿ, ನಿರ್ದೇಶಕರಾದ ಶ್ರೀಮತಿ ಸರೋಜಮ್ಮ, ಶ್ರೀ ರಾಮಪ್ಪ, ಶಾಲೆಯ ಸಿಈಓ ನಾಗರಾಜ್. ಬಿ, ಮುಖ್ಯೋಪಾಧ್ಯಾರಾದ ಪ್ರತೀಕ್. ಜಿ, ಮತ್ತು ಜಮೀರುಲ್ಲಾ, ಶಾಲೆಯ ಎಲ್ಲಾ ಶಿಕ್ಷಕರು, ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *